Video : ಸೈಕಲ್ ಸವಾರನನ್ನು ಕಂಡು ಭಯಬಿದ್ದ ಕರಡಿ
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವುದೃಶ್ಯಗಳನ್ನು ಕಂಡಾಗ ಪ್ರಾಣಿಗಳು ಕೂಡ ಮನುಷ್ಯರಿಗೆ ಹೆದರುತ್ತದೆಯೇ ಎಂದೆನಿಸುತ್ತದೆ. ಇದೀಗ ವ್ಯಕ್ತಿಯೊಬ್ಬನು ಕಾಡಿನ ಮಧ್ಯೆ ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಕರಡಿಯೊಂದು ಅಡ್ಡಬಂದಿದ್ದು, ಮುಂದೇನಾಯ್ತು ಎಂದು ತಿಳಿದರೆ ನಿಮಗೆ ನಂಬಲು ಕಷ್ಟವಾಗುತ್ತದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಈ ರೀತಿಯೂ ಆಗುತ್ತಾ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಕಾಡು ಪ್ರಾಣಿಗಳು ಈ ಮನುಷ್ಯರು ಸೇರಿದಂತೆ ಪ್ರಾಣಿಗಳ ಮೇಲೆ ದಾಳಿ ಮಾಡುವ ಸುದ್ದಿಗಳನ್ನು ನೀವು ದಿನನಿತ್ಯ ಕೇಳುತ್ತೀರಿ. ಆದರೆ ಯಾವ ಪ್ರಾಣಿಯ ದಾಳಿಯನ್ನು ಬೇಕಾದರೂ ಸಹಿಸಿಕೊಳ್ಳಬಹುದು. ಆದರೆ ಕರಡಿ (bear) ದಾಳಿಯೂ ಮಾತ್ರ ಅಷ್ಟೇ ಭಯಾನಕವಾಗಿರುತ್ತದೆ. ತನ್ನ ಚೂಪಾದ ಉಗುರುಗಳಿಂದ ಮುಖಕ್ಕೆ ಪರಚಿದರೆ ಕಥೆ ಮುಗಿದೇ ಹೋಯಿತು. ಹೀಗಿರುವಾಗ ಈ ಕರಡಿಗಳು ಮನುಷ್ಯರನ್ನು ಕಂಡು ಓಡುವುದನ್ನು ನೀವು ಎಂದಾದರೂ ನೋಡಿದ್ದೀರಾ. ಆದರೆ ಇದೀಗ ಸೈಕಲ್ ಸವಾರರ (Cycle rider) ನ್ನು ಕಂಡು ಭಯಬಿದ್ದ ಕರಡಿಯೊಂದು ಅಲ್ಲಿಂದ ಓಟಕ್ಕಿತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ.
Amazing nature ಹೆಸರಿನ ಖಾತೆಯಲ್ಲಿ ಈ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅತೀ ವೇಗವಾಗಿ ಬಂದ ಸೈಕಲ್ ಸವಾರನ ಮುಂದೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಆದರೆ, ಈ ಕರಡಿಯೂ ಸವಾರರನ್ನು ಕಂಡ ತಕ್ಷಣವೇ ಭಯಬಿದ್ದು ಅಲ್ಲಿಂದ ಓಡಿಹೋಗುತ್ತಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ :Video : ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್‌ಗೆ ಎಂಟ್ರಿ ಕೊಟ್ಟ ಗಜರಾಜ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ
If black, fight back
If brown, lay down
If white, good night pic.twitter.com/4HA6DnDuiC
— Nature is Amazing ☘️ (@AMAZlNGNATURE) June 5, 2025
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಜೂನ್ 5 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು 3.5 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಬಳಕೆದಾರರೊಬ್ಬರು, ಕಪ್ಪು ಕರಡಿಗಳು ವಾಸ್ತವವಾಗಿ ಕೆಲವು ಜನರನ್ನು ಮುಜುಗರಕ್ಕೀಡು ಮಾಡುವುದಿದೆ. ಬಹುಷಃ ಅವುಗಳು ಪ್ರತಿದಾಳಿ ಮಾಡುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು, ದಟ್ಟ ಕಾಡಿನ ನಡುವೆ ರೈಡ್ ಮಾಡುವಾಗ ಎಚ್ಚರ ವಹಿಸಬೇಕು. ಕಾಡು ಪ್ರಾಣಿಗಳು ಕಾಣಸಿಗುತ್ತವೆ, ಈ ಬಗ್ಗೆ ಅರಿವಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಕಾಡು ಪ್ರಾಣಿಗಳ ವಾಸಸ್ಥಾನದ ಕಡೆಗೆ ಹೋಗುವುದು ಎಷ್ಟು ಸರಿ, ಅವುಗಳಿಗೂ ಕೂಡ ಭಯ ಇದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








