Viral: ಕೇವಲ 180 ಮೀಟರ್ ದೂರ ಕ್ರಮಿಸಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಯುವತಿ; ಯಾಕೆ ಗೊತ್ತಾ?
ಹೋಗುವ ಸ್ಥಳಕ್ಕೆ 5 ರಿಂದ 10 ನಿಮಿಷದಲ್ಲಿ ತಲುಪುತ್ತೇವೆ ಎಂದಾದ್ರೆ ಜನ ಟ್ಯಾಕ್ಸಿ ದುಡ್ಡು ಉಳಿಸುವ ಸಲುವಾಗಿ ಕಾಲ್ನಡಿಗೆಯಲ್ಲೇ ಆ ಸ್ಥಳಕ್ಕೆ ಹೋಗ್ತಾರೆ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, 180 ಮೀಟರ್ ಕ್ರಮಿಸಲು ಅಂದ್ರೆ ಕೇವಲ 2 ನಿಮಿಷದ ದಾರಿಗೆ ಯುವತಿಯೊಬ್ಬಳು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಬೀದಿ ನಾಯಿಗಳ ಹಾವಳಿಗೆ ಹೆದರಿ ಆಕೆ ಮನೆಗೆ ತಲುಪಲು ಕೇವಲ 2 ನಿಮಿಷದ ದಾರಿಯಿದ್ದರೂ ಟ್ಯಾಕ್ಸಿ ಬುಕ್ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ದೆಹಲಿ, ಜೂನ್. 6: ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ (Stray Dogs) ಕಾಟ ತೀರಾ ಹೆಚ್ಚಾಗಿದೆ. ಇವುಗಳ ಹಾವಳಿ ತೀರಾ ಹೆಚ್ಚಾಗಿದ್ದು, ಅದೆಷ್ಟೋ ಜನ ಇವುಗಳ ಭಯಾನಕ ದಾಳಿಗೆ ತುತ್ತಾಗಿದ್ದಾರೆ. ಇದೇ ಭಯದಿಂದ ಈಗಂತೂ ಜನ ಮನೆಯಿಂದ ಹೊರ ಬರಲು ಕೂಡಾ ಹೆದರುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಬೀದಿ ನಾಯಿಗಳ ಭಯದಿಂದ, ನಡೆದುಕೊಂಡು ಹೋದ್ರೆ, ಈ ಬೀದಿ ನಾಯಿಗಳ ಹಾವಳಿಗೆ ನನ್ನ ಗತಿ ಏನಾಗುತ್ತೋ ಏನೋ ಎನ್ನುತ್ತಾ ಕೇವಲ 2 ನಿಮಿಷದ ದಾರಿಗೆ ಬೈಕ್ ಟ್ಯಾಕ್ಸಿ (young woman booked bike taxi for just 2 minutes away) ಬುಕ್ ಮಾಡಿದ್ದಾಳೆ. ಹೌದು ಮನೆಗೆ ತಲುಪಲು ಕೇವಲ 2 ನಿಮಿಷಗಳ ದಾರಿಯಿದ್ದರೂ ಕೂಡಾ, ಎಲ್ಲಿ ಈ ನಾಯಿಗಳು ಅಟ್ಯಾಕ್ ಮಾಡುತ್ತವೋ ಎಂಬ ಭಯಕ್ಕೆ ದಹಲಿಯ ಈ ಯುವತಿ ರೈಡ್-ಹೇಲಿಂಗ್ ಅಪ್ಲಿಕೇಶನ್ ಮೂಲಕ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಕೇವಲ 2 ನಿಮಿಷದ ದಾರಿಗೆ ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಯುವತಿ:
ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಬೀದಿ ನಾಯಿಗಳ ಹಾವಳಿಗೆ ಹೆದರಿ ಯುವತಿಯೊಬ್ಬಳು ರೈಡ್-ಹೀಲಿಂಗ್ ಆಪ್ಲಿಕೇಶನ್ ಮೂಲಕ ಬರೀ 180 ಮೀ. ಕ್ರಮಿಸಲು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಕೇವಲ 2 ನಿಮಿಷದ ದಾರಿಗೆ ಟ್ಯಾಕ್ಸಿ ಬುಕ್ ಮಾಡಿದ್ದನ್ನು ಕಂಡು ರೈಡರ್ ಶಾಕ್ ಆಗಿದ್ದು, ಇದು ಸರಿಯಾದ ವಿಳಾಸ ತಾನೇ ಎಂದು ಕೇಳಿದ್ದಾನೆ. ಬೀದಿನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಾನು ಎರಡು ನಿಮಿಷದ ದಾರಿಗೆ ಟ್ಯಾಕ್ಸಿ ಬುಕ್ ಮಾಡಿದ್ದು ಎಂದು ಆ ಯುವತಿ ಹೇಳಿಕೊಂಡಿದ್ದು, ಆಕೆಯ ಕಾರಣ ಕೇಳಿ ರೈಡರ್ ನಸು ನಕ್ಕಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Delhi Woman Books Bike for 180m to avoid stray dogs😭 pic.twitter.com/silhSqvUKV
— Ghar Ke Kalesh (@gharkekalesh) June 7, 2025
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೈಕ್ ಟ್ಯಾಕ್ಸಿ ರೈಡರ್ ಕೇವಲ 180 ಮೀ. ದೂರ ಕ್ರಮಿಸಲು ಟ್ಯಾಕ್ಸಿ ಬುಕ್ ಮಾಡಿದ್ದಾ, ಲೊಕೇಷನ್ ಸರಿಯಾಗಿದೆ ತಾನೇ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಆಗ ಆ ಯುವತಿ ಬೀದಿ ನಾಯಿಗಳೆಂದರೆ ನನಗೆ ತುಂಬಾ ಭಯ, ಅದಕ್ಕಾಗಿ ನಾನು 2 ನಿಮಿಷಗಳ ದಾರಿಗೂ ಟ್ಯಾಕ್ಸಿ ಬುಕ್ ಮಾಡಿದ್ದು ಎಂದು ಹೇಳಿಕೊಂಡಿದ್ದಾಳೆ. ಈ ಕಾರಣ ಕೇಳಿ ಟ್ಯಾಕ್ಸಿ ರೈಡರ್ ನಸು ನಕ್ಕಿದ್ದು, ನಂತರ ಸೇಫ್ ಆಗಿ ಆಕೆಯನ್ನು ಮನೆಗೆ ಬಿಟ್ಟು ಬಂದಿದ್ದಾನೆ.
ಇದನ್ನೂ ಓದಿ: ಅಮೇರಿಕಾದ ಕಟ್ಟಡ ಕಾರ್ಮಿಕರಿಗೆ ಬಿಸಿ ಬಿಸಿ ವಡೆ-ಚಟ್ನಿ ನೀಡಿದ ಭಾರತೀಯ ಮಹಿಳೆ
ಜೂನ್ 07 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಉತ್ತರ ಭಾರತದಲ್ಲಿ ಬೀದಿ ನಾಯಿಗಳು ದೊಡ್ಡ ಸಮಸ್ಯೆಯಾಗಿ ಬಿಟ್ಟಿವೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮುಂದಿನ ಬಾರಿ ಶೌಚಾಲಯದಲ್ಲಿ ಹಲ್ಲಿ ಕಂಡ್ರೂ ಅಲ್ಲಿಂದ ಹೊರ ಬರಲು ಟ್ಯಾಕ್ಸಿ ಬುಕ್ ಮಾಡಿʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಿಡಿಯೋದಲ್ಲಿ ಒಂದೇ ಒಂದು ನಾಯಿ ಕೂಡಾ ಕಾಣಲು ಸಿಕ್ಕಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʼಇದು ತಂತ್ರಜ್ಞಾನ ಮತ್ತು ಸೌಲಭ್ಯಗಳ ಅತ್ಯುತ್ತಮ ಬಳಕೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








