ಸಿಂಧೂರ ಹಚ್ಚುವಾಗ ನಡುಗಿತು ವರನ ಕೈ, ಈ ಮದುವೆ ಬೇಡ ಎಂದು ಹಠ ಹಿಡಿದು ಕುಳಿತ ವಧು
ಮದುವೆ ಮಂಟಪದಲ್ಲಿವೇ ಮದುವೆ ಮುರಿದು ಬಿದ್ದಿರುವ ಘಟನೆಗಳ ಬಗ್ಗೆ ನೀವು ಆಗಾಗ ಕೇಳಿರುತ್ತೀರಿ. ಆದರೆ ಇದೀಗ ಇಂತಹದೊಂದು ಘಟನೆಯೂ ನಡೆದಿದ್ದು, ವಧು ಕೊನೆ ಕ್ಷಣದಲ್ಲಿ ಮದುವೆ ಬೇಡ ಎನ್ನಲು ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ. ನೋಡಲು ಹುಡುಗನು ಚೆನ್ನಾಗಿಯೇ ಇದ್ದ, ಆದರೆ ಮದುವೆಯ ಸಂದರ್ಭ ವರನ ಕೈ ನಡುಗಿತು ಎನ್ನುವುದೇ ಈ ಮದುವೆ ನಿಲ್ಲಲು ಪ್ರಮುಖ ಕಾರಣವಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಹಾರ, ಜೂನ್ 10: ಮದುವೆ (marriage) ಎಂದರೆ ಸಂಭ್ರಮ, ಆದರೆ ಕ್ಷುಲ್ಲಕ ಕಾರಣಗಳಿಂದ ಮದುವೆಗಳು ನಿಂತು ಹೋಗಿ ಸಂತೋಷವೆಲ್ಲವು ಅರೆಘಳಿಗೆಯಲ್ಲೇ ಮರೆಯಾದ ಘಟನೆಗಳು ಇವೆ. ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಮುಖ ಆಚರಣೆಯಲ್ಲಿ ಒಂದಾದ ವಧುವಿನ ಹಣೆಗೆ ಕುಂಕುಮ ಹಚ್ಚುವ ವೇಳೆ ವರನ ಕೈ ನಡುಗಲು ಶುರುವಾಗಿದೆ. ಹೌದು, ಇದನ್ನೇ ಕಾರಣವಾಗಿಟ್ಟುಕೊಂಡು ವಧುವು ನಾನು ಮದುವೆಯಾಗಲ್ಲ, ಈ ಮದುವೆ ಬೇಡ ಎಂದಿದ್ದಾಳೆ. ಈ ಘಟನೆಯೂ ಬಿಹಾರ (Bihar) ದ ಕೈಮೂರ್ ಜಿಲ್ಲೆ (kaimur district) ಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಎರಡು ಕುಟುಂಬದವರು ಒಪ್ಪಿಯೇ ಈ ಮದುವೆಯನ್ನು ನಿಶ್ಚಯ ಮಾಡಿದ್ದರು. ಎಲ್ಲರೂ ಅಂದುಕೊಂಡಂತೆ ಅದ್ದೂರಿಯಾಗಿಯೇ ಮದುವೆ ಶಾಸ್ತ್ರವು ನಡೆದಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಖುಷಿಯಲ್ಲೇ ವರನು ಮೆರವಣಿಗೆಯ ಸಮೇತವಾಗಿಯೇ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಮನೆ ಮಂದಿಯ ಮುಖದಲ್ಲಿ ಖುಷಿ ತುಂಬಿ ತುಳುಕುತ್ತಿದೆ. ಆದರೆ, ಸಿಂಧೂರ ಶಾಸ್ತ್ರ ನಡೆಯುವ ವೇಳೆಯಲ್ಲಿ ವರನ ಕೈ ನಡುಗಲು ಶುರುವಾಗಿದ್ದೇ ವಧುವಿಗೆ ದೊಡ್ಡ ಸಮಸ್ಯೆಯಾಗಿದೆ.
ವಧುವಿನ ಹಣೆಗೆ ಸಿಂಧೂರ ಹಚ್ಚುವಾಗ ವರನ ಕೈ ನಡುಗಿದ್ದು , ಇದನ್ನು ವಧುವು ಗಮನಿಸಿದ್ದಾಳೆ. ಕೊನೆ ಕ್ಷಣದಲ್ಲಿ ತನ್ನ ನಿರ್ಧಾರ ಬದಲಾಯಿಸಿದ್ದಾಳೆ. ಈ ಮದುವೆ ಬೇಡ, ಹುಡುಗನ ಕೈ ನಡುಗುತ್ತಿದೆ ಆತ ಹುಚ್ಚನೇ ಇರಬೇಕು ಎಂದು ಕೊನೆ ಕ್ಷಣದಲ್ಲಿ ಎಲ್ಲರಿಗೂ ಕೂಡ ಶಾಕ್ ನೀಡಿದ್ದಾಳೆ. ಕುಟುಂಬದವರು ಎಷ್ಟೇ ತಿಳಿ ಹೇಳಿದರೂ ಕೂಡ ಈ ಮದುವೆಯಾಗಲು ಒಪ್ಪಲೇ ಇಲ್ಲ. ಇತ್ತ ವಧುವಿನ ಕಡೆಯವರು ವರನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಭಭುವಾ ಪೊಲೀಸ್ ಠಾಣೆಗೆ ಎರಡು ಕುಟುಂಬದವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ : Video : ಅಬ್ಬಬ್ಬಾ! ಜೀವಂತ ಕೇರೆ ಹಾವನ್ನೇ ನುಂಗಿದ ದೈತ್ಯಗಾತ್ರದ ನಾಗರಹಾವು
ಆದರೆ ಈ ಮಾತುಕತೆಯಿಂದ ಏನು ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರನ ಸಂಬಂಧಿರೊಬ್ಬರು , ಮದುವೆಯ ಎಲ್ಲಾ ಆಚರಣೆಗಲು ಪೂರ್ಣಗೊಂಡಿದ್ದವು. ವಧುವಿನ ಹಣೆಗೆ ಸಿಂಧೂರ ಹಚ್ಚುವಾಗ ವರನ ಕೈ ನಡುಗಿದೆ. ಭಯ ಹಾಗೂ ಒತ್ತಡದಿಂದ ಈ ರೀತಿಯಾಗಿದ್ದೀರಬಹುದು. ಆದರೆ ವಧುವು ಮಾತ್ರ ಆತನಿಗೆ ಹುಚ್ಚು ಹಿಡಿದಿದೆ ಎಂದು ಆರೋಪಿಸಿದ್ದಾಳೆ ಎಂದು ತಿಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
वो पागल है, मैं शादी नहीं करूंगी: शादी के सिंदूर दान की रस्स के दौरान दूल्हा का हाथ हिल गया और इसके बाद लड़की ने शादी से इनकार कर दिया. लड़की ने कहा कि लड़का पागल है.#kaimur #Bihar #BiharNews pic.twitter.com/rCtE68R2VI
— FirstBiharJharkhand (@firstbiharnews) June 9, 2025
Firstbiharjharkhand ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ವರನು ಬೇಸರದಿಂದ ಇರುವುದನ್ನು ಕಾಣಬಹುದು. ವರನು ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋವೊಂದು ಒಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಈಗಿನ ಕಾಲದಲ್ಲಿ ಹುಡುಗಿಯರು ಪಾಪ ಹುಡುಗರ ಜೀವನದಲ್ಲಿ ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು, ವಿಷಯ ಗೊತ್ತಿಲ್ಲದೇ ವರನ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಹುಡುಗಿಯರು ತಾವು ಏನು ಮಾಡಿದರೂ ನಡೆಯುತ್ತೆ ಎಂದುಕೊಂಡಿದ್ದಾರೆ ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿರುವುದನ್ನು ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ