AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದೆಂಥಾ ಅಹಸ್ಯ; ಕುಡಿದ ಮತ್ತಲ್ಲಿ ರೈಲಿನ ಮಹಿಳಾ ಕೋಚ್‌ನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ನಿಂತ ಯುವಕ

ಕೆಲ ಪುಂಡರು ಸಾರ್ವಜನಿಕ ಸ್ಥಳಗಳಲ್ಲಿ ಅಹಸ್ಯಕರ ವರ್ತನೆಯನ್ನು ತೋರುತ್ತಿರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಮುಂಬೈನಲ್ಲೂ ಇಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಲೋಕಲ್‌ ಟ್ರೈನ್‌ನ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬಂದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ಅಸಹ್ಯಕರ ವರ್ತನೆಯನ್ನು ತೋರಿದ್ದಾನೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Video: ಇದೆಂಥಾ ಅಹಸ್ಯ; ಕುಡಿದ ಮತ್ತಲ್ಲಿ ರೈಲಿನ ಮಹಿಳಾ ಕೋಚ್‌ನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ನಿಂತ ಯುವಕ
ರೈಲಿನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ನಿಂತ ಯುವಕImage Credit source: Social Media
ಮಾಲಾಶ್ರೀ ಅಂಚನ್​
|

Updated on: Jun 15, 2025 | 6:10 PM

Share

ಮುಂಬೈ, ಜೂನ್.‌ 15: ವಿಶೇಷವಾಗಿ ಮಹಿಳೆಯರು ಹೊರಗಡೆ ಓಡಾಡುವ ಸಂದರ್ಭದಲ್ಲಿ ಕೆಲ ಪುಂಡರು ಅವರೊಂದಿಗೆ ಅಸಭ್ಯ ವರ್ತನೆಯನ್ನು ತೋರುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಮುಂಬೈನಲ್ಲೂ ಕೂಡಾ ಇಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪುಂಡನೊಬ್ಬ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಎದುರಲ್ಲಿ ನಿಂತು ಪ್ಯಾಂಟ್‌ ಜಿಪ್‌ ತೆರೆದಿದ್ದಾನೆ. ಹೌದು ಲೋಕಲ್‌ ಟ್ರೈನ್‌ನ (Mumbai Local train) ಮಹಿಳಾ ಕೋಚ್‌ನಲ್ಲಿ ಪ್ರಯಾಣಿಸುತ್ತಾ ಆತ ಪ್ಯಾಂಟ್‌ ಜಿಪ್‌ (man unzips pant) ತೆರೆಯಲು ಯತ್ನಿಸಿದ್ದು, ಈತನ ಅಸಭ್ಯ ವರ್ತನೆಯನ್ನು ಫೋನ್‌ನಲ್ಲಿ ರೆಕಾರ್ಡ್‌ ಮಾಡಿ ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ರೈಲಿನ ಮಹಿಳಾ ಕೋಚ್‌ನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ನಿಂತ ಯುವಕ:

ಈ ಘಟನೆ ಜೂನ್‌ 14 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಮುಂಬೈನ ಲೋಕಲ್‌ ಟ್ರೈನ್‌ ಒಂದರಲ್ಲಿ ನಡೆದಿದ್ದು, ಯುವಕನೊಬ್ಬ ಮಹಿಳಾ ಕೋಚ್‌ನಲ್ಲಿ ನಿಂತು ಪ್ಯಾಂಟ್‌ ಜಿಪ್‌ ತೆರೆಯಲು ಯತ್ನಿಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಈತ ಮಹಿಳಾ ಕೋಚ್‌ಗೆ ಬಂದು ಅಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಪ್ಯಾಂಟ್‌ ಜಿಪ್‌ ತೆರೆಯಲು ಯತ್ನಿಸಿದ್ದಾನೆ. ಈ ಬಗ್ಗೆ ಮಹಿಳೆಯೊಬ್ಬರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ್ದು, ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಆತನಿಗೆ ಗದರಿ ರೈಲಿನಿಂದ ಕೆಳಗಿಳಿಸಿದ್ದಾರೆ.

ಇದನ್ನೂ ಓದಿ
Image
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
Image
ಸಿಂಧೂರ ಹಚ್ಚುವಾಗ ವರನ ಕೈ ನಡುಗಿತ್ತೆಂದು ಮದುವೆ ಬೇಡ ಎಂದ ವಧು
Image
ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ
Image
ಬಾರ್‌ಕೋಡ್‌ ತೋರಿಸಿ ಪ್ರಯಾಣಿಕರಿಂದ ಟಿಪ್ ಪಡೆಯುತ್ತಿರುವ ಅಡುಗೆ ಸಿಬ್ಬಂದಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಮಾನಸಿ (Manasi) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ನಿಂತ ಕುಡುಕ ಯುವಕನೊಬ್ಬ ಪ್ಯಾಂಟ್‌ ಜಿಪ್‌ ತೆರೆದು ಬಳಿಕ ಪ್ಯಾಂಟ್‌ ಬಿಚ್ಚಲು ಯತ್ನಿಸಿದ್ದಾನೆ. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು ಈತನ ಅಸಭ್ಯ ವರ್ತನೆಯನ್ನು ತಾಳಲಾರದೆ ಗದರಿ ಆತನನ್ನು ರೈಲಿನಿಂದ ಹೊರಗಿಳಿಯುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇಂತಹ ಅಸಭ್ಯ ವರ್ತನೆಗಳು ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿದ್ದು, ಈ ಘಟನೆಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ