AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Queen of Fruits : ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?

ಸಾಮಾನ್ಯವಾಗಿ ಹಣ್ಣುಗಳ ರಾಜ ಎಂದ ಕೇಳಿದ ಕೂಡಲೇ ನೆನಪಿಗೆ ಬರುವುದೇ ಈ ಮಾವಿನಹಣ್ಣು. ಹಾಗಾದ್ರೆ ಹಣ್ಣುಗಳ ರಾಣಿ ಎಂದು ಯಾವ ಹಣ್ಣನ್ನು ಕರೆಯುತ್ತಾರೆ ಎಂದು ನಿಮಗೆ ತಿಳಿದಿದೆಯೇ. ಹಣ್ಣುಗಳ ರಾಣಿ ಕೂಡ ಇದೆಯೇ ಎಂದು ನಿಮಗೆ ಅಚ್ಚರಿಯಾಗಬಹುದು. ಹೌದು, ಈ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಕ್ವೀನ್ ಆಫ್ ಫ್ರೂಟ್ಸ್ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಈ ಹಣ್ಣಿನ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.

TV9 Web
| Updated By: ಸಾಯಿನಂದಾ

Updated on: Jun 08, 2025 | 7:44 PM

ಯಾರಾದ್ರೂ ಬಂದು ನಿಮ್ಮ ಬಳಿ ಬಂದು ಹಣ್ಣುಗಳ ರಾಜ ಯಾವುದೆಂದು ಕೇಳಿದ್ರೆ ನೀವು ಹೇಳುವ ಉತ್ತರ ಮಾವಿನಹಣ್ಣು ಆಗಿರುತ್ತದೆ.  ಅದೇ ಹಣ್ಣುಗಳ ರಾಣಿಯ ಬಗ್ಗೆ ನಿಮ್ಮತ್ರ ಕೇಳಿದ್ರೆ ಒಂದು ಕ್ಷಣ ನೀವು ಯೋಚನೆ ಮಾಡ್ತೀರಾ. ಈ ಹಣ್ಣುಗಳ ರಾಣಿಯ ಬಗ್ಗೆ ಎಷ್ಟೋ ಜನರಿಗೆ ತಿಳಿದೇ ಇಲ್ಲ.

1 / 6
ಹಣ್ಣುಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಹಣ್ಣು ಮ್ಯಾಂಗೋಸ್ಟೀನ್.  ಇದೊಂದು ಉಷ್ಣವಲಯದಲ್ಲಿ ಬೆಳೆಯಲಾಗುವ ಹಣ್ಣಾಗಿದ್ದು,  ಇಲ್ಲಿಯವರೆಗೆ ಈ ಹಣ್ಣಿನ ಹೆಸರನ್ನು ಕೇಳಿರಲೇ ಇಲ್ಲವಲ್ಲ ಎಂದು ನಿಮಗೆ ಅನಿಸಬಹುದು.

2 / 6
ಈ ಮ್ಯಾಂಗೋಸ್ಟೀನ್ ಹಣ್ಣು ನೋಡುವುದಕ್ಕೆ ಗಾಢ ನೇರಳೆ ಬಣ್ಣದಲ್ಲಿದ್ದು, ಒಳಗೆ ಬಿಳಿ ಬಣ್ಣದ ತಿರುಳನ್ನು ಹೊಂದಿದ್ದು, ನೋಡುವುದಕ್ಕೆ ಮಾತ್ರವಲ್ಲ ರುಚಿ ಕೂಡ ಅಷ್ಟೇ ಅದ್ಭುತ. ಈ ಹಣ್ಣಿನ ಸೇವನೆಯಿಂದ ಆರೋಗ್ಯ ಲಾಭಗಳು ಸಾಕಷ್ಟು ಇವೆ.

3 / 6
ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷ್ಯಾ ಹಾಗೂ ಫಿಲಿಪೈನ್ಸ್ ನಲ್ಲಿ ಹೇರಳವಾಗಿ ಬೆಳೆಯಲಾಗುವ ಈ ಹಣ್ಣು ಋತುಮಾನದ ಹಣ್ಣಾಗಿದೆ. ಕೇರಳ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಈ ಹಣ್ಣು ಕಾಣಸಿಗುತ್ತದೆ.

4 / 6
ಭಾರತದಲ್ಲಿ ಈ ಹಣ್ಣು ಮೇ ಆಗಸ್ಟ್ ತಿಂಗಳಿನಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ರುಚಿಯಲ್ಲಿ ಮಾವಿನ ಹಣ್ಣಿನಂತೆ ಇದ್ದು, ಹೀಗಾಗಿ ಇದಕ್ಕೆ ಮ್ಯಾಂಗೋಸ್ಟೀನ್  ಎಂಬ ಹೆಸರು ಬಂದಿತಂತೆ.

5 / 6
ಅಷ್ಟೇ ಅಲ್ಲದೇ, 1930ರ ದಶಕದಲ್ಲಿ ಅಮೆರಿಕಾದ ಸಸ್ಯಶಾಸ್ತ್ರಜ್ಞ ಡೇವಿಡ್ ಫೇರ್‌ಚೈಲ್ಡ್‌   ಮ್ಯಾಂಗೋಸ್ಟೀನ್‌ಗೆ "ಹಣ್ಣುಗಳ ರಾಣಿ" ಎಂದು ಕರೆದಿದ್ದು, ಅಂದಿನಿಂದ ರಸಭರಿತವಾದ ಈ ಹಣ್ಣು ಈ ಹೆಸರಿನಿಂದಲೇ ಜನಪ್ರಿಯವಾಯಿತು.

6 / 6
Follow us