ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿದರೆ ಪಕ್ಷಕ್ಕೆ ವಾಪಸ್ಸು ಹೋಗೋದು ಸಾಧ್ಯವಿಲ್ಲ: ಬಸನಗೌಡ ಯತ್ನಾಳ್
ಬಿಜೆಪಿ ತನ್ನ ಮೇಲೆ ಮತ್ತು ತಾನು ಬಿಜೆಪಿ ಮೇಲೆ ಅವಲಂಬಿತರಾಗಿರುವುದನ್ನು ಒಪ್ಪಿಕೊಳ್ಳುವ ಬಸನಗೌಡ ಯತ್ನಾಳ್, ಕೊಲೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ನ್ಯಾಯ ಕೊಡಿಸುವುದು ರಾಜ್ಯ ಬಿಜೆಪಿ ಘಟಕಕ್ಕೆ ಸಾಧ್ಯವಾಗಲ್ಲ ಎಂದು ಹೇಳಿದರು. ವಾಪಸ್ಸು ಬಿಜೆಪಿಗೆ ಹೋಗಲ್ಲ ಅಂತ ಯತ್ನಾಳ್ ಮತ್ತು ಈಶ್ವರಪ್ಪ ಹೇಳೋದು ಗಮನಿಸಿದರೆ ಇವರಾಗೇ ಪಕ್ಷ ಬಿಟ್ಟು ಬಂದಿದ್ದಾರೇನೋ ಅನಿಸುತ್ತದೆ!
ವಿಜಯಪುರ, ಜೂನ್ 23: ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರರನ್ನೇ (BY Vijayendra) ಮುಂದುವರಿಸಿದರೆ ತಾನು ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ರಾಜ್ಯಾಧ್ಯಕ್ಷನಾಗಬಹುದು ಎಂದು ಹೇಳಲಾಗುತ್ತಿರುವ ಮುರುಗೇಶ್ ನಿರಾಣಿಯವರು ತನ್ನ ಬಗ್ಗೆ ಧೋರಣೆ ಬದಲಾಯಿಸಿರುವ ಬಗ್ಗೆ ಯತ್ನಾಳ್ ಹೆಚ್ಚು ಮಾತಾಡಲಿಲ್ಲ. ನಿರಾಣಿ ಮನೆಯಲ್ಲಿನ ಮದುವೆ ಕಾರ್ಯ್ರಮ ಮತ್ತು ಬಿಎಸ್ ಯಡಿಯೂರಪ್ಪನವರ ಮೊಮ್ಮಗನ ಮದುವೆ-ಎರಡಕ್ಕೂ ತಾನು ಹೋಗಲಿಲ್ಲ, ಒಮ್ಮೆ ಮನಸ್ಸು ಮುರಿದುಕೊಂಡ ಮೇಲೆ ಮುಗೀತು, ಪಕ್ಷಕ್ಕೆ ಯಾರು ರಾಜ್ಯಾಧ್ಯಕ್ಷರಾಗಬೇಕೆಂದು ತಾನು ಹೇಳೂದು ಇಲ್ಲ, ಒಂದು ವೇಳೆ ನಾನು ಹೇಳಿದ್ದೇಯಾದರೆ ಬಿಜೆಪಿ ನಾಯಕರು ಅವರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ: ಬಿಜೆಪಿಗೆ 160 ಸೀಟು ಸಿಗುತ್ತವೆ ಅಂತ ವಿಜಯೇಂದ್ರ ಬೋಗಸ್ ಸಮೀಕ್ಷೆ ಮಾಡಿಸಿದ್ದಾರೆ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ