ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ: ಸಿದ್ದರಾಮಯ್ಯ, ಸಿಎಂ
ಅಭಿವೃದ್ಧಿಗಳ ಕಾರ್ಯಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಅಂತ ಆಹ್ವಾನ ನೀಡಿದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬರೋದಿಲ್ಲ, ಚುನಾವಣೆ ಮಾಡಿಸಿ ಅಂತಾರೆ; ಆದರೆ ಜನ ನಮ್ಮನ್ನು ಆಶೀರ್ವದಿಸಿ ಅಧಿಕಾರ ನೀಡಿದ್ದು 5-ವರ್ಷ ಕಾಲ ಅಧಿಕಾರ ನಡೆಸಲು, ಚುನಾವಣೆ ನಾಳೆ ನಡೆಯಲಿ ಅಥವಾ 2028, ಪುನಃ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷವೇ ಎಂದು ಸಿಎಂ ಹೇಳಿದರು.
ತುಮಕೂರು, ಜುಲೈ 21: ತುಮಕೂರಿನ ಪಾವಗಡದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ ಪಾವಗಡ ಶಾಸಕ ವೆಂಕಟೇಶ್ (MLA Venkatesh) ಮತ್ತು ಮಾಜಿ ಸಚಿವ ವೆಂಕಟರಮಣಪ್ಪ ತಮಗೆ ಸಲ್ಲಿಸಿರುವ ಬೇಡಿಕೆಗಳ ಪಟ್ಟಿಯನ್ನು ಜನರಿಗೆ ತೋರಿಸಿದರು. ತಾಲೂಕಿನಲ್ಲಿರುವ 23 ಕೆರೆಗಳನ್ನು ತುಂಬಿಸುವುದು ಅವರ ಪ್ರಮುಖ ಬೇಡಿಕೆಯಾಗಿದೆ, ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಬಿಡುಗಡೆ ಮಾಡೋದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ಬಜೆಟ್ ಮಂಡಿಸುವಾಗ ಹೇಳಿದ್ದರು, ಅದರೆ ಇದುವರೆಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು. ಆದರೆ ತಮ್ಮ ಸರ್ಕಾರ ಈ ಭಾಗದ ಜನರ ಕೈ ಬಿಡೋದಿಲ್ಲ, ಭದ್ರಾ ಮೇಲ್ದಂಡೆ ಯೋಜನೆ ಪೂರ್ತಿಗೊಳಿಸುತ್ತೇವೆ ಮತ್ತು ಸಣ್ಣ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕೆಂದ ಮಾಜಿ ಡಿವೈಎಸ್ಪಿ: ಕಾರಣ ಇಲ್ಲಿದೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

