Video: ರೀಲ್ಸ್ ಮಾಡಲು ಬಂದಾಕೆಗೆ ಜಾಡಿಸಿ ಒದ್ದ ಕುದುರೆ; ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಅಂತಹದ್ದೊಂದು ದೃಶ್ಯ ಇದೀಗ ವೈರಲ್ ಆಗಿದ್ದು, ಯುವತಿಯೊಬ್ಬಳು ಕುದುರೆಯ ಪಕ್ಕ ನಿಂತು ರೀಲ್ಸ್ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾಳೆ. ಹೌದು ಆಕೆ ರೀಲ್ಸ್ ಮಾಡುತ್ತಿರುವಾಗ ಕೋಪಗೊಂಡ ಕುದುರೆ ಆಕೆಗೆ ಜಾಡಿಸಿ ಒದ್ದಿದ್ದು, ಈ ದೃಶ್ಯ ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮಕ್ಕಳಿಂದ ಹಿಡಿದು ಮುದುಕರವರೆಗೆ ರೀಲ್ಸ್, ವಿಡಿಯೋ ಮಾಡುವುದು ಟ್ರೆಂಡ್ (Reels craze) ಆಗಿ ಬಿಟ್ಟಿದೆ. ಅದರಲ್ಲೂ ಕೆಲವರಂತೂ ಸಿಕ್ಕಿದ್ದಲ್ಲೆಲ್ಲಾ ರೀಲ್ಸ್ ಮಾಡ್ತಾ ನಿಂತು ಬಿಡ್ತಾರೆ. ಹೀಗೆ ಎಲ್ಲೆಲ್ಲೋ ರೀಲ್ಸ್ ವಿಡಿಯೋಗಳನ್ನು ಮಾಡಲು ಹೋಗಿ ಫಜೀತಿಗೆ ಸಿಲುಕಿದವರ ಸ್ಟೋರಿಗಳನ್ನು ನೀವು ನೋಡಿರುತ್ತೀರಿ ಅಲ್ವಾ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಕುದುರೆಯ ಬಳಿ ನಿಂತು ರೀಲ್ಸ್ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾರೆ. ಕುದುರೆಯೊಂದು ತನ್ನ ಪಾಡಿಗೆ ಹುಲ್ಲು ಮೇಯುತ್ತಾ ನಿಂತಿದ್ದ ಸಂದರ್ಭದಲ್ಲಿ ಅಲ್ಲೇ ಯುವತಿಯೊಬ್ಬಳು ರೀಲ್ಸ್ ಮಾಡಲು ಬಂದಿದ್ದು, ಇದರಿಂದ ಕೋಪಗೊಂಡ ಕುದುರೆ (horse kicked the lady) ಆಕೆಗೆ ಜಾಡಿಸಿ ಒದ್ದಿದೆ. ಈ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೀಲ್ಸ್ ಮಾಡಲು ಬಂದಾಕೆಗೆ ಜಾಡಿಸಿ ಒದ್ದ ಕುದುರೆ:
ಕುದುರೆಯೊಂದು ತನ್ನ ಪಾಡಿಗೆ ನಿಂತು ಹುಲ್ಲು ಮೇಯುತ್ತಾ ನಿಂತಿದ್ದ ಸಂದರ್ಭದಲ್ಲಿ, ಅದರ ಪಕ್ಕವೇ ನಿಂತು ಓರ್ವ ಯುವತಿ ರೀಲ್ಸ್ ಮಾಡಿದ್ದು, ಇದರಿಂದ ಕೋಪಗೊಂಡ ಕುದುರೆ, ಇಲ್ಲಿ ಬಂದು ಏನ್ ನಿನ್ನ ಹುಚ್ಚಾಟ ಎನ್ನುತ್ತಾ ಆಕೆಗೆ ಜಾಡಿಸಿ ಒದ್ದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಫನ್ನಿ ವಿಡಿಯೋವನ್ನು ಅವಿಪ್ಸಾ ಖನಲ್ (avipsaakhnal) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕುದುರೆಯ ಪಕ್ಕದಲ್ಲೇ ನಿಂತು ಯುವತಿಯೊಬ್ಬಳು ರೀಲ್ಸ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅಷ್ಟರಲ್ಲಿ ಅದೇನಾಯ್ತೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಕೋಪಗೊಂಡ ಕುದುರೆ ಆಕೆಗೆ ಜಾಡಿಸಿ ಒದ್ದಿದೆ.
ಇದನ್ನೂ ಓದಿ: ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಜೂನ್ 05 ರಂದು ಶೇರ್ ಮಾಡಲಾದ ಈ ವಿಡಿಯೋ 20.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯವಂತೂ ತುಂಬಾನೇ ಫನ್ನಿಯಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕುದುರೆ ಅಟ್ಯಾಕ್ ಮಾಡಲು ಬರುವಾಗ ಓಡ್ಬೇಕಿತ್ತು ತಾನೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದಂರೂ ತುಂಬಾನೇ ಮಜವಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








