ವಿವಿಧ ಕಾಮಗಾರಿಗಳ ಉದ್ಘಾಟನೆಗೆಂದು ಪಾವಗಡಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಣಿಸುತ್ತಿದ್ದಾರೆ ಆದರೆ ಡಾ ಹೆಚ್ ಸಿ ಮಹದೇವಪ್ಪ ಕಾಣುತ್ತಿಲ್ಲವಲ್ಲ ಅಂತ ಅಂದುಕೊಳ್ಳುತ್ತಿರುವವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ನಿರಾಶೆಗೊಳಿಸುವುದಿಲ್ಲ. ಸಿದ್ದರಾಮಯ್ಯ ಪೊಲೀಸ್ ವಂದನೆ ಸ್ವೀಕರಿಸುವಾಗ ಅವರ ಎಡಭಾಗದಲ್ಲಿ ಮಹದೇವಪ್ಪರನ್ನು ನೋಡಬಹುದು. ಸಿಎಂ ಇದ್ದಲ್ಲಿ ಮಹದೇವಪ್ಪ ಇಲ್ಲವೇ ಭೈರತಿ ಸುರೇಶ್ ಇರಲೇಬೇಕು. ಇದು ಸಿದ್ದರಾಮಯ್ಯನವರ ಅಘೋಷಿತ ಗ್ಯಾರಂಟಿ!
ತುಮಕೂರು, ಜುಲೈ 21: ತುಂಗಭದ್ರಾ ನೀರು ಸರಬರಾಜು ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೆಲಿಕಾಪ್ಟರ್ನಲ್ಲಿ ಪಾವಗಡ ಆಗಮಿಸಿದರು. ಚಾಮರಾಜನಗರದಂತೆ (Chamarajanagar) ಪಾವಗಡ ರಾಜ್ಯದ ಮುಖ್ಯಮಂತ್ರಿಯಾದವರಿಗೆ ಅಪಶಕುನ, ಶಾಪಗ್ರಸ್ಥ ಪ್ರದೇಶ ಎಂಬ ಪ್ರತೀತಿ ಇದೆ. ಇಲ್ಲಿಗೆ ಭೇಟಿ ನೀಡುವ ಸಿಎಂಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ವಿಚಾರವಾದಿ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಹಲವಾರು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ ಮತ್ತು ಅಲ್ಲೊಂದು ಸಂಪುಟ ಸಭೆಯನ್ನು ಸಹ ನಡೆಸಿದ್ದಾರೆ. ಇವತ್ತು ಅವರು ಪಾವಗಡಕ್ಕೂ ಆಗಮಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್, ಪಾವಗಡ ಶಾಸಕ ವೆಂಕಟೇಶ್ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸ್ವಾಗತಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕೆಂದ ಮಾಜಿ ಡಿವೈಎಸ್ಪಿ: ಕಾರಣ ಇಲ್ಲಿದೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ