ಥೇಟ್ ಹರ್ಭಜನ್ ಸಿಂಗ್ರಂತೆ ಬೌಲಿಂಗ್ ಮಾಡಿದ ಇಶಾನ್ ಕಿಶನ್; ವಿಡಿಯೋ ವೈರಲ್
Ishan Kishan's Hilarious Bowling: ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ ಮೊದಲ ಎಸೆತವನ್ನು ಹರ್ಭಜನ್ ಸಿಂಗ್ ಶೈಲಿಯಲ್ಲಿ ಮತ್ತು ಕೊನೆಯ ಎಸೆತವನ್ನು ಶೇನ್ ವಾರ್ನ್ ಶೈಲಿಯಲ್ಲಿ ಬೌಲ್ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 1 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುತ್ತಿರುವ ಇಶಾನ್ ಕಿಶನ್ ಇಲ್ಲಿಯವರೆಗೆ ಅಮೋಘ ಪ್ರದರ್ಶನ ನೀಡಿದ್ದಾರೆ. ವಾಸ್ತವವಾಗಿ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುವುದರ ಜೊತೆಗೆ ವಿಕೆಟ್ ಕೀಪಿಂಗ್ ಮಾಡುವುದನ್ನು ನಾವು ಹೆಚ್ಚಾಗಿ ನೋಡಿರುತ್ತೇವೆ. ಆದರೆ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಅವರು ಬೌಲಿಂಗ್ ಕೂಡ ಮಾಡಿದ್ದಾರೆ. ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಏಕೈಕ ಓವರ್ ಬೌಲ್ ಮಾಡಿದ ಇಶಾನ್ ಕಿಶನ್ ತಮ್ಮ ಓವರ್‌ನ ಮೊದಲ ಎಸೆತವನ್ನು ಹರ್ಭಜನ್ ಸಿಂಗ್ ಅವರ ಬೌಲಿಂಗ್ ಶೈಲಿಯನ್ನು ನಕಲು ಮಾಡುವ ಮೂಲಕ ಬೌಲಿಂಗ್ ಮಾಡಿದರು. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಬ್ಬರು ದಿಗ್ಗಜರ ಬೌಲಿಂಗ್ ನಕಲು ಮಾಡಿದ ಕಿಶನ್
ಸೋಮರ್‌ಸೆಟ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಬೌಲಿಂಗ್ ಮಾಡಲು ಬಂದ ಇಶಾನ್ ಕಿಶನ್, ಹರ್ಭಜನ್ ಸಿಂಗ್ ಅವರ ಬೌಲಿಂಗ್ ಶೈಲಿಯನ್ನು ನಕಲಿಸಿ ಮೊದಲ ಎಸೆತವನ್ನು ಬೌಲ್ ಮಾಡಿದರು. ಅವರ ಬೌಲಿಂಗ್ ಅನ್ನು ನೋಡಿ ಎಲ್ಲರೂ ನಕ್ಕರು. ಅಷ್ಟೇ ಅಲ್ಲ, ಅವರು ಈ ಓವರ್‌ನ ಐದನೇ ಮತ್ತು ಕೊನೆಯ ಎಸೆತವನ್ನು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ದಿವಂಗತ ಶೇನ್ ವಾರ್ನ್ ಅವರ ಬೌಲಿಂಗ್ ಶೈಲಿಯನ್ನು ನಕಲು ಮಾಡಿ ಬೌಲ್ ಮಾಡಿದರು. ಇದನ್ನು ನೋಡಿದ ನಂತರವೂ ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಗಾರರಿಗೆ ನಗುವನ್ನು ತಡೆಯಲಾಗಲಿಲ್ಲ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ ಒಂದು ಓವರ್ ಬೌಲ್ ಮಾಡಿ, ಅದರಲ್ಲಿ ಒಂದು ರನ್ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ