Video: ಕೊಡೈಕೆನಾಲ್ನಲ್ಲಿ ಕರ್ನಾಟಕದವರೊಬ್ಬರ ಪರ್ಸ್ ಕದ್ದು ಕೋತಿ ಮಾಡಿದ್ದೇನು ನೋಡಿ
ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಎನ್ನುವ ಗಾದೆ ಇದೆ. ಅಂದ್ರೆ ಕೊಟ್ಟ ವಸ್ತುವಿನ ಬೆಲೆ ಗೊತ್ತಿರದಿದ್ದರೆ ಎಷ್ಟೇ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟರೂ ಪ್ರಯೋಜನವಿಲ್ಲ. ಹಾಗೆಯೇ ಕೋತಿಯೊಂದು ಕರ್ನಾಟಕದ ವ್ಯಕ್ತಿಯೊಬ್ಬರ ಪರ್ಸ್ ಕಿತ್ತುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬಳಿಕ ಆ ಕೋತಿ ಮರದ ಮೇಲೆ ಹತ್ತಿ ಕುಳಿತುಕೊಂಡು ಪರ್ಸ್ನಿಂದ 500ರೂ.ಗಳ ನೋಟನ್ನು ಕೈಯಲ್ಲಿ ಹಿಡಿದುಕೊಂಡು ಒಂದೊಂದಾಗೇ ಕೆಳಗೆ ಹಣದ ಮಳೆಯಂತೆ ಎಸೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಚೆನ್ನೈ, ಜೂನ್ 17: ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಎನ್ನುವ ಗಾದೆ ಇದೆ. ಅಂದ್ರೆ ಕೊಟ್ಟ ವಸ್ತುವಿನ ಬೆಲೆ ಗೊತ್ತಿರದಿದ್ದರೆ ಎಷ್ಟೇ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟರೂ ಪ್ರಯೋಜನವಿಲ್ಲ. ಹಾಗೆಯೇ ಕೋತಿಯೊಂದು ಕರ್ನಾಟಕದ ವ್ಯಕ್ತಿಯೊಬ್ಬರ ಪರ್ಸ್ ಕಿತ್ತುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬಳಿಕ ಆ ಕೋತಿ ಮರದ ಮೇಲೆ ಹತ್ತಿ ಕುಳಿತುಕೊಂಡು ಪರ್ಸ್ನಿಂದ 500ರೂ.ಗಳ ನೋಟನ್ನು ಕೈಯಲ್ಲಿ ಹಿಡಿದುಕೊಂಡು ಒಂದೊಂದಾಗೇ ಕೆಳಗೆ ನೋಟುಗಳನ್ನು ಎಸೆಯುತ್ತಿತ್ತು ಇದು ನಿಜವಾಗಿಯೂ ಹಣದ ಮಳೆಯಂತೆಯೇ ಕಾಣುತ್ತಿತ್ತು. ಈ ಘಟನೆ ತಮಿಳುನಾಡಿನ ಕೊಡೈಕೆನಾಲ್ನಲ್ಲಿ ನಡೆದಿದೆ. ಕೋತಿ ಹಣ ಜನರ ಕೈಯಲ್ಲಿದ್ದ ಸ್ನ್ಯಾಕ್ಸ್, ಮೊಬೈಲ್ ಫೋನ್, ಬ್ಯಾಗ್ಗಳನ್ನು ಕದ್ದೊಯ್ದಿತ್ತು. ಆದರೆ ಅದರಲ್ಲೇ ಒಂದು ಕೋತಿ ಪರ್ಸನ್ನೇ ಕದ್ದು ಹೋಗಿ ಎಲ್ಲಾ ದುಡ್ಡನ್ನೂ ಮೇಲಿನಿಂದ ಕೆಳಗೆ ಎಸೆದಿದೆ.
ವಿಡಿಯೋಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 17, 2025 10:10 AM