AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?

ಎಳನೀರು  ಅಮೃತಕ್ಕೆ ಸಮಾನ, ಇದರಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ದುಡ್ಡು ಎಷ್ಟೇ ಇರಲಿ ಎಲ್ಲರೂ ಖರೀದಿಸಿ ಕುಡಿಯುತ್ತಾರೆ. ಆದರೆ ಇದೀಗ ಎಳನೀರಿನ ಬೆಲೆ ಗಗನಕ್ಕೆ ಏರಿದ್ದು ಐವತ್ತು ರೂಪಾಯಿಗೆ ಸಿಗುತ್ತಿದ್ದ ಎಳನೀರಿಗೆ ಈಗ ಎಪ್ಪತ್ತು ರೂಪಾಯಿ ದಾಟಿದೆ. ಆದರೆ ಇದೀಗ ಮಂಗಳೂರಿಗೆ ಗುಲಾಬಿ ಬಣ್ಣದ ಎಳನೀರು ಬಂದಿದ್ದು,ನೋಡಿದರೇನೆ ಒಮ್ಮೆ ಇದರ ರುಚಿ ಸವಿಯುವ ಎಂದೆನಿಸುತ್ತದೆ. ಈ ಕುರಿತಾದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇದು ನಿಜನಾ ಎಂದು ಕಾಮೆಂತ್‌ ಮಾಡಿ ಕೇಳಿದ್ದಾರೆ.

Viral : ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?
ಮಂಗಳೂರಿನಲ್ಲಿ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರುImage Credit source: Facebook
ಸಾಯಿನಂದಾ
|

Updated on:Jun 09, 2025 | 7:52 PM

Share

ಮಂಗಳೂರು, ಜೂನ್‌ 09: ಬಹುತೇಕರ ನೆಚ್ಚಿನ ಪಾನೀಯಗಳಲ್ಲಿ ಎಳನೀರು (Coconut water) ಕೂಡ ಒಂದು. ಯಾವುದೇ ಋತುಮಾನವಿರಲಿ, ಎಳನೀರನ್ನು ತಪ್ಪದೇ ಸೇವಿಸುತ್ತಾರೆ. ಆದರೆ ಈ ತೆಂಗಿನಕಾಯಿ ಇಳುವರಿಯೂ ಕುಸಿದಿದ್ದು ಇದರ ಬೆಲೆ ಗಗನಕ್ಕೆ ಏರಲು ಕಾರಣವಾಗಿದೆ. ಹೀಗಾಗಿ ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಖರೀದಿಸುವಂತಾಗಿದೆ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಂಗಳೂರಿ (mangalore) ಗೆ ನೋಡಲು ಆಕರ್ಷಕವಾಗಿರುವ ಗುಲಾಬಿ ಬಣ್ಣದ ಇಂಡೋನೇಷ್ಯಾದ ಎಳನೀರು (Indonesia coconut water) ಬಂದಿದೆ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು ನಿಜವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

Manglore information ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಈ ಎಳನೀರಿನ ಫೋಟೋ ಶೇರ್ ಮಾಡಲಾಗಿದ್ದು, ಸೀಯಾಳದ ರೇಟ್ ಜಾಸ್ತಿಯಾದಂತೆ ಮಂಗಳೂರಿಗೆ ಬಂತು ಕೆಂಬಣ್ಣದ ಇಂಡೋನೇಷ್ಯಾದ ಬೊಂಡ….! ಸೀಯಾಳಕ್ಕೆ ಬಣ್ಣ ಹಾಕಿದ್ದಲ್ಲ ಇದು. ಬೊಂಡ ಇರುವುದೇ ಹೀಗೆ. ಕೆಂಬಣ್ಣವೋ, ಕೆಂದಾಳೆಯೋ ಇದು ಇಂಡೋನೇಷಿಯಾದ ಸೀಯಾಳ. ಈಗ ಭಾರತಕ್ಕೆ ಅದೂ ಮಂಗಳೂರಿಗೆ ಬಂದಿದೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಈ ಸಿಯಾಳ ಕಣ್ಣಿಗೆ ಬಿದ್ದಿದೆ ಈ ಸೀಯಾಳ, ಫೋಟೋ ತೆಗೆಯಲು ಹೊರಟಾಗ ನಾಚಿ ಕೆಂಪಾಯಿತೋ ಹೇಗೆ ಎಂತ ಅವರ ಹತ್ತಿರನೆ ಕೇಳಬೇಕು. ಆದರೆ ಮೇಲ್ನೋಟಕ್ಕೆ ಇದು ಡ್ರೈ ಪೆಯಿಂಟ್ ರೂಪದಲ್ಲಿದೆ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿ ಇಂಡೋನೇಷ್ಯಾದ ಕೆಂಬಣ್ಣದ ಆಕರ್ಷಕವಾದ ಎಳನೀರನ್ನು ನೀವು ಕಾಣಬಹುದು.

ಇದನ್ನೂ ಓದಿ : Video : ಕಾಶ್ಮೀರದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌​​​​ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ದಂಪತಿ

ಇದನ್ನೂ ಓದಿ
Image
ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?
Image
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?
Image
ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?
Image
ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಮೊನ್ನೆ ಹೀಗೆ ಬಿಳಿ ಬಣ್ಣದ ಪೈಂಟ್ ಕೊಟ್ಟಿದ್ದು ಇತ್ತು, ಇವತ್ತು ಕೆಂಪು ಇನ್ನು ನೀಲಿ ಬರ್ಬಹುದು ಎಂದಿದ್ದಾರೆ. ಮತ್ತೊಬ್ಬರು, ಮಂಗಳೂರು ಅವರಿಗೂ ಇಂತಹ ಗಾಳಿ ತಾಕೀತು ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ಇದರ ಒಳಗೆ ಇರುವ ನೀರು ಹಾಗೂ ಕೊಬ್ಬರಿ ಕೂಡ ಗುಲಾಬಿ ಬಣ್ಣದ್ದಾ ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 9 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ