AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರದಲ್ಲಿ ವಿಷಪ್ರಾಶನವಾಗಿದ್ದಕ್ಕೆ ಮೃತ್ಯುಂಜಯ ಸ್ವಾಮೀಜಿ ಅಸ್ವಸ್ಥರಾಗಿದ್ದರು: ಅರವಿಂದ್ ಬೆಲ್ಲದ್, ಶಾಸಕ

ಆಹಾರದಲ್ಲಿ ವಿಷಪ್ರಾಶನವಾಗಿದ್ದಕ್ಕೆ ಮೃತ್ಯುಂಜಯ ಸ್ವಾಮೀಜಿ ಅಸ್ವಸ್ಥರಾಗಿದ್ದರು: ಅರವಿಂದ್ ಬೆಲ್ಲದ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 21, 2025 | 4:28 PM

Share

ಅರವಿಂದ್ ಹೇಳಿರುವುದನ್ನು ವಿಜಯಪುರದಲ್ಲಿ ಇಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗಮನಕ್ಕೆ ತಂದಾಗ, ಅರವಿಂದ್ ಅವರಿಗೆ ಈ ವಿಷಯವನ್ನು ಕೇಳಬೇಕು, ನಾನು ಯಾರ ಮೇಲೂ ವೃಥಾ ಮಾಡೋನಲ್ಲ ಎಂದಿದ್ದಾರೆ. ಬೆಲ್ಲದ್ ಅವರಿಗೆ ದೂರು ಸಲ್ಲಿಸುತ್ತೀರಾ ಅಂತ ಕೇಳಿದರೆ, ವಿಷಯಾಂತರ ಮಾಡಿ ಅದನಿನ್ನೂ ಗಮನಿಸಬೇಕು, ಸ್ವಾಮೀಜಿಯವರಿಗಂತೂ ಮಠದ ಕಡೆ ಲಕ್ಷ್ಯವಿಲ್ಲ, ತಮ್ಮ ಬದುಕನ್ನು ಹೋರಾಟಕ್ಕೆ ಮುಡಿಪಾಗಿಟ್ಟಿದ್ದಾರೆ ಎಂದರು.

ಹುಬ್ಬಳ್ಳಿ, ಜುಲೈ 21: ಕೂಡಲಸಂಗಮದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು (Basavajaya Mruthyunjaya Swamiji) ಅಸ್ವಸ್ಥರಾಗಿ ಆಸ್ಪತ್ರೆ ಸೇರುವಂತಾಗಿದ್ದಕ್ಕೆ ಕಾರಣ ವಿಷಪ್ರಾಶನ, ಅವರ ಆಹಾರದಲ್ಲಿ ವಿಷ ಬೆರೆಸಲಾಗಿತ್ತು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು. ನಗರದಲ್ಲಿಂದು ಮಾತಾಡಿದ ಅವರು ಮಠಕ್ಕೆ ಇಬ್ಬರು ಮುಸ್ಲಿಂ ಯುವಕರ ಪ್ರವೇಶವಾಗಿತ್ತು, ಅವರು ಮಠಕ್ಕೆ ಬಂದುಹೋಗುವ ಜನರ ಮೇಲೆ ನಿಗಾ ಇಡುತ್ತಿದ್ದರು, ಮಠಕ್ಕೆ ಬರುವ ವಾಹನಗಳ ನೋಂದಣಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದರು, ಸ್ವಾಮೀಜೀಯವರು ಅಸ್ವಸ್ಥರಾದ ದಿನ ಈ ಯುವಕರು ಅಡುಗೆ ಕೋಣೆಗೆ ಹೋಗಿದ್ದರು ಎಂದು ಸ್ವಾಮೀಜಿ ತನಗೆ ಫೋನ್ ಮಾಡಿ ಹೇಳಿದ್ದರು ಎಂದು ಅರವಿಂದ್ ಬೆಲ್ಲದ್ ಹೇಳಿದರು. ಸ್ವಾಮೀಜಿ ಚೇತರಿಸಿಕೊಳ್ಳುತ್ತಿರುವರಾದರೂ ಇನ್ನೂ ಐಸಿಯುನಲ್ಲಿದ್ದಾರೆ ಎಂದು ಅರವಿಂದ್ ಬೆಲ್ಲದ್ ಹೇಳಿದರು.

ಇದನ್ನೂ ಓದಿ:  ಪಂಚಮಸಾಲಿ ಪೀಠಕ್ಕೆ ಬೀಗ: ಶಾಲೆಗೆ ರಜೆ, ಮುಖಂಡರ ಎದುರು ಕಣ್ಣೀರಿಟ್ಟ ಮೃತ್ಯುಂಜಯ ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ