Plane Crash
ಗುಜರಾತ್ ರಾಜ್ಯದ ಅಹಮದಾಬಾದ್‌ನ ಮೇಘನಿನಗರದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ 242 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಟೇಕಾಫ್ ಆದ 5 ನಿಮಿಷಗಳಲ್ಲೇ ಏರ್ ಇಂಡಿಯಾದ AI 171 ವಿಮಾನ ಅಪಘಾತಕ್ಕೀಡಾಗಿದೆ. ಈ ವಿಮಾನ ಅಹಮದಾಬಾದ್ನಿಂದ ಲಂಡನ್ಗೆ ಹೋಗುತ್ತಿತ್ತು. ಅಹಮದಾಬಾದ್‌ನ ಮೇಘನಿನಗರದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ AI171 ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ನೀಡಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.
ಏರ್ ಇಂಡಿಯಾ ಅಪಘಾತ, ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ, ಪೈಲಟ್ ತಂದೆಗೆ ಸುಪ್ರೀಂ ಸಾಂತ್ವನ
ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ನಿಮ್ಮ ಮಗ ಕಾರಣ ಎಂದು ಭಾರತದಲ್ಲಿ ಯಾರೂ ನಂಬುವುದಿಲ್ಲ ಎಂದು ಪೈಲಟ್ ತಂದೆಗೆ ಸುಪ್ರೀಂಕೋರ್ಟ್ ಸಾಂತ್ವನ ಹೇಳಿದೆ. ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್‌ನ ತಂದೆ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅವರಿಂದ ಉತ್ತರ ಕೇಳಿದ್ದು, ಅಪಘಾತದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿದೆ.
- Nayana Rajeev
- Updated on: Nov 7, 2025
- 12:46 pm
Video: ಅಮೆರಿಕದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಸರಕು ವಿಮಾನ ಪತನ, ಮೂವರು ಸಾವು
ಅಮೆರಿಕದ ಕೆಂಟುಕಿಯಲ್ಲಿ ಬಹುದೊಡ್ಡ ವಿಮಾನ ಅಪಘಾತ ಸಂಭವಿಸಿದೆ. ಆಗಷ್ಟೇ ಟೇಕ್ ಆಫ್ ಆಗಿದ್ದ ಸರಕು ವಿಮಾನ ಪತನಗೊಂಡಿದ್ದು, ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.ವಿಮಾನದಲ್ಲಿ ಮೂವರು ಜನರಿದ್ದರು, ಹೊನೊಲುಲುಗೆ ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ. ಅಪಘಾತವು ಸ್ಫೋಟ ಮತ್ತು ಬೆಂಕಿಯನ್ನು ಉಂಟುಮಾಡಿತ್ತು.
- Nayana Rajeev
- Updated on: Nov 5, 2025
- 7:34 am
ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸ್ಥಿತಿ ಏನಾಗಿದೆ ಗೊತ್ತೇ?
ಅಹಮದಾಬಾದಿನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯ ಪರಿಸ್ಥಿತಿ ಯಾರಿಗೂ ಬೇಡ. ತಾನೊಬ್ಬನೇ ಬದುಕಿದ್ದೇನೆ ಎಂದು ಖುಷಿ ಪಡಬೇಕೆ, ತನ್ನೊಂದಿಗೆ ಇದ್ದವರೆಲ್ಲಾ ಕಣ್ಮುಂದೆಯೇ ಹೋದರಲ್ಲಾ ಎಂದು ಮರುಕ ಪಡಬೇಕೆ ಇದೆರಡರ ನಡುವಿನ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ವಿಶ್ವಾಸ್ ಕುಮಾರ್ ರಮೇಶ್.
- Nayana Rajeev
- Updated on: Nov 4, 2025
- 7:22 am
Video: ಅಮೆರಿಕ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಮೇಲೆ ಮತ್ತೊಂದು ವಿಮಾನ ಪತನ
ಅಮೆರಿಕದ ಮಾಂಟಾನಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಮೇಲೆ ವಿಮಾನವೊಂದು ಪತನಗೊಂಡಿರುವ ಘಟನೆ ನಡೆದಿದೆ. ವಿಮಾನ ಡಿಕ್ಕಿ ಪರಿಣಾಮ ಬೆಂಕಿ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಜನರನ್ನು ಹೊತ್ತೊಯ್ಯುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲಿಸ್ಪೆಲ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು, ಆಗ ಪತನಗೊಂಡಿದೆ.
- Nayana Rajeev
- Updated on: Aug 12, 2025
- 8:07 am
Russia Plane Crash: ಚೀನಾ ಗಡಿಯಲ್ಲಿ ರಷ್ಯಾದ ವಿಮಾನ ಪತನ, ಎಲ್ಲಾ 50 ಪ್ರಯಾಣಿಕರು ಸಾವು
ರಷ್ಯಾದಿಂದ ಹೊರಟಿದ್ದ ವಿಮಾನವೊಂದು ಚೀನಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಇದೀಗ ಅವಶೇಷಗಳು ಪತ್ತೆಯಾಗಿದ್ದು, ಪತನ ಸಂಭವಿಸಿರುವುದು ದೃಢಪಟ್ಟಿದೆ. 50 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟಿಂಡಾದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ, ಇಳಿಜಾರಿನಲ್ಲಿ ಆನ್ -24 ವಿಮಾನದ ಅವಶೇಷಗಳು ಕಂಡುಬಂದಿವೆ. ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ಅಂಗಾರ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಈ ವಿಮಾನವು ಸುಮಾರು 49 ಜನರನ್ನು ಹೊತ್ತೊಯ್ಯುತ್ತಿತ್ತು, ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ತಿಳಿಸಿದ್ದಾರೆ.
- Nayana Rajeev
- Updated on: Jul 24, 2025
- 2:01 pm
Video: ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. F-7 BGI ತರಬೇತಿ ಜೆಟ್ ಎಂದು ಗುರುತಿಸಲಾದ ವಿಮಾನವು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸುಮಾರು ಮಧ್ಯಾಹ್ನ 1.06 ಕ್ಕೆ ಡಯಾಬರಿ ಪ್ರದೇಶದ ಕಾಲೇಜು ಆವರಣಕ್ಕೆ ಅಪ್ಪಳಿಸಿತು.
- Nayana Rajeev
- Updated on: Jul 21, 2025
- 2:51 pm
ಏರ್ ಇಂಡಿಯಾ ವಿಮಾನ ಅಪಘಾತ ಸಂತ್ರಸ್ತರಿಗೆ ನೆರವಾಗಲು ಟಾಟಾ ಸನ್ಸ್ನಿಂದ 500 ಕೋಟಿ ರೂ. ಟ್ರಸ್ಟ್ ಸ್ಥಾಪನೆ
ಏರ್ ಇಂಡಿಯಾ AI-171 ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಗಾಯಗೊಂಡವರಿಗೆ ಸಹಾಯ ಮಾಡಲು ಟಾಟಾ ಸನ್ಸ್ 500 ಕೋಟಿ ರೂ.ಗಳ ‘ದಿ AI-171 ಮೆಮೋರಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್’ ಸ್ಥಾಪಿಸಿದೆ. ಮೃತರಿಗೆ 1 ಕೋಟಿ ರೂ. ಪರಿಹಾರ, ಗಾಯಾಳುಗಳಿಗೆ ಚಿಕಿತ್ಸೆ ಮತ್ತು ಹಾನಿಗೊಳಗಾದ ಹಾಸ್ಟೆಲ್ ಪುನರ್ನಿರ್ಮಾಣಕ್ಕೆ ಈ ಹಣವನ್ನು ಬಳಸಲಾಗುತ್ತದೆ.
- Ganapathi Sharma
- Updated on: Jul 19, 2025
- 11:10 am
‘ಬೇಜವಾಬ್ದಾರಿ ಹೇಳಿಕೆ’; ಏರ್ ಇಂಡಿಯಾ ಅಪಘಾತದಲ್ಲಿ ಪೈಲಟ್ ಪಾತ್ರದ ಬಗ್ಗೆ ಅಮೆರಿಕ ಮಾಧ್ಯಮದ ವರದಿಗೆ ಭಾರತ ಖಂಡನೆ
ಗುಜರಾತಿನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ‘ಪೈಲಟ್‌ಗಳ ಪಾತ್ರವಿದೆ’ ಎಂಬ ಅಮೆರಿಕದ ಮಾಧ್ಯಮಗಳ ವರದಿಯನ್ನು ಭಾರತದ ತನಿಖಾ ಸಂಸ್ಥೆ ತಿರಸ್ಕರಿಸಿದೆ. ಹಾಗೇ, ಏರ್ ಇಂಡಿಯಾ ಅಪಘಾತದ ಬಗ್ಗೆ ವಿದೇಶಿ ಮಾಧ್ಯಮಗಳು "ಬೇಜವಾಬ್ದಾರಿ" ವರದಿ ಮಾಡಿದ್ದಕ್ಕಾಗಿ ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಟೀಕಿಸಿದೆ. ಹಿರಿಯ ಪೈಲಟ್ ಇಂಧನ ಪೂರೈಕೆಯನ್ನು ಕಡಿತಗೊಳಿಸಿದ್ದಾರೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಆರೋಪಿಸಿತ್ತು.
- Sushma Chakre
- Updated on: Jul 17, 2025
- 7:51 pm
2018ರಲ್ಲೇ ಏರ್ ಇಂಡಿಯಾಗೆ ಇಂಧನದ ಸ್ವಿಚ್ ಸಮಸ್ಯೆ ಬಗ್ಗೆ ಎಚ್ಚರಿಸಿತ್ತು ಅಮೆರಿಕದ ವಾಯುಯಾನ ಸಂಸ್ಥೆ!
2018ರಲ್ಲಿ ಬೋಯಿಂಗ್ ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ಕಾರ್ಯವಿಧಾನದಲ್ಲಿನ ಸಂಭಾವ್ಯ ಸಮಸ್ಯೆಗಳ ಕುರಿತು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವ್ಯವಸ್ಥೆಯ ಸಂಭಾವ್ಯ ನಿಷ್ಕ್ರಿಯತೆಯ ಬಗ್ಗೆ ಅದು ಎಚ್ಚರಿಕೆ ನೀಡಿತ್ತು, ತಪಾಸಣೆ ಮಾಡಿಸಲು ಸಲಹೆಯನ್ನೂ ನೀಡಿತ್ತು. ಆದರೆ, ಅದನ್ನು ಏರ್ ಇಂಡಿಯಾ ಕಡ್ಡಾಯವಲ್ಲವೆಂದು ನಿರ್ಲಕ್ಷ್ಯಿಸಿದ ಕಾರಣದಿಂದ ಆ ತಪಾಸಣೆಗಳನ್ನು ಮಾಡಲಿಲ್ಲ. ಇದೀಗ ಅದೇ ಕಾರಣದಿಂದ ಕಳೆದ ತಿಂಗಳು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ವಿಮಾನದಲ್ಲಿದ್ದ 241 ಜನರು ಮೃತಪಟ್ಟಿದ್ದಾರೆ.
- Sushma Chakre
- Updated on: Jul 12, 2025
- 4:24 pm
ಅದನ್ನು ಯಾಕೆ ಕಡಿತಗೊಳಿಸಿದಿರಿ? ಏರ್ ಇಂಡಿಯಾ ಪೈಲಟ್‌ಗಳ ಕೊನೆಯ ಸಂಭಾಷಣೆಯಲ್ಲಿತ್ತು ಪತನದ ರಹಸ್ಯ
‘ನೀವು ಯಾಕೆ ಕಡಿತಗೊಳಿಸಿದ್ದೀರಿ’, ಇದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೂ ಮುನ್ನ ಕೊನೆಯದಾಗಿ ಪೈಲಟ್ ಸುಮಿತ್ ಸಭರ್ವಾಲ್ ಅವರು ಸಹ-ಪೈಲಟ್ ಕ್ಲೈವ್ ಕುಂದರ್ ಬಳಿ ಕೇಳಿದ ಮಾತು. ‘ನಾನೇನೂ ಮಾಡಿಲ್ಲ’, ಇದು ಕ್ಲೈವ್ ಕುಂದರ್ ಉತ್ತರ. ಇದಾಗಿ ಕ್ಷಣಮಾತ್ರದಲ್ಲಿ ವಿಮಾನ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಹಾಗಾದರೆ, ಪೈಲಟ್‌ಗಳ ಈ ಕೊನೆಯ ಸಂಭಾಷಣೆ ಬಿಚ್ಚಿಟ್ಟ ರಹಸ್ಯ ಏನು? ವಿವರಗಳಿಗೆ ಮುಂದೆ ಓದಿ.
- Ganapathi Sharma
- Updated on: Jul 12, 2025
- 11:03 am