AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾನೂ ಬರ್ತೀನಿ ಕಂಡ್ರೋ… ಮಕ್ಕಳೊಂದಿಗೆ ಮಗುವಾಗಿ ಆಟವಾಡಿದ ಶ್ವಾನ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನಸ್ಸಿಗೆ ಬಹಳನೇ ಹತ್ತಿರವಾಗುತ್ತವೆ. ಅದರಲ್ಲೂ ಪ್ರಾಣಿಗಳಿಗೆ ಸಂಬಂಧಿಸಿದ ಮುದ್ದು ಮುದ್ದಾದ ವಿಡಿಯೋಗಳು ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಶ್ವಾನವೊಂದು ಪುಟಾಣಿ ಮಕ್ಕಳ ಜೊತೆ ಸೇರಿ ತಾನು ಮಗುವಿನಂತೆ ಆಟವಾಡುವ ದೃಶ್ಯ ನೋಡುಗರ ಮನ ಗೆದ್ದಿದೆ.

Video: ನಾನೂ ಬರ್ತೀನಿ ಕಂಡ್ರೋ… ಮಕ್ಕಳೊಂದಿಗೆ ಮಗುವಾಗಿ ಆಟವಾಡಿದ ಶ್ವಾನ
ಪುಟಾಣಿಗಳ ಜೊತೆ ಶ್ವಾನದ ಆಟImage Credit source: ladbible/Instagram
ಮಾಲಾಶ್ರೀ ಅಂಚನ್​
|

Updated on: Jun 13, 2025 | 12:21 PM

Share

ಶ್ವಾನಗಳನ್ನು (Dogs) ಮನುಷ್ಯನ ಉತ್ತಮ ಸ್ನೇಹಿತ ಅಂತ ಹೇಳ್ತಾರೆ. ಜನ ನಾಯಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾರೆ. ನಾಯಿಗಳೂ ಅಷ್ಟೇ ತನ್ನ ಮಾಲೀಕ ಜೊತೆಗಿದ್ದರೆ ಮಗುವಿನಂತೆಯೇ ಆಗಿ ಬಿಡುತ್ತದೆ. ಅದರಲ್ಲೂ ಈ ಶ್ವಾನಗಳು ಮಕ್ಕಳ ಜೊತೆ ತುಸು ಹೆಚ್ಚೇ ತುಂಟಾಟಗಳನ್ನು ಆಡುತ್ತವೆ. ಹೀಗೆ ಮನುಷ್ಯ ಮತ್ತು ಶ್ವಾನಗಳ ನಡುವಿನ ಸ್ನೇಹ (Dog and Human Friendship) ಸಂಬಂಧಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ನಾಯಿಯೊಂದು ನಾನು ನಿಮ್ಮ ಜೊತೆ ಆಟಕ್ಕೆ ಬರ್ತೀನಿ ಎನ್ನುತ್ತಾ ಮೂವರು ಪುಟಾಣಿ ಮಕ್ಕಳ ಜೊತೆ ಸೇರಿ ಆಟವಾಡಿದೆ. ಮುಗ್ಧ ಮನಸ್ಸುಗಳ ಸಮ್ಮಿಲನ ದೃಶ್ಯ ಎಲ್ಲರ ಹೃದಯ ಗೆದ್ದಿದೆ.

ಮಕ್ಕಳ ಜೊತೆ ಸೇರಿ ಆಟವಾಡಿದ ಶ್ವಾನ:

ಮೂವರು ಮಕ್ಕಳು ರಸ್ತೆಬದಿಯಲ್ಲಿ ಕುಳಿತು ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಶ್ವಾನವೊಂದು ನನ್ನನ್ನೂ ಆಟಕ್ಕೆ ಸೆರಿಸ್ರೋ ಎಂದು ಹೇಳುತ್ತಾ, ಆ ಪುಟಾಣಿಗಳ ಜೊತೆ ಸೇರಿ ತಾನೂ ಆಟವಾಡಿದೆ. ಈ ಮುದ್ದಾದ ವಿಡಿಯೋವನ್ನು ladbible ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು,”ಎಷ್ಟು ಸುಂದರವಾಗಿದೆ ಹುಡುಗರ ಗುಂಪು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ
Image
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
Image
ಯಮನೇ ಒಂದು ಬಾರಿ ವಿಚಾರಿಸಿ ಹೋಗೋದು ಅಂದ್ರೆ ಇದೇ ನೋಡಿ
Image
ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ
Image
ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by LADbible (@ladbible)

ವೈರಲ್‌ ಆಗುತ್ತಿರುವ ಈ ದೃಶ್ಯದಲ್ಲಿ ರಸ್ತೆ ಬದಿಯಲ್ಲಿ ಕುಳಿತ ಮೂವರು ಪುಟಾಣಿಗಳ ಜೊತೆ ಶ್ವಾನದ ಸುಂದರ ಸ್ನೇಹದ ದೃಶ್ಯವನ್ನು ಕಾಣಬಹುದು. ಮೂವರು ಸ್ನೇಹಿತರು ಜೊತೆಯಾಗಿ ಕುಳಿತು ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಶ್ವಾನ ತಾನೂ ಕೂಡಾ ಆ ಪುಟಾಣಿಗಳ ಜೊತೆ ಸೇರಿ ಮಕ್ಕಳಂತೆ ಆಟವಾಡಿದೆ.

ಇದನ್ನೂ ಓದಿ: ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ, ಇದೇ ನೋಡಿ ಪ್ರೀತಿ

ಜೂನ್‌ 10 ರಂದು ಶೇರ್ ಮಾಡಲಾದ ಈ ವಿಡಿಯೋ 2.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕಂಡ ಅದ್ಭುತ ದೃಶ್ಯ ಇದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಸುಂದರ ಸ್ನೇಹʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾಯಿ ಮತ್ತು ಮಕ್ಕಳ ನಡುವಿನ ಸ್ನೇಹ ಬಲು ಸುಂದರವಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ