ಹಠಾತ್ ಸಾವು: ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಪೂರ್ಣ ಅರೋಗ್ಯವಾಗಿದ್ದವರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಜೂನ್ 13 ರಂದು ಕಾರಿನಲ್ಲಿ ಬಲಿಯಾಗಿದ್ದ ದೇವರಾಜ್(43) ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕರಾಳ ಸತ್ಯ ಬಯಲಾಗಿದೆ. ಅರೋಗ್ಯ ಚೆಕ್ ಮಾಡಿಸಿಕೊಂಡಿದ್ದಾಗ ಸಂಪೂರ್ಣ ಸುರಕ್ಷಿತವಾಗಿದ್ದ ದೇವರಾಜ್ ಹಠಾತ್ ಸಾವನ್ನಪ್ಪಿದ್ದು, ಎಲ್ಲರಿಗೂ ಅಚ್ಚರಿಯಾಗಿತ್ತು.
ಹಾಸನ, (ಜುಲೈ 03): ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಪೂರ್ಣ ಅರೋಗ್ಯವಾಗಿದ್ದವರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಜೂನ್ 13 ರಂದು ಕಾರಿನಲ್ಲಿ ಬಲಿಯಾಗಿದ್ದ ದೇವರಾಜ್(43) ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕರಾಳ ಸತ್ಯ ಬಯಲಾಗಿದೆ. ಅರೋಗ್ಯ ಚೆಕ್ ಮಾಡಿಸಿಕೊಂಡಿದ್ದಾಗ ಸಂಪೂರ್ಣ ಸುರಕ್ಷಿತವಾಗಿದ್ದ ದೇವರಾಜ್ ಹಠಾತ್ ಸಾವನ್ನಪ್ಪಿದ್ದು, ಎಲ್ಲರಿಗೂ ಅಚ್ಚರಿಯಾಗಿತ್ತು. ಅದೇನಾಯ್ತೋ ಏನೋ ಅಂತ ಎಲ್ಲರೂ ಗಾಬರಿಯಾಗಿದ್ದರು. ಇದೀಗ ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಹೃದಯ ಸ್ತಂಭನ. ಸಹಜ ಸಾವು ಎಂದು ವರದಿಯಿಂದ ತಿಳಿದುಬಂದಿದೆ. ಬೆಳಿಗ್ಗೆ ವಾಕ್, ಮನೆಯಲ್ಲೇ ಊಟ ಮಾಡುತ್ತಿದ್ದ ದೇವರಾಜ್, ಜಂಕ್ ಫುಡ್ ನಿಂದ ದೂರಾವಿದ್ದರು. ಆದರೂ ಸಹ ಜಮೀನಿಗೆ ಹೋಗಿ ಬರುವುದಾಗಿ ಹೋಗಿದ್ದ ದೇವರಾಜ್ ವಾಪಸ್ ಮನೆ ಬಂದಿದ್ದು ಹೆಣವಾಗಿ. ಇನ್ನು ಮೃತ ದೇವರಾಜ್ ಪತ್ನಿ ಸುಮ ಜೊತೆ ನಮ್ಮ ಹಾಸನ ಪ್ರತಿನಿಧಿ ಮಂಜುನಾಥ ನಡೆಸಿರುವ ಮಾತುಕತೆ ಇಲ್ಲಿದೆ.