AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಅಮೇರಿಕಾದ ಕಟ್ಟಡ ಕಾರ್ಮಿಕರಿಗೆ ಬಿಸಿ ಬಿಸಿ ವಡೆ-ಚಟ್ನಿ ನೀಡಿದ ಭಾರತೀಯ ಮಹಿಳೆ

ವಿದೇಶಿಗರು ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿನ ಅಡುಗೆ, ಆಹಾರ ಪದ್ಧತಿಯನ್ನು ಸಹಜವಾಗಿಯೇ ಇಷ್ಟ ಪಡುತ್ತಾರೆ. ಇಲ್ಲಿನ ರುಚಿಕರವಾದ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ವಿದೇಶಿಗರು ಸವಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯ ಮಹಿಳೆಯೊಬ್ಬರು ಅಮೇರಿಕಾದ ಕಟ್ಟಡ ಕಾರ್ಮಿಕರಿಗೆ ಬಿಸಿ ಬಿಸಿ ವಡೆ-ಚಟ್ನಿ ಮಾಡಿ ಸವಿಯಲು ನೀಡಿದ್ದು ಈ ರುಚಿಗೆ ವಿದೇಶಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

Video : ಅಮೇರಿಕಾದ ಕಟ್ಟಡ ಕಾರ್ಮಿಕರಿಗೆ ಬಿಸಿ ಬಿಸಿ ವಡೆ-ಚಟ್ನಿ ನೀಡಿದ ಭಾರತೀಯ ಮಹಿಳೆ
ವೈರಲ್ ವಿಡಿಯೋ Image Credit source: Instagram
ಸಾಯಿನಂದಾ
|

Updated on: Jun 06, 2025 | 6:01 PM

Share

ಭಾರತೀಯರ ಆಹಾರ ಪದ್ಧತಿ (food system) ಗೆ ಹೋಲಿಸಿದ್ರೆ ವಿದೇಶಿ ಆಹಾರ ಪದ್ಧತಿಯೂ ತುಂಬಾನೇ ವಿಭಿನ್ನ. ಆದರೆ ರುಚಿರುಚಿಯಾಗಿ ಅಡುಗೆ ಮಾಡಿ ಉಣಬಡಿಸುವುದರಲ್ಲಿ ಭಾರತೀಯ ಮಹಿಳೆಯರು ಎತ್ತಿದ ಕೈ. ಅಷ್ಟೇ ಯಾಕೆ, ಮನೆಗೆ ಯಾರು ಎಷ್ಟೋತ್ತಿಗೆಯೇ ಬರಲಿ, ಪ್ರೀತಿಯಿಂದ ಅಡುಗೆ ಮಾಡಿ ಮನೆಗೆ ಬಂದ ಅತಿಥಿಗಳನ್ನು ಖುಷಿ ಪಡಿಸುತ್ತಾರೆ. ಹೀಗಾಗಿ ಅತಿಥಿಗಳನ್ನು ಸತ್ಕಾರಿಸುವ ರೀತಿ, ಅಡುಗೆ ಉಣಬಡಿಸುವ ರೀತಿಯೇ ಹೇಳುತ್ತೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಎಂತಹದ್ದು ಎಂದು. ಇದೀಗ ಅಮೇರಿಕಾ (America) ದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೂ ಅಲ್ಲಿನ ಕಟ್ಟಡ ಕಾರ್ಮಿಕರಿ (construction workers) ಗೆ ತಮ್ಮ ಕೈಯಾರೆ ಮಾಡಿದ ತಿನಿಸನ್ನು ನೀಡಿದ್ದು, ಈ ಮಹಿಳೆಯ ಕೈರುಚಿಗೆ ಫುಲ್ ಫಿದಾ ಆಗಿದ್ದಾರೆ. ಹೌದು ಕಟ್ಟಡ ಕಾರ್ಮಿಕರು ಬಿಸಿ ಬಿಸಿ ವಡೆಯನ್ನು ಚಟ್ನಿಯೊಂದಿಗೆ ಸವಿದು ಖುಷಿ ಪಟ್ಟಿದ್ದು, ಸೋಶಿಯಲ್‌ ಮೀಡಿಯಾ (social media) ದಲ್ಲಿ ವೈರಲ್‌ ಆಗಿದೆ.

Brunt.india ಹೆಸರಿನ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೂ ತಮ್ಮ ಮನೆಗೆ ಬಂದ ಸೀಲ್‌ಕೋಟಿಂಗ್ ಕಂಪನಿಯ ಕೆಲಸಗಾರರಿಗೆ ವಡೆ ಹಾಗೂ ಚಟ್ನಿಯನ್ನು ಸವಿಯಲು ನೀಡಿರುವುದನ್ನು ನೋಡಬಹುದು. ಇದನ್ನು ಕೈಯಾರೆ ಒಬ್ಬ ಕೆಲಸಗಾರನು ಧನ್ಯವಾದಗಳು, ಏನಿದು ಎಂದು ಕೇಳಿದ್ದಾನೆ. ಅದಕ್ಕೆ ಮಹಿಳೆಯೂ ಇದು ವಡಾ, ಸ್ವೀಟ್ ಇಲ್ಲ, ಸ್ಪೈಸಿಯಾಗಿದೆ ಎಂದು ಎಂದಿದ್ದಾಳೆ. ಆ ಬಳಿಕ ಇಬ್ಬರೂ ಕೂಡ ಡಾವನ್ನು ಚಟ್ನಿಯೊಂದಿಗೆ ಸವಿದು ಸ್ಪೈಸಿ ಸ್ಪೈಸಿ ಎನ್ನುವ ಮೂಲಕ ಭಾರತೀಯ ತಿನಿಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ನಳಿನ್​​​ ಕುಮಾರ್​​ ಕಟೀಲ್‌ಗೆ ಥ್ಯಾಂಕ್ಸ್​​​​ ಹೇಳಿ : ಪ್ರತಾಪ್​​​ ಸಿಂಹ
Image
ಕಾಲೇಜ್ ಬಂಕ್ ಮಾಡಿ ಗಲ್ಲಿಯಲ್ಲಿ ರೊಮ್ಯಾನ್ಸ್ ಮಾಡ್ತಾ ನಿಂತ ಸ್ಟೂಡೆಂಟ್
Image
ಯುವತಿಯ ಎರಡು ಆಫರ್ ರಿಜೆಕ್ಟ್ ಮಾಡಿದ ಯುವಕ
Image
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ

ಇದನ್ನೂ ಓದಿ : Video: ಬಾರ್‌ಕೋಡ್‌ ತೋರಿಸಿ ಪ್ರಯಾಣಿಕರಿಂದ ಟಿಪ್ ಪಡೆಯುತ್ತಿರುವ ಅಡುಗೆ ಸಿಬ್ಬಂದಿ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Brut India (@brut.india)

ಈ ವಿಡಿಯೋವೊಂದು 31 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆಗಳು ವ್ಯಕ್ತವಾಗಿದೆ. ಬಳಕೆದಾರರು, ಈ ರೀತಿ ಉಪಚಾರ ಭಾರತದಲ್ಲಿ ಕಾಣಸಿಗುವುದು ಸರ್ವೇ ಸಾಮಾನ್ಯ ಎಂದಿದ್ದಾರೆ. ಇನ್ನೊಬ್ಬರು, ಅದ್ಭುತ ನನಗೆ ಈಗ ವಡಾ ಸವಿಯಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ವಿದೇಶದಲ್ಲಿ ನೆಲೆಸಿದ್ದರೂ ತಮ್ಮ ಆಚಾರ, ವಿಚಾರ ಸಂಸ್ಕೃತಿ ಹಾಗೂ ಅತಿಥಿಗಳನ್ನು ಸತ್ಕಾರಿಸುವ ರೀತಿಯನ್ನು ಮರೆಯುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ