ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ: ವಿಡಿಯೋ ನೋಡಿ
ರಾಯಚೂರು: ಮಂತ್ರಾಲಯ ಮಠದಲ್ಲಿ ಕಳೆದ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. 3,48,69,621 ರೂ. ನಗದು, 32 ಗ್ರಾಂ ಚಿನ್ನ, 1 ಕೆಜಿ 240 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಮಠದ ಸಿಬ್ಬಂದಿ, ಸ್ವಯಂ ಸೇವಕರಿಂದ ಹುಂಡಿ ಎಣಿಕೆ ನಡೆಯಿತು.
- Bhemesh Poojar
- Updated on: Mar 24, 2025
- 9:24 am
ರಾಯಚೂರಿನ ಈ ಹೊಸ ತಾಲ್ಲೂಕಿಗೆ ಹೋಗಲು ಜನರು ಹಿಂದೇಟು: ಕಾರಣವೇನು?
ರಾಯಚೂರಿನ ದೇವದುರ್ಗ ತಾಲ್ಲೂಕಿನ ಹಲವು ಹಳ್ಳಿಗಳನ್ನು ಅರಕೇರಾ ತಾಲ್ಲೂಕಿಗೆ ಸೇರ್ಪಡೆ ಮಾಡಿದ್ದು, ಅವೈಜ್ಞಾನಿಕ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಸೇವೆಗಳಿಗೆ ತೊಂದರೆಯಾಗುತ್ತಿದೆ. ವಿಧಾನಸಭೆಯಲ್ಲಿ ಶಾಸಕಿ ಕರೆಮ್ಮಾ ನಾಯಕ್ ಈ ಬಗ್ಗೆ ಪ್ರಸ್ತಾಪಿಸಿದ್ದು, ಹಳ್ಳಿಗಳನ್ನು ಮತ್ತೆ ದೇವದುರ್ಗ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ.
- Bhemesh Poojar
- Updated on: Mar 23, 2025
- 3:54 pm
ಮಕ್ಕಳಾಗದ ಕೊರಗು: ವಿಶೇಷ ಚೇತನ, ಬಡ ಮಕ್ಕಳ ಬಾಳಿಗೆ ಬೆಳಕಾದ ರಾಯಚೂರಿನ ಶಿಕ್ಷಕ ದಂಪತಿ
ಮಸ್ಕಿ ತಾಲ್ಲೂಕಿನ ರಾಮಣ್ಣ ಮತ್ತು ಶೃತಿ ದಂಪತಿ ವಿವಾಹವಾಗಿ 15 ವರ್ಷಗಳ ಕಳೆದರೂ ಮಕ್ಕಳಾಗಿಲ್ಲ. ಆದರೆ, ದಂಪತಿ ತಮ್ಮ ಜೀವನವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ನೀಡಲು ಅರ್ಪಿಸಿದ್ದಾರೆ. 30ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ವಸತಿ, ಆಹಾರ ಮತ್ತು ಶಿಕ್ಷಣ ಒದಗಿಸುತ್ತಿದ್ದಾರೆ. ಈ ದಂಪತಿಯ ಉದಾರ ಕಾರ್ಯ ಆದರ್ಶವಾಗಿದೆ.
- Bhemesh Poojar
- Updated on: Mar 23, 2025
- 2:49 pm
ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್
ಮೊನ್ನೆಯಷ್ಟೇ ಖೋಟಾ ನೋಟು ಪ್ರಿಂಟ್ ವಿಚಾರವಾಗಿ ರಾಯಚೂರಿನಲ್ಲಿ ನಾಲ್ವರ ಬಂಧನವಾಗಿತ್ತು. ಇದೀಗ ಅದರ ಬೆನ್ನಲ್ಲೇ ನಗರದಲ್ಲಿ ಫೇಕ್ ಕರೆನ್ಸಿ ಜಾಲ ಸಾರ್ವಜನಿಕರ ನಿದ್ದೆಗೆಡಿಸಿದೆ. ಹೋಟೆಲ್ವೊಂದರಲ್ಲಿ ಬಿರಿಯಾನಿ ತಿಂದು 500 ಖೋಟಾ ನೋಟು ಕೊಟ್ಟು ಆರೋಪಿಗಳಿಬ್ಬರು ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
- Bhemesh Poojar
- Updated on: Mar 21, 2025
- 9:55 pm
ವಾಟ್ಸಪ್ ಗ್ರೂಪಿನಲ್ಲಿ ಹಾಸ್ಯಾಸ್ಪದ ಎಮೋಜಿ ಹಾಕಿದ್ದಕ್ಕೆ ಕಿರಿಕ್: ಮನೆಗೆ ನುಗ್ಗಿ ದಾಂಧಲೆ
ವಾಟ್ಸಪ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋಗೆ ಹಾಸ್ಯಾಸ್ಪದ ಎಮೋಜಿ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ರಾಯಚೂರಿನ ಹರಿಜನವಾಡ ಬಡಾವಣೆಯಲ್ಲಿ ನಡೆದಿದೆ. ಮಹೇಶ್ ರೆಡ್ಡಿ ಎಂಬುವವರು ಪೋಸ್ಟ್ ಮಾಡಿದ ವಿಡಿಯೋಗೆ ಸಂತೋಷ್ ರೆಡ್ಡಿ ಎಂಬುವವರು ಎಮೋಜಿ ಹಾಕಿದ್ದು, ಇದರಿಂದಾಗಿ ಜಗಳವಾಗಿದೆ.
- Bhemesh Poojar
- Updated on: Mar 19, 2025
- 10:08 pm
ರಾಯಚೂರನ್ನೇ ಬೆಚ್ಚಿಬೀಳಿಸಿದ್ದ ಭೀಕರ ಕೊಲೆ: 31 ಬಾರಿ ಇರಿದು ಕೊಂದವರು ಸಿಕ್ಕಿಬಿದ್ದರು
ರಾಯಚೂರಿನಲ್ಲಿ ನಡೆದ ಭೀಕರ ಕೊಲೆಯ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿವೆ. ಬರೋಬ್ಬರಿ 31 ಬಾರಿ ಇರಿದು ವ್ಯಕ್ತಿಯನ್ನು ಕೊಲ್ಲಲಾಗಿದೆ. ಹಳೆಯ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಘಟನೆ ಇಡೀ ರಾಯಚೂರನ್ನು ಬೆಚ್ಚಿಬೀಳಿಸಿದೆ.
- Bhemesh Poojar
- Updated on: Mar 17, 2025
- 7:14 pm
ಅನುಮಾನಾಸ್ಪದವಾಗಿ ಪತ್ನಿ ಸಾವು: ಗಂಡನ ಮೇಲೆ ಕೊಲೆ ಆರೋಪ, ಅನಾಥವಾದ ಮಕ್ಕಳು
ಗಂಡನ ಕಿರುಕುಳಕ್ಕೆ ಪತ್ನಿ ಸಾವಿನ ಮನೆ ಸೇರಿದ್ದಾಳೆ. ಹಣಕ್ಕಾಗಿ ನಿತ್ಯ ಟಾರ್ಚರ್ ಕೊಡ್ತಿದ್ದ ಗಂಡನೇ ಪತ್ನಿಯನ್ನ ಕೊಂದು ಹಾಕಿದ್ದಾನೆ ಅಂತ ಮೃತಳ ಮನೆಯವರು ಆರೋಪ ಮಾಡಿದ್ದಾರೆ. ರಾಯಚೂರಿನ ವಾಸವಿ ನಗರದಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ಪತಿ ಪರಾರಿ ಆಗಿದ್ದಾರೆ. ರಾಯಚೂರಿನ ನೇತಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Bhemesh Poojar
- Updated on: Mar 9, 2025
- 7:48 pm
ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಭೀಕರ ಮಾರಾಮಾರಿಯಲ್ಲಿ 45 ವರ್ಷದ ವ್ಯಕ್ತಿ ಓರ್ವನನ್ನು ಹತ್ಯೆ ಮಾಡಲಾಗಿದೆ. ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯನ್ನ ಹೊಡೆದು ಕೊಲೆ ಮಾಡಲಾಗಿದೆ. ಸದ್ಯ ಮಾನ್ವಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
- Bhemesh Poojar
- Updated on: Mar 5, 2025
- 3:27 pm
ರಾಯಚೂರಿನಲ್ಲಿ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂಧನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Bhemesh Poojar
- Updated on: Mar 3, 2025
- 10:37 pm
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ
ಮಂತ್ರಾಲಯದ ರಾಯರ ಮಠ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಕಲಿಯುಗ ಕಾಮದೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕದ ಜೊತೆ ಗುರು ವೈಭವೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.ರಾಯರ ಪಾದುಕೆಗಳ ವಿಶೇಷ ಪೂಜೆ ಪುನಸ್ಕಾರ ನೆರವೇರಿತು. ಆಂದ್ರಪ್ರದೇಶದ ಸಚಿವ ಹಾಗೂ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
- Bhemesh Poojar
- Updated on: Mar 3, 2025
- 1:15 pm
ರಾಯಚೂರಿನಲ್ಲಿ ಪಕ್ಷಿಗಳ ಸಾವು ಹಕ್ಕಿ ಜ್ವರದಿಂದ ಸಂಭವಿಸಿಲ್ಲ: ವರದಿ
ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ರಬಣಕಲ್ನಲ್ಲಿ ಹಲವು ಪಕ್ಷಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂದು ಬೆಂಗಳೂರಿನ ಪ್ರಯೋಗಾಲಯದ ವರದಿಯಿಂದ ದೃಢವಾಗಿದೆ. ವಿವಿಧ ಪರೀಕ್ಷೆಗಳ ನಂತರ ಪಕ್ಷಿಗಳು ಹಕ್ಕಿ ಜ್ವರದಿಂದ ಮೃತಪಟ್ಟಿಲ್ಲ ಎಂದು ಸಾಬೀತಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚಾಗಿದ್ದ ಆತಂಕ ಕಡಿಮೆಯಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು.
- Bhemesh Poojar
- Updated on: Mar 2, 2025
- 8:53 am
ಶಿವನಿಗೆ ಗಾರಿಗೆ ನೈವಿದ್ಯ ಮಾಡಿ ರಥ ಎಳೆದ ನಾರಿಯರು: ಮಹಿಳೆಯರು ತೇರು ಎಳೆಯುವ ಫೋಟೋಗಳು ನೋಡಿ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಲ್ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ವಿಶೇಷ ಗಾರಿಗೆ ರಥೋತ್ಸವ ನಡೆಯುತ್ತದೆ. ವಿಶೇಷವೆಂದರೆ, ಈ ರಥೋತ್ಸವವನ್ನು ಸಂಪೂರ್ಣವಾಗಿ ಮಹಿಳೆಯರು ನಡೆಸುತ್ತಾರೆ. ಅವರು ಸ್ವತಃ ತಯಾರಿಸಿದ ಗಾರಿಗೆ ಸಿಹಿ ತಿನಿಸನ್ನು ಶಿವನಿಗೆ ನೈವೇದ್ಯ ಅರ್ಪಿಸಿ, ರಥವನ್ನು ಎಳೆಯುತ್ತಾರೆ. ಈ ಅನನ್ಯ ಪದ್ಧತಿಯು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
- Bhemesh Poojar
- Updated on: Feb 28, 2025
- 10:41 pm