AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA vs NZ: ಆಲೆನ್ ಅಬ್ಬರ..! ಸೆಮೀಸ್​ನಲ್ಲಿ ದಿಕ್ಕು ತಪ್ಪಿದ ದಕ್ಷಿಣ ಆಫ್ರಿಕಾ; ಕಿವೀಸ್​ಗೆ ಫೈನಲ್ ಟಿಕೆಟ್

New Zealand Dominates South Africa in T20 WC 2026 Semifinal: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2026 ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಫಿನ್ ಆಲೆನ್ ಅವರ ವಿಶ್ವದಾಖಲೆಯ ಶತಕದಿಂದಾಗಿ ನ್ಯೂಜಿಲೆಂಡ್ 13ನೇ ಓವರ್‌ನಲ್ಲಿ ಸುಲಭ ಜಯ ಸಾಧಿಸಿತು. ಈ ಟೂರ್ನಿಯಲ್ಲಿ ಅಜೇಯವಾಗಿದ್ದ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಸೋತು ಸೆಮಿಫೈನಲ್‌ನಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸಿದೆ.

SA vs NZ: ಆಲೆನ್ ಅಬ್ಬರ..! ಸೆಮೀಸ್​ನಲ್ಲಿ ದಿಕ್ಕು ತಪ್ಪಿದ ದಕ್ಷಿಣ ಆಫ್ರಿಕಾ; ಕಿವೀಸ್​ಗೆ ಫೈನಲ್ ಟಿಕೆಟ್
Sa Vs Nz
ಪೃಥ್ವಿಶಂಕರ
|

Updated on:Mar 04, 2026 | 10:21 PM

Share

ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ (2026 T20 World Cup Semifinal) ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ (New Zealand vs South Africa) ತಂಡಗಳು ಮುಖಾಮುಖಿಯಾಗಿದ್ದವು. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿದ್ದ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲೂ ಗೆದ್ದು ಸತತ ಎರಡನೇ ಬಾರಿಗೆ ಫೈನಲ್​ಗೇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಆರಂಭಿಕ ಫಿನ್ ಆಲೆನ್ ಅವರ ವಿಶ್ವದಾಖಲೆಯ ಶತಕದ ನೆರವಿನಿಂದ ಏಕಪಕ್ಷೀಯವಾಗಿ ಗೆದ್ದು ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಟೂರ್ನಿಯಲ್ಲಿ ಮೊದಲ ಸೋಲು ಕಂಡ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಸುತ್ತಿನಲ್ಲೇ ತನ್ನ ಪ್ರಯಾಣ ಅಂತ್ಯಗೊಳಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 1 ವಿಕೆಟ್ ಕಳೆದುಕೊಂಡು 13ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

ಆಫ್ರಿಕಾಗೆ ಆರಂಭಿಕ ಆಘಾತ

ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಪಂದ್ಯದ ಆರಂಭದಲ್ಲೇ ಸೋಲಿನ ಮುನ್ಸೂಚನೆ ನೀಡಿತು. ಏಕೆಂದರೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ವಿಫಲರಾದರು. ತಂಡದ ಮೂವರು ಬ್ಯಾಟ್ಸ್‌ಮನ್​ಗಳು ಬಹುಬೇಗನೇ ಪೆವಿಲಿಯನ್‌ ಸೇರಿಕೊಂಡರು. ನಾಯಕ ಮಾರ್ಕ್ರಾಮ್ 18 ರನ್‌ಗಳಿಗೆ ಔಟಾದರೆ, ಡಿ ಕಾಕ್ 10 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ರಿಕಲ್ಟನ್​ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗದೆ ಮೊದಲ ಎಸೆತದಲ್ಲೇ ಔಟಾದರು. ಡೆವಾಲ್ಡ್ ಬ್ರೆವಿಸ್ 34 ರನ್ ಗಳಿಸಿದರೆ, ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಮಾರ್ಕೊ ಯಾನ್ಸೆನ್ ಅಜೇಯ 55 ರನ್ ಗಳಿಸಿ ತಂಡವನ್ನು 169 ರನ್​ಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಆಲೆನ್- ಸೈಫರ್ಟ್​ ಅಬ್ಬರ

170 ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ಆಫ್ರಿಕಾ ಬೌಲಿಂಗ್ ವಿಭಾಗದ ಲಯವನ್ನು ಆರಂಭದಲ್ಲೇ ಕೆಡಿಸಿದರು. ಆರಂಭಿಕರಾದ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಮೊದಲ ವಿಕೆಟ್‌ಗೆ 117 ರನ್‌ಗಳ ಜೊತೆಯಾಟ ನೀಡಿದರು. ಸೀಫರ್ಟ್ 33 ಎಸೆತಗಳಲ್ಲಿ 58 ರನ್ ಗಳಿಸಿದರೆ, ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದರು. ಅಲೆನ್ ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳನ್ನು ಬಾರಿಸಿದರು. ಅವರ ಸ್ಟ್ರೈಕ್ ರೇಟ್ ದಾಖಲೆಯ 303.03 ಆಗಿತ್ತು. ಆಲೆನ್ ಶತಕದ ನೆರವಿನಿಂದ ನ್ಯೂಜಿಲೆಂಡ್ ಕೇವಲ 12.5 ಓವರ್‌ಗಳಲ್ಲಿ 170 ರನ್‌ಗಳ ಗುರಿಯನ್ನು ತಲುಪಿತು. ನ್ಯೂಜಿಲೆಂಡ್​ನ ಈ ಇನ್ನಿಂಗ್ಸ್​ನಲ್ಲಿ 10 ಸಿಕ್ಸರ್‌ಗಳು ಮತ್ತು 19 ಬೌಂಡರಿಗಳು ಸೇರಿದ್ದವು.

IND vs ENG: ಭಾರತ- ಇಂಗ್ಲೆಂಡ್ ಕಾಳಗಕ್ಕೆ ಮಳೆ ಅಡ್ಡಿ? ಪಂದ್ಯ ರದ್ದಾದರೆ ಯಾರು ಫೈನಲ್​ಗೆ?

ದುಬಾರಿಯಾದ ಆಫ್ರಿಕಾ ಬೌಲರ್​ಗಳು

ಕಿವೀಸ್ ಆರಂಭಿಕರ ಮುಂದೆ ಸಂಪೂರ್ಣವಾಗಿ ಶರಣಾದ ಆಫ್ರಿಕಾ ಬೌಲರ್​ಗಳಿಗೆ ರನ್​ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ಪ್ರಮುಖ ವೇಗಿ ಮಾರ್ಕೊ ಯಾನ್ಸೆನ್ 17 ಎಸೆತಗಳಲ್ಲಿ 53 ರನ್‌ಗಳನ್ನು ನೀಡಿದರೆ, ರಬಾಡ 28 ರನ್‌ ಮತ್ತು ಬಾಷ್ ಎರಡು ಓವರ್‌ಗಳಲ್ಲಿ 35 ರನ್‌ಗಳನ್ನು ನೀಡಿದರು. ಕೇಶವ್ ಮಹಾರಾಜ್ ಕೂಡ ಮೂರು ಓವರ್‌ಗಳಲ್ಲಿ 33 ರನ್‌ಗಳನ್ನು ನೀಡಿದರೆ, ಎನ್‌ಗಿಡಿ 22 ರನ್‌ಗಳನ್ನು ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Wed, 4 March 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು?
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಸಾರ್ವಜನಿಕರೇ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್!
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಲವ್ ವಿಚಾರಕ್ಕೆ 17ರ ಮಗಳನ್ನೇ ಕೊಂದ ಅಪ್ಪ: ತಂದೆಯ ಅಸಲಿ ಮುಖ ಬಯಲು
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಶತಕದ ಪಂದ್ಯದಲ್ಲಿ ಒಂದೇ ರನ್​ಗೆ ಸುಸ್ತಾದ ಶ್ರೇಯಸ್ ಅಯ್ಯರ್
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಜಿಟಿ ದೇವೇಗೌಡಗೆ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು​ ಸಮಾವೇಶ
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ