VIDEO: ರಣರೋಚಕ ಪಂದ್ಯ: ಒಂದೇ ಮ್ಯಾಚ್ನಲ್ಲಿ 3 ಸೂಪರ್ ಓವರ್
Netherlands vs Nepal, 2nd Match: ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 152 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ನೇಪಾಳ ಕೂಡ 20 ಓವರ್‌ಗಳಲ್ಲಿ 152 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದೆ.
ನೆದರ್ಲೆಂಡ್ಸ್ ಹಾಗೂ ನೇಪಾಳ ನಡುವಿನ 2ನೇ ಟಿ20 ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ನೆದರ್ಲೆಂಡ್ಸ್ನ ಟಿಟ್ವುಡ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 152 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ನೇಪಾಳ ಕೂಡ 20 ಓವರ್‌ಗಳಲ್ಲಿ 152 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದೆ. ಹೀಗಾಗಿ ಫಲಿತಾಂಶ ನಿರ್ಣಯಿಸಲು ಸೂಪರ್ ಓವರ್ ಮೊರೆ ಹೋಗಬೇಕಾಯಿತು.
ಮೊದಲ ಸೂಪರ್ ಓವರ್:
ಮೊದಲ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 6 ಎಸೆತಗಳಲ್ಲಿ 19 ರನ್ ಕಲೆಹಾಕಿದ್ದರು.
20 ರನ್ ಗಳ ಗುರಿ ಪಡೆದ ನೆದರ್ಲೆಂಡ್ಸ್ 6 ಎಸೆತಗಳಲ್ಲಿ 19 ರನ್ ಬಾರಿಸಿ ಸೂಪರ್ ಓವರ್ ಅನ್ನು ಟೈ ಮಾಡಿಕೊಂಡರು. ಹೀಗಾಗಿ ಫಲಿತಾಂಶ ನಿರ್ಣಾಯಕ್ಕಾಗಿ 2ನೇ ಸೂಪರ್ ಓವರ್ ಆಡಿಸಲಾಯಿತು.
ಎರಡನೇ ಸೂಪರ್ ಓವರ್:
ದ್ವಿತೀಯ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡವು 6 ಎಸೆತಗಳಲ್ಲಿ 17 ರನ್ ಬಾರಿಸಿದರು.
18 ರನ್ ಗಳ ಗುರಿ ಪಡೆದ ನೇಪಾಳ ಬ್ಯಾಟರ್ ಗಳು 17 ರನ್ ಗಳಿಸುವ ಮೂಲಕ ಎರಡನೇ ಸೂಪರ್ ಓವರ್ ಅನ್ನು ಟೈ ಮಾಡಿಕೊಂಡರು.
ಮೂರನೇ ಸೂಪರ್ ಓವರ್:
ಮೂರನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಮೊದಲ ಎಸೆತದಲ್ಲೇ ರೋಹಿತ್ ಪೌಡೆಲ್ (0) ವಿಕೆಟ್ ಕಳೆದುಕೊಂಡಿತು. ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. 4ನೇ ಎಸೆತದಲ್ಲಿ ರೋಹಿತ್ ಸಿಂಗ್ (0) ಕೂಡ ಔಟಾದರು. ಇದರೊಂದಿಗೆ ನೇಪಾಳ ತಂಡವು ಯಾವುದೇ ರನ್ ಗಳಿಸದೇ ಶೂನ್ಯಕ್ಕೆ ಆಲೌಟ್ ಆದರು.
ಅತ್ತ 1 ರನ್ ಗಳ ಗುರಿ ಪಡೆದ ನೆದರ್ಲೆಂಡ್ಸ್ ಪರ ಮೈಕೆಲ್ ಲೆವಿಟ್ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದರು. ಈ ಮೂಲಕ ನೆದರ್ಲೆಂಡ್ಸ್ ತಂಡವು ಮೂರನೇ ಸೂಪರ್ನಲ್ಲಿ ರೋಚಲ ಗೆಲುವನ್ನು ತನ್ನದಾಗಿಸಿಕೊಂಡಿತು.
ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರು ಸೂಪರ್ ಓವರ್ ಆಡಿದ ಮೊದಲ ತಂಡಗಳೆಂಬ ವಿಶ್ವ ದಾಖಲೆ ನೆದರ್ಲೆಂಡ್ಸ್-ನೇಪಾಳ ತಂಡಗಳ ಪಾಲಾಗಿದೆ.