Video : ಈ ಕುಟುಂಬಕ್ಕೆ 56 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ, ಪುಟ್ಟ ಲಕ್ಷ್ಮಿಗೆ ಅದ್ದೂರಿ ಸ್ವಾಗತ
ಮನೆಗೆ ಪುಟ್ಟ ಮಗುವು ಬರುತ್ತದೆಯೇ ಎಂದರೆ ಆ ಮನೆ ಮಂದಿಯ ಮುಖದಲ್ಲಿ ಸಂತೋಷವು ಎದ್ದು ಕಾಣುತ್ತದೆ. ಹೌದು, ಹೊಸ ಅತಿಥಿಯ ಆಗಮನಕ್ಕಾಗಿ ಸಿದ್ಧತೆಯೂ ಅಷ್ಟೇ ಜೋರಾಗಿಯೇ ನಡೆಯುತ್ತದೆ. ಆದರೆ ಇದೀಗ ಕುಟುಂಬವೊಂದು 56 ವರ್ಷಗಳ ಬಳಿಕ ಹುಟ್ಟಿದ ಹೆಣ್ಣು ಮಗುವಿನ ಆಗಮನವೊಂದನ್ನು ಸಂಭ್ರಮಿಸಿದ್ದು ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದು ಕೊಂಡಿದೆ.

ಮನೆಗೆ ಮಗು (child) ವಿನ ಆಗಮನವಾಗುತ್ತದೆಯೆಂದರೆ ಆ ಖುಷಿಯೇ ಬೇರೆ. ಹೆಣ್ಣಿರಲಿ ಗಂಡಿರಲಿ ಮಗು ಆರೋಗ್ಯವಂತವಾಗಿದ್ದರೆ ಸಾಕು ಎನ್ನುತ್ತಾರೆ. ಮನೆಗೆ ಹೊಸ ಅತಿಥಿಯ ಆಗಮನವಾಗುತ್ತಿದ್ದಂತೆ ಅದನ್ನು ಬರಮಾಡಿಕೊಳ್ಳಲು ವಿಭಿನ್ನವಾಗಿ ತಯಾರಿ ನಡೆಸುತ್ತಿರುವುದನ್ನು ನೀವು ನೋಡಿರಬಹುದು. ಆದರೆ ಈ ಕುಟುಂಬದಲ್ಲಿ ಸರಿಸುಮಾರು 56 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಹುಟ್ಟಿದೆ. ತಮ್ಮ ಕುಟುಂಬಕ್ಕೆ ಪುಟ್ಟ ಲಕ್ಷ್ಮಿ ಎಂಟ್ರಿ ಕೊಡುತ್ತಿದ್ದಂತೆ ಮನೆ ಮಂದಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಮುದ್ದಾದ ಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸಿರುವ ಕುಟುಂಬವು ಅದ್ದೂರಿಯಾಗಿ ಮನೆಗೆ ಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು ಬಳಕೆದಾರರು ಈ ಮನೆ ಮಂದಿಯ ಖುಷಿ ಕಂಡು ತಾವು ಕೂಡ ಖುಷಿ ಪಟ್ಟಿದ್ದಾರೆ.
dr.chahatrawal ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಮನೆಗೆ ಹೆಣ್ಣು ಮಗುವನ್ನು ಬರಮಾಡಿಕೊಳ್ಳಲು ಏನೆಲ್ಲಾ ತಯಾರಿ ನಡೆಸಿರುವುದು ಹಾಗೂ ಕುಟುಂಬ ಸದಸ್ಯರು ಹೆಣ್ಣು ಮಗುವನ್ನು ಪ್ರೀತಿಯಿಂದ ಸ್ವಾಗತಿಸಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಪಿಂಕ್ ಹಾಗೂ ಬಿಳಿ ಬಣ್ಣದ ಬಲೂನ್ ಗಳಿಂದ ಅಲಂಕಾರಗೊಂಡಿರುವ ಕಾರಿನಲ್ಲಿ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿದೆ. ಅದರ ಈ ಕಾರಿನ ಹಿಂಭಾಗದಲ್ಲಿ ಅಲಂಕಾರಗೊಂಡಿರುವ ಸಾಲು ಸಾಲು ಕಾರುಗಳು ಬರುತ್ತಿರುವುದನ್ನು ಕಾಣಬಹುದು.
ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ಹಾಗೂ ಮನೆಯ ಮುಂಭಾಗದಲ್ಲಿ ಬಲೂನ್‌ನಿಂದ ಕಾಮಾನುಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿರುವುದು ನೀವು ನೋಡಬಹುದು. ಮನೆಯ ಒಳಭಾಗದಲ್ಲಿ ನೆಲದ ಮೇಲೆ ಹೂವಿನ ದಳಗಳಿಂದ ವೆಲ್ಕಮ್ ಬೇಬಿ ಎಂದು ಬರೆಯಲಾಗಿದೆ. ಮನೆಯ ಸದಸ್ಯರೊಬ್ಬರು ಮಗುವಿಗೆ ಆರತಿ ಬೆಳಗಿದ್ದಾರೆ. ಪುಟ್ಟ ಕಂದನ ಪುಟ್ಟಪಾದವನ್ನು ಕುಂಕುಮದ ನೀರಿನಲ್ಲಿ ಅದ್ದಿ ಬಿಳಿ ಟವೆಲ್ ಮೇಲೆ ಅಚ್ಚು ಒತ್ತಿದ್ದಾರೆ. ಅಷ್ಟೇ ಅಲ್ಲದೇ, ಪುಟ್ಟ ಪಾದದಿಂದ ಹೊಸ್ತಿಲನ್ನು ಇರಿಸಲಾದ ಅಕ್ಕಿ ಸೇರನ್ನು ಒದ್ದು ಮನೆಯೊಳಗೆ ಸ್ವಾಗತಿಸಿದ್ದಾರೆ. ಮನೆಯ ಒಳ ಭಾಗದಲ್ಲಿ ಪಿಂಕ್ ಹಾಗೂ ಬಿಳಿ ಬಣ್ಣದ ಬಲೂನ್ ಗಳಿಂದ ಅಲಂಕಾರ ಮಾಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಎಂಭತ್ತೇಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ಈ ಪುಟಾಣಿ ಈಗಾಗಲೇ ಕುಟುಂಬದ ಎಲ್ಲಾ ಸದಸ್ಯರ ಪ್ರೀತಿ ಹಾಗೂ ಗಮನವನ್ನು ಸೆಳೆದಿದೆ. ಇನ್ನೊಬ್ಬರು, ಪ್ರತಿಯೊಬ್ಬ ಹೆಣ್ಣು ಮಗುವು ಈ ರೀತಿ ಸ್ವಾಗತಿಸಿಕೊಳ್ಳಲು ಅರ್ಹಳಾಗಿರುತ್ತಾಳೆ. ಆದರೆ ಎಲ್ಲರೂ ನಿಮ್ಮ ಮಗುವಿನಂತೆ ಅದೃಷ್ಟವಂತೆ ಆಗಿರುವುದಿಲ್ಲ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ಅ ಪುಟ್ಟ ಲಕ್ಷ್ಮಿ ನಿಜಕ್ಕೂ ಒಳ್ಳೆಯ ಮನೆ, ಒಳ್ಳೆಯ ಜನರು ಹಾಗೂ ಒಳ್ಳೆಯ ತಂದೆತಾಯಿಯನ್ನು ಆರಿಸಿಕೊಂಡಿದ್ದಾಳೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








