Video : ಇವರೇ ನೋಡಿ ಆದರ್ಶ ದಂಪತಿಗಳು : ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ
ಈಗಿನ ಕಾಲದಲ್ಲಿ ಕೆಲವು ವ್ಯಕ್ತಿಗಳು ನಡೆದುಕೊಳ್ಳುವ ರೀತಿ ನೋಡಿದರೆ ದೇವ್ರೇ ಎಂತಹ ಕಾಲ ಬಂದೋಯ್ತು ಎಂದೆನಿಸುತ್ತದೆ. ತಮ್ಮ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೆ ಅನ್ನೋ ಪರಿವೇ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕವಾಗಿ ವರ್ತಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿಯೂ ಸಿಗರೇಟ್ ಸೇದಿ ತನ್ನ ಪತಿಗೂ ಕೂಡ ಸೇದಲು ನೀಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.

ಯಾವುದೇ ಸಂಬಂಧ (relationship) ವಿರಲಿ ಒಬ್ಬರಿಗೊಬ್ಬರು ಜೊತೆಯಾಗು ನಿಲ್ಲೋದು ಬಹಳ ಮುಖ್ಯ. ಕೆಲವೊಮ್ಮೆ ಈ ಸಣ್ಣ ಪುಟ್ಟ ಮನಸ್ತಾಪಗಳೇ ಸಂಬಂಧವನ್ನು ಹಾಳು ಮಾಡುತ್ತವೆ. ಆದರೆ ಈ ವಿಡಿಯೋದಲ್ಲಿ ಪತಿ ಹಾಗೂ ಪತ್ನಿಯ ನಡುವಿನ ಕೇರಿಂಗ್ ಹಾಗೂ ಶೇರಿಂಗ್ ನೋಡಿದ್ರೆ ತಲೆ ಗ್ರಿರ್ ಎನ್ನುತ್ತದೆ. ಹೌದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್‌ನಲ್ಲಿ ಕುಳಿತ ಮಹಿಳೆಯೊಬ್ಬಳು ಸಿಗರೇಟ್ ಸೇದುತ್ತಾ, ಪತಿಯ ಬಾಯಿಗೂ ಕೂಡ ಸಿಗರೇಟ್ ಇಟ್ಟಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಕಣ್ಣಲ್ಲಿ ಇನ್ನು ಏನೇನೋ ನೋಡ್ಬೇಕೋ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.
@dbabuadvocate ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಕೆಲವು ಜೋಡಿಗಳನ್ನು ದೇವರು ಸ್ವರ್ಗದಲ್ಲೇ ನಿಶ್ಚಯ ಮಾಡಿರುತ್ತಾನೆ. 36 ಗುಣಗಳನ್ನು ಹೊಂದಿರುವ ಜೋಡಿ ಇದುವೇ ಇರಬೇಕು, ಇದನ್ನೇ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು ಎನ್ನುವುದು. ಆದರೆ ಮಹಿಳೆಯೂ ಹೆಂಡತಿಯೋ, ಪ್ರೇಮಿಯೋ ತಿಳಿದಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೈಕ್ ಸಿಗ್ನಲ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಹಿಂಬದಿ ಕುಳಿತ ಮಹಿಳೆಯೂ ಸಿಗರೇಟ್ ಸೇದುತ್ತಿದ್ದಾಳೆ. ಮುಂದೆ ಕುಳಿತ ವ್ಯಕ್ತಿಗೂ ಕೂಡ ಸಿಗರೇಟ್ ಸೇದಲು ಕೊಟ್ಟಿದ್ದು, ಆತನ ಬಾಯಿಗೆ ಸಿಗರೇಟ್ ಇಡುವುದನ್ನು ನೋಡಬಹುದು.
ಇದನ್ನೂ ಓದಿ :Video : ಯಮನೇ ಒಂದು ಬಾರಿ ವಿಚಾರಿಸಿ ಹೋದಂಗಾಯ್ತು, ಈತನ ಆಯಸ್ಸು ಎಷ್ಟು ಗಟ್ಟಿಯಿದೆ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
इसे कहते है 36 गुणों वाली जोड़ी इसे कहते है कंधा से कंधा मिलाकर चलना।
लेकिन ये गारंटी नही कि उसकी #wife है या #GirlFriend हो। pic.twitter.com/puHSIqsvGw
— Adv Deepak Babu (@dbabuadvocate) June 4, 2025
ಜೂನ್ 4 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಈಗಾಗಲೇ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಇವರೇ ನೋಡಿ ಆದರ್ಶ ದಂಪತಿಗಳು, ನಮ್ಮ ಕಣ್ಣು ಪಾವನವಾಯಿತು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಆತ ಇಂತಹ ಪತ್ನಿಯನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಮ್ಮ ಕಾಲದಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದರೆ ಹೆಂಡ್ತಿ ಚಂಡಿಯಾಗುತ್ತಿದ್ದಳು..ಆದರೆ ಈಗ ಕಾಲ ನೋಡಿ ಹೇಗಾದಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 8 June 25








