AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಇದು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋವೇ?, ಸತ್ಯ ಇಲ್ಲಿ ತಿಳಿಯಿರಿ

Ahmedabad plane crash Fact Check: ಅಹಮದಾಬಾದ್ನಲ್ಲಿ ವಿಮಾನ ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ತೆಗೆದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೃಶ್ಯವೊಂದು ವೈರಲ್ ಆಗುತ್ತಿದೆ. ಪ್ರಯಾಣಿಕರು ವಿಮಾನದೊಳಗೆ ಕುಳಿತಿರುವುದನ್ನು ಕಾಣಬಹುದು ಮತ್ತು ಅವರಲ್ಲಿ ಒಬ್ಬರು ಹೊರಗೆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾರೆ. ಈ ಸುದ್ದಿಯ ಸತ್ಯಾಂಶ ಇಲ್ಲಿದೆ ನೋಡಿ

Fact Check: ಇದು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋವೇ?, ಸತ್ಯ ಇಲ್ಲಿ ತಿಳಿಯಿರಿ
Ahmedabad Plane Crash Fact Check (2)
Follow us
Vinay Bhat
|

Updated on: Jun 13, 2025 | 5:55 PM

ಬೆಂಗಳೂರು (ಜೂ. 13): ಜೂನ್ 12 ರಂದು, ಅಹಮದಾಬಾದ್ ವಿಮಾನ ನಿಲ್ದಾಣದಿಂದ (Ahmedabad plane crash) ಲಂಡನ್‌ಗೆ 242 ಜನರನ್ನು ಹೊತ್ತು ಹಾರುತ್ತಿದ್ದ ಏರ್ ಇಂಡಿಯಾ ವಿಮಾನ AI171, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಓರ್ವ ಪವಾಡ ಸದೃಶ್ಯವಾಗಿ ಬದುಕುಳಿದ್ದು, ಮತ್ತೆಲ್ಲರೂ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯಗಳನ್ನು ಸ್ಥಳದಲ್ಲಿದ್ದ ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ವಿಮಾನ ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ತೆಗೆದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೃಶ್ಯವೊಂದು ವೈರಲ್ ಆಗುತ್ತಿದೆ. ಪ್ರಯಾಣಿಕರು ವಿಮಾನದೊಳಗೆ ಕುಳಿತಿರುವುದನ್ನು ಕಾಣಬಹುದು ಮತ್ತು ಅವರಲ್ಲಿ ಒಬ್ಬರು ಹೊರಗೆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾರೆ. ಕ್ಷಣಗಳ ನಂತರ, ವಿಮಾನವು ನಿಯಂತ್ರಣ ತಪ್ಪಿದಂತೆ ಕಾಣುತ್ತಿದ್ದು, ಪ್ರಯಾಣಿಕರಲ್ಲಿ ಭಯಭೀತರಾಗಿದ್ದಾರೆ.

ಫೇಸ್​ಬುಕ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ‘‘ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಪತನಕ್ಕು ಮುನ್ನ ಲೈವ್ ವಿಡಿಯೋ ಮಾಡಿದ್ದ ಪ್ರಯಾಣಿಕ ಮುಂದೆ ನಡೆದದ್ದು ಘನಘೋರ ದೃಶ್ಯ’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?
Image
ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?
Image
ಕೇವಲ 14 ಸಾವಿರಕ್ಕೆ ಪತಂಜಲಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?
Image
ಬಿಡುಗಡೆ ಆಯಿತು ಟಾಟಾದ ಹೊಸ ಕಾರು: ಬೆಲೆ ಕೇವಲ 6.89 ಲಕ್ಷ ರೂ.

ಇದು ನೇಪಾಳದ ವಿಡಿಯೋ:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋಕ್ಕೂ ಅಹಮದಾಬಾದ್​ನಲ್ಲಿ ನಡೆದ ವಿಮಾನ ಅಪಘಾತದ ಘಟನೆಗೂ ಯಾವುದೇ ಸಂಬಂಧವಿಲ್ಲ. ಇದು 2023 ರಲ್ಲಿ ನೇಪಾಳದಲ್ಲಿ ನಡೆದ ಯೇತಿ ಏರ್ಲೈನ್ಸ್ ಅಪಘಾತದ ವಿಡಿಯೋ ಆಗಿದೆ.

Fact Check: ಮೊಬೈಲ್ ಟವರ್ ಅಳವಡಿಸುವಂತೆ TRAI ನಿಂದ ನಿಮಗೆ ಸಂದೇಶ ಬರುತ್ತಿದೆಯೇ?

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ 2023 ರಲ್ಲಿ ಪ್ರಕಟವಾದ ಇದೇ ರೀತಿಯ ದೃಶ್ಯ ಸೇರಿದಂತೆ ಹಲವಾರು ಮಾಧ್ಯಮ ಮಾಡಿದ ವರದಿಗಳನ್ನು ನಾವು ಕಂಡಿದ್ದೇವೆ. ಇದು ನೇಪಾಳದ ಪೋಖರಾದಲ್ಲಿ ಯೇತಿ ಏರ್‌ಲೈನ್ಸ್ ವಿಮಾನ ಅಪಘಾತದ ದೃಶ್ಯ ಎಂದು ಎಲ್ಲ ವರದಿ ಸೂಚಿಸುತ್ತವೆ.

ಇದೇ ವೀಡಿಯೊವನ್ನು ಜನವರಿ 15, 2023 ರಂದು ಮೋಜೋ ಸ್ಟೋರಿಯ ಯೂಟ್ಯೂಬ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ‘ನೇಪಾಳದ ಪೋಖರಾದಲ್ಲಿ ಯೇತಿ ವಿಮಾನ ಅಪಘಾತದ ವಿಡಿಯೋವನ್ನು ಭಾರತೀಯ ಪ್ರಯಾಣಿಕರು ಸೆರೆಹಿಡಿದಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಜನವರಿ 15, 2023 ರಂದು ಟಿವಿ9 ಗುಜರಾತಿ ಪ್ರಕಟಿಸಿರುವ ಸುದ್ದಿಯ ಪ್ರಕಾರ, ‘‘ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಯೇತಿ ಏರ್ಲೈನ್ಸ್ ವಿಮಾನ 691, ಪೋಖರಾದ ಸೇತಿ ನದಿಯ ಕಮರಿಗೆ ಅಪ್ಪಳಿಸಿತು. ಈ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ವಿಮಾನ ಅಪಘಾತಕ್ಕೀಡಾದ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿತು. ಸ್ಥಳೀಯ ಜನರು ಅಪಘಾತದ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು, ಆದರೆ ದುಃಖಕರ ಸಂಗತಿಯೆಂದರೆ ಈ ಘಟನೆಯಲ್ಲಿ ಒಬ್ಬ ವ್ಯಕ್ತಿಯೂ ಬದುಕುಳಿಯಲಿಲ್ಲ. ಆರಂಭದಲ್ಲಿ 40 ಶವಗಳನ್ನು ಹೊರತೆಗೆಯಲಾಯಿತು, ಆದರೆ ಸಂಜೆಯ ಹೊತ್ತಿಗೆ ಈ ಅಪಘಾತದಲ್ಲಿ ಎಲ್ಲಾ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಈ ಘಟನೆಯ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮುಖ್ಯವಾಗಿ ಭಾರತದ ಓರ್ವ ಯುವಕ ಘಟನೆಗೆ ಮೊದಲು ಎಫ್‌ಬಿ ಲೈವ್ ಮಾಡಿದ್ದರು. ಅದು ಅವರಿಗೆ ಸಾವಿನ ಎಫ್‌ಬಿ ಲೈವ್ ಆಗಿ ಮಾರ್ಪಟ್ಟಿತು’’ ಎಂದು ವೈರಲ್ ವಿಡಿಯೋವನ್ನೇ ಹಂಚಿಕೊಂಡಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಆದರೆ, ವಿಮಾನದೊಳಗೆ ಪ್ರಯಾಣಿಕರೊಬ್ಬರು ಲೈವ್ ವಿಡಿಯೋ ಮಾಡುತ್ತಿರುವ ವೈರಲ್ ವಿಡಿಯೋ ಈ ವಿಮಾನ ಅಪಘಾತದ್ದಲ್ಲ. 2023 ರಲ್ಲಿ ನೇಪಾಳದಲ್ಲಿ ನಡೆದ ವಿಮಾನ ಅಪಘಾತಕ್ಕೆ ಸ್ವಲ್ಪ ಮೊದಲು ವಿಮಾನದೊಳಗಿನ ಪ್ರಯಾಣಿಕರೊಬ್ಬರ ಲೈವ್ ವಿಡಿಯೋದ ದೃಶ್ಯಗಳನ್ನು ಅಹಮದಾಬಾದ್ ವಿಮಾನ ಅಪಘಾತ ಎಂದು ಹಂಚಿಕೊಳ್ಳಲಾಗುತ್ತಿದೆ.

ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ 242 ಜನರನ್ನು ಹೊತ್ತು ಲಂಡನ್​​​​​​​​ನತ್ತ ಹಾರಿತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಂದರೆ 1.38 ಕ್ಕೆ ಅಪಘಾತಕ್ಕೀಡಾಯಿತು. 241 ದೇಹಗಳ ಪೈಕಿ ಕಡಿಮೆ ಪ್ರಮಾಣದಲ್ಲಿ ಸುಟ್ಟಿದ್ದ ದೇಹಗಳನ್ನು ಗುರುತಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಉಳಿದ ದೇಹಗಳ ಕುಟುಂಬಸ್ಥರನ್ನು ಆಸ್ಪತ್ರೆಯ ಸಿಬ್ಬಂದಿ ಸಂಪರ್ಕಿಸಿದ್ದು ಅವರೆಲ್ಲ ಬಂದು ಡಿಎನ್​ಎ ಸ್ಯಾಂಪಲ್​ಗಳನ್ನು ನೀಡುತ್ತಿದ್ದಾರೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ
ಹುಲಿಗಳನ್ನು ಕೊಂದ ಅಪರಾಧಿಗಳಿಗೆ ಡಬಲ್ ಶಿಕ್ಷೆಯಾಗಲಿದೆ: ಅರಣ್ಯಾಧಿಕಾರಿ