ಕಾಶಪ್ಪನವರ್ ಅಂತ್ಯ ಸಮೀಪಿಸಿದೆ, ವಿಭೂತಿ ಹೆಸರಲ್ಲಿ ಆಯಿಲ್ ಪೇಂಟ್ ಹಚ್ಚಿಕೊಳ್ಳುವ ಅವನೆಂಥ ಲಿಂಗಾಯತ? ಯತ್ನಾಳ್
ತನ್ನನ್ನೂ ಮಂತ್ರಿ ಮಾಡಿಸಿ ಅಂತ ಯಾವುದೇ ಸ್ವಾಮೀಜೀ, ಜಗದ್ಗುರುಗಳ ಕಾಲಿಗೆ ನಮಸ್ಕರಿಸಿದವನಲ್ಲ, ಅವರ ಪಾದಪೂಜೆ ಮಾಡಿದವನಲ್ಲ, ಕೇವಲ ಕೆಲವು ಸ್ವಾಮಿಗಳ ಕಾಲಿಗೆ ಮಾತ್ರ ನಮಸ್ಕರಿಸುತ್ತೇನೆ, ಯಾವ ಸ್ವಾಮಿಯಿಂದಲೂ ಸ್ವಾರ್ಥಕ್ಕಾಗಿ ಲಾಭ ಪಡೆದುಕೊಂಡಿಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು. ಸಮಾಜ ಸುಧಾರಕ ಬಸವಣ್ಣನವರನ್ನು ಕೆಲ ಸ್ವಾಮೀಜಿಗಳು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ ಎಂದು ಶಾಸಕ ಹೇಳಿದರು.
ವಿಜಯಪುರ, ಜುಲೈ 21: ಕೂಡಲಸಂಗದ ಪೀಠದ ಸ್ವಾಮೀಜಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಯಾವದೇ ಪಕ್ಷಕ್ಕಾಗಿ ಹೋರಾಡುತ್ತಿಲ್ಲ, ಪಂಚಮಸಾಲಿ ಸಮಾಜದ ಒಳಿತಿಗಾಗಿ ಮಾತ್ರ ಅವರು ಹೋರಾಡುತ್ತಿದ್ದಾರೆ, ಅವರ ಕುರಿತು ಹಗುರವಾಗಿ ಮಾತಾಡುವ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅಂತ್ಯಕಾಲ ಬಂದಿದೆ, ದೀಪ ಆರುವ ಮುನ್ನ ಭಗ್ಗನೆ ಉರಿಯುವ ಹಾಗೆ ಅವನ ಅಂತ್ಯವೂ ಸಮೀಪಿಸಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಮಾಧ್ಯಮಗಳು ಟಿಆರ್ಪಿಗೋಸ್ಕರ ಅಯೋಗ್ಯನನ್ನು ವೈಭವೀಕರಿಸುತ್ತಿವೆ, ತೈಲವರ್ಣದ ವಿಭೂತಿ ಹಣೆಗೆ ಬಳಿದುಕೊಳ್ಳುವ ಅವನೆಂಥ ಲಿಂಗಾಯತ? ತಾನೂ ಸಹ ತನ್ನದೇ ಗೋಶಾಲೆಯಲ್ಲಿ ತಯಾರಾಗುವ ವಿಭೂತಿಯನ್ನು ಹಚ್ಚಿಕೊಳ್ಳುತ್ತೇನೆ, ವಿಭೂತಿ ಹಚ್ಚಿದ್ದು ಯಾರಿಗೂ ಕಾಣಬಾರದು ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ಯತ್ನಾಳ್ಗೆ ಜನಬೆಂಬಲವಿದೆ, ವಾಪಸ್ಸು ಕರೆಸಿಕೊಳ್ಳದಿದ್ದರೆ ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಲಿದೆ: ಮಹೇಶ್ ಕುಮಟಳ್ಳಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

