Viral : ದೈತ್ಯಗಾತ್ರದ ಕಪ್ಪೆಯನ್ನು ನುಂಗಲು ಹೋದ ಹಾವು, ಮುಂದೇನಾಯ್ತು ನೋಡಿ
ಪ್ರಕೃತಿಯ ಆಹಾರ ಸರಪಳಿಯಲ್ಲಿ ಒಂದು ಜೀವಿ ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಇನ್ನೊಂದು ಜೀವಿಯನ್ನು ಅವಲಂಬಿಸಿರುತ್ತವೆ. ಈ ಆಹಾರಸರಪಳಿಯಲ್ಲಿ ಹಾವು ಕಪ್ಪೆಯನ್ನು ನುಂಗಿ ಹೊಟ್ಟೆ ತುಂಬಿಸಿಕೊಂಡು ಬದುಕುತ್ತವೆ. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ದೈತ್ಯಗಾತ್ರದ ಕಪ್ಪೆಯನ್ನು ನುಂಗಲು ಹೋಗಿ ಹಾವೊಂದು ಪಜೀತಿಗೆ ಸಿಲುಕಿಕೊಂಡಿದೆ. ಅಷ್ಟಕ್ಕೂ ಕಪ್ಪೆಯನ್ನು ಬೇಟೆಯಾಡಲು ಹೋದ ಹಾವಿಗೆ ಏನಾಯ್ತು ಗೊತ್ತಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಈ ಹಾವು (snake) ಗಳನ್ನು ಆಹಾರಕ್ಕಾಗಿ ಸಣ್ಣ ಪುಟ್ಟ ಜೀವಿಗಳನ್ನು ಬೇಟೆಯಾಡುವುದನ್ನು ನೋಡಿರಬಹುದು. ಸಾಮಾನ್ಯವಾಗಿ ಈ ಹಾವುಗಳು ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಕೋಳಿ, ಮೊಟ್ಟೆಯನ್ನು ನುಂಗುತ್ತವೆ. ಅದಲ್ಲದೇ ಈ ಹಾವುಗಳು ಕಪ್ಪೆಗಳನ್ನು ಬೇಟೆಯಾಡುವುದು ಸರ್ವೇ ಸಾಮಾನ್ಯ. ಹಾವು ಕಪ್ಪೆಯನ್ನು ನುಂಗಿದರೆ ಅಷ್ಟೇನು ಅಚ್ಚರಿ ಪಡಬೇಕಾದದ್ದು ಏನು ಇಲ್ಲ. ಆದರೆ ಹಾವೊಂದು ಕಪ್ಪೆಯನ್ನು ಬೇಟೆಯಾಡಲು ಹೋಗಿ ಸಾವನ್ನಪ್ಪಿದೆ. ಕಪ್ಪೆ (frog) ಯೂ ಹಾವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದು, ನುಂಗಲು ಆಗದೇ ಉಗುಳಲು ಆಗದೇ ಹಾವಿಗೆ ಉಸಿರುಗಟ್ಟಿದೆ. ಇದಕ್ಕೆ ಸಂಬಂಧ ಪಟ್ಟ ಫೋಟೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಈ ದೃಶ್ಯ ನೋಡಿ ಶಾಕ್ ಆಗಿದ್ದಾರೆ.
@Amazingnature ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಹಾವೊಂದು ದೈತ್ಯ ಗಾತ್ರದ ಕಪ್ಪೆಯನ್ನು ನುಂಗುತ್ತಿರುವುದನ್ನು ನೋಡಬಹುದು. ಕಪ್ಪೆಯೂ ದೈತ್ಯ ಗಾತ್ರದಲ್ಲಿದ್ದ ಕಾರಣ ನುಂಗಲು ಸಾಧ್ಯವಾಗಿಲ್ಲ. ಹಾವಿನ ಬಾಯಿಯಲ್ಲಿ ಸಿಲುಕಿಕೊಂಡಿದ್ದು ಹಾವು ಉಸಿರುಗಟ್ಟಿ ಸಾವನ್ನಪ್ಪಿದೆ. ಆದರೆ ಕಪ್ಪೆ ಮಾತ್ರ ಹಾವಿನ ಬಾಯಲ್ಲಿದ್ದರೂ ಜೀವಂತವಾಗಿದ್ದು ಈ ಫೋಟೋ ಮೈ ಜುಮ್ ಎನ್ನುವಂತಿದೆ.
ಇದನ್ನೂ ಓದಿ :Video: ರೀಲ್ಸ್ ಮಾಡಲು ಬಂದಾಕೆಗೆ ಜಾಡಿಸಿ ಒದ್ದ ಕುದುರೆ; ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ
Snake dies after trying to eat a Giant Plains toad, toad seems rather unimpressed pic.twitter.com/fdtOPghywW
— Nature is Amazing ☘️ (@AMAZlNGNATURE) June 13, 2025
ಈ ಪೋಸ್ಟ್ ವೊಂದು 1.5 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಇದರಿಂದ ನೀವು ಏನು ಪಾಠ ಕಲಿತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಕಪ್ಪೆ ದುರ್ಬಲ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹಾವನ್ನೇ ಯಾಮಾರಿಸಿ ಬಿಡುತ್ತವೆ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂದು ನೋಡಿಕೊಂಡು ಮುಂದಿನ ಕೆಲಸಕ್ಕೆ ಕೈ ಹಾಕಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








