ಜಮೀರ್ ಅಹ್ಮದ್ ಮನೆ ಮುತ್ತಿಗೆ ಹಾಕಲು ಬಂದ ರೂಪೇಶ್ ರಾಜಣ್ಣ ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ
ರೂಪೇಶ್ ರಾಜಣ್ಣ ವಿರುದ್ಧ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರಾಜ್ ಖಾನ್ ಮಾಡಿದ್ದಾರೆ. ಇದೇ ಕಾರಣಕ್ಕೆ ರಾಜಣ್ಣ ಮತ್ತು ಅವರ ಸಂಗಡಿಗರು ಸಚಿವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದರು. ಪ್ರತಿಭಟನೆಗೆ ಬಂದಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಇದೆ.
ಬೆಂಗಳೂರು, ಜೂನ್ 24: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಸಂಘಟನೆಯ ಕೆಲ ಸದಸ್ಯರೊಡನೆ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮನೆ ಮುಂದೆ ಪ್ರತಿಭಟನೆ ನಡೆಸಲು ಬಂದಾಗ ಪೊಲೀಸರು ಅವರನ್ನು ತಡೆದರು. ಅದೇ ಕಾರಣಕ್ಕೆ ಪೊಲೀಸ್ ಮತ್ತು ಕನ್ನಡಪರ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಮತ್ತು ರೂಪೇಶ್ ರಾಜಣ್ಣ ನಡುವೆ ಜೋರು ಮಾತಿನ ಕಾಳಗ, ತಳ್ಳಾಟ ನಡೆಯುವುದನ್ನು ದೃಶ್ಯಗಳಲ್ಲ್ಲಿ ನೋಡಬಹುದು. ತಮಗೆ ಮಾತಾಡಲು ಅವಕಾಶ ಕೊಡಿ ಅಂತ ಹೋರಾಟಗಾರು ಹೇಳಿದರೂ ಪೊಲೀಸರು ಅವರನ್ನು ದೂರ ತಳ್ಳುವ ಪ್ರಯತ್ನ ಮಾಡುತ್ತಾರೆ.
ಇದನ್ನೂ ಓದಿ: ವಿಂಗ್ ಕಮಾಂಡರ್ ಸುಳ್ಳು ವಿಡಿಯೋಗಳನ್ನು ಹರಿಬಿಟ್ಟು ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾನೆ: ರೂಪೇಶ್ ರಾಜಣ್ಣ, ಕನ್ನಡಪರ ಹೋರಾಟಗಾರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ