Video: ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. F-7 BGI ತರಬೇತಿ ಜೆಟ್ ಎಂದು ಗುರುತಿಸಲಾದ ವಿಮಾನವು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸುಮಾರು ಮಧ್ಯಾಹ್ನ 1.06 ಕ್ಕೆ ಡಯಾಬರಿ ಪ್ರದೇಶದ ಕಾಲೇಜು ಆವರಣಕ್ಕೆ ಅಪ್ಪಳಿಸಿತು.
ಢಾಕಾ, ಜುಲೈ 21: ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಚೀನಾ ನಿರ್ಮಿತ ವಿಮಾನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. F-7 BGI ತರಬೇತಿ ಜೆಟ್ ಎಂದು ಗುರುತಿಸಲಾದ ವಿಮಾನವು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸುಮಾರು ಮಧ್ಯಾಹ್ನ 1.06 ಕ್ಕೆ ಡಯಾಬರಿ ಪ್ರದೇಶದ ಕಾಲೇಜು ಆವರಣಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಪ್ರಸ್ತುತ ಸ್ಥಳದಲ್ಲಿದೆ ಹುಡುಕಾಟ ನಡೆಸುತ್ತಿವೆ. ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 21, 2025 02:48 PM
Latest Videos

