ಬರ್ಮಣಿ ಅಧಿಕಾರದಲ್ಲಿದ್ದುಕೊಂಡೇ ದುರಹಂಕಾರಿಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡಬೇಕಿತ್ತು: ಯತ್ನಾಳ್
ನಾರಾಯಣ ಬರ್ಮಣಿ ವಿಅರ್ಎಸ್ ನಿರ್ಧಾರ ತೆಗೆದುಕೊಳ್ಳುವ ಬದಲು ಕೆಲಸದಲ್ಲಿ ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಬೇಕಿತ್ತು, ಅಧಿಕಾರಿದಲ್ಲಿದ್ದುಕೊಂಡೇ ದುರಹಂಕಾರಿಗೆ ಪಾಠ ಕಲಿಸುವ ಕೆಲಸ ಮಾಡಬೇಕಿತ್ತು ಎನ್ನುವ ಬಸನಗೌಡ ಪಾಟೀಲ್, ರಾಜಕಾರಣಿಗಳ ದರ್ಪಕ್ಕೆ ಪೊಲೀಸ್ ಅಧಿಕಾರಿಗಳು ಬಲಿಯಾಗೋದು ಸರಿಯಲ್ಲ ಅಂತ ಹೇಳಿದರು.
ಬೆಂಗಳೂರು, ಜುಲೈ: ಪೊಲೀಸ್ ಅಧಿಕಾರಿ ನಾರಾಯಣ ಬರ್ಮಣಿ (Narayana Barmani ) ಅವರು ಸ್ವಯಂ ನಿವೃತ್ತಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೆಳಗಾವಿಯಲ್ಲಿ ಇದೇ ಅಧಿಕಾರಿಯ ಮೇಲೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಮಾಡಲು ಮುಂದಾಗಿದ್ದರು. ವಿಷಯದ ಬಗ್ಗೆ ಮಾತಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯ ಅಕ್ಷಮ್ಯ ಅಪರಾಧವೆಸಗಿದ್ದಾರೆ ಮತ್ತು ಇಡೀ ಪೊಲೀಸ್ ವ್ಯವಸ್ಥೆ ನೈತಿಕ ಸ್ಥೈರ್ಯ ಕುಗ್ಗುವಂತೆ ಮಾಡಿದ್ದಾರೆ. ನಾರಾಯಣ ಬರ್ಮನಿಯವರು ದಕ್ಷ ಅಧಿಕಾರಿ ಮತ್ತು ಅವರ ಬಗ್ಗೆ ತನ್ನಲ್ಲಿ ಮಾಹಿತಿಯಿದೆ, ಕೋಮು ಗಲಭೆಗಳಂಥ ಸನ್ನಿವೇಶಗಳಲ್ಲಿ ಇವರನ್ನೇ ಡೆಪ್ಯೂಟ್ ಮಾಡಲಾಗುತಿತ್ತು ಮತ್ತು ಇವರು ಚಾಣಾಕ್ಷಯತೆಯಿಂದ ಪರಿಸ್ಥಿತಿಯನ್ನಯ ತಿಳಿಗೊಳಿಸುತ್ತಿದ್ದರು ಎಂದು ಹೇಳುತ್ತಾರೆ.
ಇದನ್ನೂ ಓದಿ: ಬಯ್ಯುತ್ತೇನೆ ಎಂಬ ಕಾರಣಕ್ಕೆ ವಿಜಯೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ