ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್ಕುಮಾರ್ ಫುಲ್ ಖುಷ್
ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದಾನ ಮಾಡಲಾಗಿದೆ. ಈ ಬಗ್ಗೆ ಪುತ್ರ ಯುವ ರಾಜ್ಕುಮಾರ್ ಮಾತನಾಡಿದ್ದಾರೆ. ‘ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಸಂತೋಷದ ವಿಷಯ. ನಮ್ಮ ಕುಟುಂಬದವರು ಇಲ್ಲಿಗೆ ಬಂದಿದ್ದೇವೆ. ತುಂಬ ಖುಷಿ ಆಗಿದೆ’ ಎಂದು ಹೇಳಿದ್ದಾರೆ.
ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ಪದವಿ ಪದಾನ ಮಾಡಲಾಗಿದೆ. ಈ ಬಗ್ಗೆ ಅವರ ಪುತ್ರ ಯುವ ರಾಜ್ಕುಮಾರ್ ಮಾತನಾಡಿದ್ದಾರೆ. ‘ಇದಕ್ಕಿಂತ ಇನ್ನೇನೂ ಸಂತೋಷ ಇಲ್ಲ. ನಮ್ಮ ತಾತ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ನಮ್ಮ ತಂದೆ ಹುಟ್ಟಿದ್ದು. ಅದಕ್ಕೆ ಅವರಿಗೆ ರಾಘವೇಂದ್ರ ಅಂತ ಹೆಸರು ಇಟ್ಟಿದ್ದು. ಇಂದು ಇಲ್ಲಿ ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಬಹಳ ಸಂತೋಷದ ವಿಷಯ. ರಾಯರ ಬಗ್ಗೆ ನಮ್ಮ ತಾತ ಅದ್ಭುತವಾದ ಸಿನಿಮಾ ಮಾಡಿದ್ದಾರೆ. ನಾವು ಈ ರೀತಿ ಮಾಡಲು ಸಾಧ್ಯವಿಲ್ಲ. ಇಂದು ನಮ್ಮ ಕುಟುಂಬದವರು ಇಲ್ಲಿಗೆ ಬಂದಿದ್ದೇವೆ. ತುಂಬ ಖುಷಿ ಆಗಿದೆ’ ಎಂದು ಯುವ ರಾಜ್ಕುಮಾರ್ (Yuva Rajkumar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
