Video: ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಆಪರೇಷನ್ ಸಿಂಧೂರದ (Operation Sindoor) ಬಳಿಕ ಇದು ಪ್ರಧಾನಿಯವರ ಮೊದಲ ವಿದೇಶಿ ಪ್ರವಾಸವಾಗಿದೆ. ಖಲಿಸ್ತಾನಿ ಸಮಸ್ಯೆಯಿಂದಾಗಿ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಇದನ್ನು ಪುನರ್ ಸ್ಥಾಪಿಸಲು ಕೇಂದ್ರ ಪ್ರಯತ್ನಿಸುತ್ತಿದೆ.
ಕೆನಡಾ, ಜೂನ್ 17: ಪ್ರಧಾನಿ ನರೇಂದ್ರ ಮೋದಿ(Narendra Modi) ಸೈಪ್ರಸ್ ಭೇಟಿ ಮುಗಿಸಿ ಜಿ7 ಶೃಂಗಸಭೆಗಾಗಿ ಕೆನಡಾಗೆ ಬಂದಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಆಪರೇಷನ್ ಸಿಂಧೂರದ (Operation Sindoor) ಬಳಿಕ ಇದು ಪ್ರಧಾನಿಯವರ ಮೊದಲ ವಿದೇಶಿ ಪ್ರವಾಸವಾಗಿದೆ. ಖಲಿಸ್ತಾನಿ ಸಮಸ್ಯೆಯಿಂದಾಗಿ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಇದನ್ನು ಪುನರ್ ಸ್ಥಾಪಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಹಾಗಾಗಿ ಪ್ರಧಾನಿಯವರ ಈ ವಿದೇಶಿ ಪ್ರವಾಸದಲ್ಲಿ ಕೆನಡಾ ಭೇಟಿಯು ಮಹತ್ವದ್ದಾಗಿದೆ. ಶೃಂಗಸಭೆಯ ಸಮಯದಲ್ಲಿ, ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳಲ್ಲಿ ಭಾರತದ ನಿಲುವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ