ಪ್ರಚಾರದ ಹುಚ್ಚು ನಂಗಿಲ್ಲ, ಏನಾದರೂ ವಿಷಯವಿದ್ದರೆ ನಾನೇ ಮಾಧ್ಯಮಗಳೊಂದಿಗೆ ಮಾತಾಡುತ್ತೇನೆ: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಒಂದಿಬ್ಬರು ಮಂತ್ರಿಗಳು ಸರ್ಕಾರದ ಕಾರ್ಯವೈಖರಿ ಮತ್ತು ಅಧಿಕಾರಗಳ ದರ್ಪದ ಬಗ್ಗೆ ಅಸಮಾಧಾನ ಮತ್ತು ಅಸಹನೆ ವ್ಯಕ್ತಪಡಿಡುತ್ತಿರುವ ಜೊತೆಗೆ ವಿರೋಧ ಪಕ್ಷಗಳು ಎಡೆಬಿಡದೆ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಟೀಕೆಗಳನ್ನು ಮಾಡುತ್ತ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರೋದು ನಿಸ್ಸಂದೇಹವಾಗಿ ಸಿದ್ದರಾಮಯ್ಯರನ್ನು ದೃತಿಗೆಡಿಸಿದೆ.
ದೆಹಲಿ, ಜೂನ್ 24: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ (Karnataka Bhavan) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಪ್ರತಿಕ್ರಿಯೆ ವಿಚಿತ್ರವಾಗಿತ್ತು. ಸರ್ ನಿನ್ನೆಯಿಂದ ನೀವು ಮಾಧ್ಯಮಗಳೊಂದಿಗೆ ಮಾತಾಡಿಲ್ಲ ಎಂದು ಪತ್ರಕರ್ತರು ಹೇಳಿದಾಗ, ಸಿದ್ದರಾಮಯ್ಯನವರು ನಂಗೆ ಪ್ರಚಾರದ ಹುಚ್ಚಿಲ್ಲ, ಸುಖಾಸುಮ್ಮನೆ ಮಾಧ್ಯಮಗಳೊಂದಿಗೆ ಮಾತಾಡಲ್ಲ ಎನ್ನುತ್ತಾರೆ. ಕೆಮೆರಾಗಳಿಗೆ ಮುಖ ಕೊಟ್ಟು ಮಾತಾಡದ ಮುಖ್ಯಮಂತ್ರಿಯವರು, ಸಾಯಂಕಾಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಿದೆ, ಅದಾದ ಮೇಲೆ ಮಾತಾಡುತ್ತೆನೆ ಎನ್ನುತ್ತಾ ಲಿಫ್ಟ್ ಕಡೆ ಹೋಗುತ್ತಾರೆ.
ಇದನ್ನೂ ಓದಿ: ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ