ರಾಜ್ಯ ಬಿಜೆಪಿ ಘಟಕಕ್ಕೆ ವಿಜಯೇಂದ್ರ ಕ್ಯಾನ್ಸರ್ನಂತೆ ಅಮರಿಕೊಂಡಿದ್ದಾನೆ: ಬಸನಗೌಡ ಯತ್ನಾಳ್
ಯಡಿಯೂರಪ್ಪ ಮತ್ತು ವಿಜಯೇಂದ್ರ ಸೇರಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಬಿಟ್ಟು ತಮಗೆ ಬೇಕಾದವರಿಗೆ ಟಿಕೆಟ್ ನೀಡಿದರು, ದಾವಣಗೆರೆಯಲ್ಲಿ ವಿಜಯೇಂದ್ರ ಸಿದ್ದೇಶ್ವರ ಪತ್ನಿ ವಿರುದ್ಧ ಪ್ರಚಾರ ಮಾಡಿದರು, ಪಕ್ಷದ ಸಾರಥ್ಯವನ್ನು ನನ್ನ ಕೈಗೆ ಕೊಟ್ಟರೆ ರಾಜ್ಯದಲ್ಲಿ 150 ಸೀಟು ಗೆದ್ದುಕೊಡುತ್ತೇನೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ, ಜೂನ್ 24: ಬಿಜೆಪಿ ಪಕ್ಷ ರೋಗಗ್ರಸ್ತವಾಗುತ್ತಿದ್ದರೆ ಅದು ಯಡಿಯೂರಪ್ಪನವರ (BS Yediyurappa) ಮಗನಿಂದ, ವಿಜಯೇಂದ್ರ ಪಕ್ಷಕ್ಕೆ ಕ್ಯಾನ್ಸರ್ನಂತೆ ಅಮರಿಕೊಂಡಿದ್ದಾರೆ, ಅವರನ್ನು ಉಚ್ಚಾಟಿಸಿದರೆ ಪಕ್ಷ ಉದ್ಧಾರವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಮೊನ್ನೆ ಅಮಿತ್ ಶಾ ಅವರು ಬಂದಾಗ ಯಡಿಯೂರಪ್ಪನವರಿಗೆ, ನಿಮ್ಮ ಮಗ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯಲು ನಾಲಾಯಕ್ಕು ಅಂತ ಹೇಳಿದ್ದಾರೆ. ಅದಕ್ಕೆ ಯಡಿಯೂರಪ್ಪ ಅವನನ್ನೇದಾರೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ನಾನು ಸತ್ತೇಹೋಗುತ್ತೇನೆ ಅಂತ ಹೇಳಿದ್ದಾರೆ. ಅಂದರೆ ಇವರ ಸಾವು-ಬದುಕಿಗೆ ಪಕ್ಷ ಮತ್ತು ರಾಜ್ಯದ ಭವಿಷ್ಯವನ್ನು ಬಲಿಕೊಡಬೇಕೇ ಎಂದು ಯತ್ನಾಳ್ ಪ್ರಶ್ನಿಸಿದರು.
ಇದನ್ನೂ ಓದಿ: ಬಯ್ಯುತ್ತೇನೆ ಎಂಬ ಕಾರಣಕ್ಕೆ ವಿಜಯೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ