Video : ಕಾಶ್ಮೀರದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ದಂಪತಿ
ಪ್ರತಿಯೊಬ್ಬ ತಂದೆ ತಾಯಂದಿರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಬಯಸುತ್ತಾರೆ. ಆದರೆ ಇದೀಗ ವಾರಣಾಸಿ ದಂಪತಿಗಳಿಬ್ಬರೂ ತಮ್ಮ ಮಗನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ದಂಪತಿಗಳು ಕಾಶ್ಮೀರದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಮಗನ ಜನ್ಮದಿನವನ್ನು ಆಚರಿಸುವ ಮೂಲಕ ಆ ಕ್ಷಣವನ್ನು ಸ್ಮರಣೀಯವಾಗಿಸಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಕಾಶ್ಮೀರ, ಜೂನ್ 09: ಈಗಿನ ಕಾಲದಲ್ಲಿ ಹೆಚ್ಚಿನವರಿಗೆ ಒಂದೋ ಎರಡೋ ಮಕ್ಕಳಷ್ಟೇ. ತಮ್ಮ ಮಕ್ಕಳ ಹುಟ್ಟುಹಬ್ಬವೆಂದರೆ ತಂದೆ ತಾಯಂದಿರಿಗೆ ಅದುವೇ ಸಂಭ್ರಮದ ಕ್ಷಣ. ಎಷ್ಟೇ ದುಡ್ಡು ಖರ್ಚು ಆದರೂ ಸರಿಯೇ, ಅದ್ದೂರಿಯಾಗಿ ಆಚರಿಸುವುದನ್ನು ನೋಡಿರಬಹುದು. ಆದರೆ ಇದೀಗ ವಾರಣಾಸಿ ದಂಪತಿ (varanaasi couple) ಗಳು ತಮ್ಮ ಮಗನ ಆರು ವರ್ಷದ ಹುಟ್ಟುಹಬ್ಬವನ್ನು ಕಾಶ್ಮೀರದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (kashmir first vande bharat express) ನಲ್ಲಿ ಆಚರಿಸಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಎಎನ್‌ಐ ಸುದ್ದಿ ಸಂಸ್ಥೆಯೂ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ರಾಕೇಶ್ ಮತ್ತು ನೇಹಾ ಜೈಸ್ವಾಲ್ ತಮ್ಮ ಮಗ ಮೋಕ್ಷ್ ಅವರ ಆರನೇ ವರ್ಷದ ಹುಟ್ಟುಹಬ್ಬವನ್ನು ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಅಂಜಿ ಖಾಡ್ ಸೇತುವೆಯನ್ನು ದಾಟುವಾಗ ರೈಲಿನಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಾಕೇಶ್ ಮತ್ತು ನೇಹಾ ಜೈಸ್ವಾಲ್ ತಮ್ಮ ಮಕ್ಕಳೊಂದಿಗೆ ಇರುವುದನ್ನು ಕಾಣಬಹುದು. ಮುದ್ದಿನ ಮಗನು ಕೇಕ್ ಕತ್ತರಿಸಿದ್ದು ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳು ಕೋರುವುದನ್ನು ಕಾಣಬಹುದು. ಒಬ್ಬರಿಗೊಬ್ಬರು ಕೇಕ್ ತಿನ್ನಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : Video : ಎಷ್ಟು ಸುಂದರ ಕ್ಷಣವಿದು : ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
#WATCH | A couple, Rakesh and Neha Jaiswal from Varanasi, celebrate their son Moksh’s sixth birthday inside Kashmir’s first Vande Bharat express train, cutting the cake as the train reaches Anji Khad Bridge, inaugurated by PM Narendra Modi yesterday.
Rakesh Jaiswal says, “It was… pic.twitter.com/cr6b3UaI4K
— ANI (@ANI) June 7, 2025
ಜೂನ್ 7 ರಂದು ಶೇರ್ ಮಾಡಲಾದ ಈ ವಿಡಿಯೋವು ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ರೈಲು ನಿಮ್ಮ ಪಾರ್ಟಿ ಮಾಡುವ ಸ್ಥಳವಲ್ಲ, ಮೇಣದ ಬತ್ತಿಗಳನ್ನು ಹಚ್ಚುವುದನ್ನು ನಿಲ್ಲಿಸಿ, ರೈಲನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಖಾಸಗಿ ಆಸ್ತಿಯಾಗಿ ಬಳಸುವ ಬದಲು ಈ ಪ್ರಯಾಣವನ್ನು ಆನಂದಿಸಿ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯ ರೈಲ್ವೆಯಲ್ಲಿ ಇದಕ್ಕೆ ಅನುಮತಿ ಇದೆಯೇ? ಅಲ್ಲದೇ ರೈಲುಗಳ ಒಳಗೆ ಬೆಂಕಿಕಡ್ಡಿ ಹಚ್ಚುವುದನ್ನು ನಿಷೇಧಿಸಲಾಗಿದೆ ಎಂದು ನಾನು ಭಾವಿಸಿದೆ ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, ಈ ದಂಪತಿಗಳ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Mon, 9 June 25








