ಸಿದ್ದರಾಮಯ್ಯ-ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ: ಬಸನಗೌಡ ಯತ್ನಾಳ್
ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಇಲ್ಲದ್ದೊಂದು ನೆಪಹೇಳಿ ಭಾಗವಹಿಸದೇ ಹೋಗಿದ್ದು ಯಡಿಯೂರಪ್ಪನವರೊಂದಿಗೆ ಹೊಂದಾಣಿಕೆಯ ಭಾಗವಲ್ಲದೆ ಮತ್ತೇನೂ ಅಲ್ಲ. ಖುದ್ದು ನಿತಿನ್ ಗಡ್ಕರಿ ಅವರೇ ಸಿದ್ದರಾಮಯ್ಯಗೆ ಎರಡು ಸಲ ಪತ್ರ ಬರೆದಿದ್ದಾರೆ, ಹಾಗಾಗಿ ಸಿದ್ದರಾಮಯ್ಯ ತನ್ನನ್ನು ಕರೆದಿಲ್ಲ ಅಂತ ಹೇಳೋದು ತಪ್ಪು, ಅಸಲಿಗೆ ಯಡಿಯೂರಪ್ಪನೇ ಅವರಿಗೆ ಬರಬೇಡವೆಂದು ಹೇಳಿದ್ದರು ಅಂತ ಯತ್ನಾಳ್ ಹೇಳಿದರು.
ಬೆಂಗಳೂರು, ಜುಲೈ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ನಡುವೆ ಭಾರೀ ಹೊಂದಾಣಿಕೆ ಇದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಲೂಟಿ ಮಾಡಬೇಕು ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬ ಲೂಟಿ ಮಾಡಬೇಕು- ಅವರಿಬ್ಬರ ನಡುವೆ ಆಗಿರುವ ಒಪ್ಪಂದ ಅದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಅವರು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧಿಸಿದ್ದಾಗ ಯಡಿಯೂರಪ್ಪ ಮೈಸೂರು ಭಾಗದಲ್ಲಿ ಪ್ರಭಾವೀ ಲಿಂಗಾಯತ ನಾಯಕನಾಗಿದ್ದರೂ ಭಾಷಣ ಮಾಡದೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡರು. ಹಾಗೆಯೇ, ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿದ್ದರು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯಗೆ ತಮ್ಮ ಮಗ ಯತೀಂದ್ರರನ್ನು ಬೇಳಸೋದು ಬೇಕು ಯಡಿಯೂರಪ್ಪಗೆ ಮಗ ವಿಜಯೇಂದ್ರನನ್ನು ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ: ಸಂಚಲನ ಸೃಷ್ಟಿಸಿದ ಯತ್ನಾಳ್ ಹೆಸರಿನ ಪೋಸ್ಟ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

