ಮಂತ್ರಾಲಯ: ರಾಯರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಂಗಳವಾರ ಬೆಳ್ಳಂಬೆಳಗ್ಗೆಯೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು. ನಂತರ ಉತ್ಸವದಲ್ಲಿ ಭಾಗವಹಿಸಿ, ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಕೇಂದ್ರ ಸಚಿವರ ಮಂತ್ರಾಲಯ ಭೇಟಿಯ ವಿಡಿಯೋ ಇಲ್ಲಿದೆ ನೋಡಿ.
ರಾಯಚೂರು, ಜೂನ್ 17: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಬೆಳಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿದರು. ಮಂತ್ರಾಲಯ ಭೇಟಿ ಬಳಿಕ ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದರು. ನಂತರ ಉತ್ಸವ ಹಾಗೂ ರಾಯರ ಪಾದಪೂಜೆಯಲ್ಲಿ ಭಾಗಿಯಾದರು. ಶ್ರೀಮಠದ ರಥೋತ್ಸವದಲ್ಲಿಯೂ ಕೇಂದ್ರ ಸಚಿವರು ಭಾಗಿಯಾಗಿ, ರಥವನ್ನು ಎಳೆದು ಸೇವೆ ಸಲ್ಲಿಸಿದರು. ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಈ ವೇಳೆ, ಕೇಂದ್ರ ಸಚಿವ ಜೋಶಿ ಅವರನ್ನು ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು.