AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​ಗೆ ಜನಬೆಂಬಲವಿದೆ, ವಾಪಸ್ಸು ಕರೆಸಿಕೊಳ್ಳದಿದ್ದರೆ ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಲಿದೆ: ಮಹೇಶ್ ಕುಮಟಳ್ಳಿ

ಯತ್ನಾಳ್​ಗೆ ಜನಬೆಂಬಲವಿದೆ, ವಾಪಸ್ಸು ಕರೆಸಿಕೊಳ್ಳದಿದ್ದರೆ ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಲಿದೆ: ಮಹೇಶ್ ಕುಮಟಳ್ಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2025 | 1:43 PM

Share

ವಿಜಯೇಂದ್ರ ಪಕ್ಷದ ಅಧ್ಯಕ್ಷನಾಗಿ ಮುಂದುವರಿದರೆ ತಾನು ಪಕ್ಷಕ್ಕೆ ವಾಪಸ್ಸು ಹೋಗೋದಿಲ್ಲ ಎಂದು ಯತ್ನಾಳ್ ಹೇಳುತ್ತಾರಲ್ಲ ಎಂದಾಗ ಮಹೇಶ್ ಕುಮಟಳ್ಳಿ ಏನು ಹೇಳಬೇಕೆಂದು ಗೊತ್ತಾಗದೆ, ವಿಜಯೇಂದ್ರಗೂ ಜನಬೆಂಬಲವಿದೆ, ಎರಡೂ ಬಣಗಳನ್ನು ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆ ಕೆಲಸವನ್ನು ಅದು ಮಾಡುತ್ತದೆ ಮತ್ತು 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಬೆಳಗಾವಿ, ಜುಲೈ 7: ರಾಜ್ಯ ಬಿಜೆಪಿ ಘಟಕದಲ್ಲಿ ಯಾವ ಸಮಸ್ಯೆಗಳೂ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ, ಸಂಘಟಿತ ಮತ್ತು ಸಾಮೂಹಿಕ ಹೋರಾಟದ ಮೂಲಕ 2028 ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಬಿಜೆಪಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumatalli) ಹೇಳಿದರು. ಬಸನಗೌಡ ಪಾಟೀಲ್ ಯತ್ನಾಳ್ ಭಾರೀ ಜನಬೆಂಬಲ ಇರುವ ನಾಯಕ; ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯವರೆಗೆ ಅವರಿಗೆ ಜನಬೆಂಬಲ ಇದೆ, ತಮ್ಮ ಕ್ಷೇತ್ರದಲ್ಲೂ ತನ್ನ ಜೊತೆ ಇರುವ ಜನ ಯತ್ನಾಳ್​ರನ್ನು ನೋಡಿದ ಕೂಡಲೇ ಅವರ ಕಡೆ ಓಡುತ್ತಾರೆ ಎಂದು ಕುಮಟಳ್ಳಿ ಹೇಳಿದರು. ಅವರನ್ನು ವಾಪಸ್ಸು ಕರೆಸಿಕೊಳ್ಳದಿದ್ದರೆ ಮುಂದಿನ ಅಸೆಂಬ್ಲಿ ಚುನಾವಣೆ ಪಕ್ಷದ ಪ್ರದರ್ಶನ ಮೇಲೆ ಪರಿಣಾಮ ಬೀರಲಿದೆ ಎಂದು ಕುಮಟಳ್ಳಿ ಹೇಳಿದರು.

ಇದನ್ನೂ ಓದಿ: ರಾಜ್ಯ ಬಿಜೆಪಿ ಘಟಕಕ್ಕೆ ವಿಜಯೇಂದ್ರ ಕ್ಯಾನ್ಸರ್​ನಂತೆ ಅಮರಿಕೊಂಡಿದ್ದಾನೆ: ಬಸನಗೌಡ ಯತ್ನಾಳ್

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ