AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಚೀನಾದಲ್ಲಿ ಹೊಸ ಟ್ರೆಂಡ್ : ಐದು ನಿಮಿಷದ ಅಪ್ಪುಗೆಗೂ ಮಹಿಳೆಯರು ನೀಡಬೇಕಂತೆ ಇಂತಿಷ್ಟು ಹಣ

ಈ ಜೀವನವೇ ಸಾಕಾಗಿದೆ ಎಂದು ಗೊಣಗುವವರನ್ನು ನೀವು ನೋಡಿರಬಹುದು. ಈಗಿನ ಕಾಲದಲ್ಲಿ ಹೆಚ್ಚಿನವರು ಒತ್ತಡದಿಂದ ಬಳಲುತ್ತಿದ್ದಾರೆ. ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕೆಂದರೆ ಸಾಕು ಎಂದುಕೊಳ್ಳುವವರೇ ಹೆಚ್ಚು ಒತ್ತಡದಿಂದ ಮುಕ್ತರಾಗಲು ನಾನಾ ರೀತಿಯ ವಿಧಾನವನ್ನು ಅನುಸರಿಸುತ್ತಿದ್ದು, ಚೀನಾದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಇಲ್ಲಿನ ಮಹಿಳೆಯರು ಹಣ ನೀಡಿ ಪುರುಷರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ಹೊಸ ಟ್ರೆಂಡ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Viral : ಚೀನಾದಲ್ಲಿ ಹೊಸ ಟ್ರೆಂಡ್ : ಐದು ನಿಮಿಷದ ಅಪ್ಪುಗೆಗೂ ಮಹಿಳೆಯರು ನೀಡಬೇಕಂತೆ ಇಂತಿಷ್ಟು ಹಣ
ಚೀನಾದಲ್ಲಿ ಪುರುಷ ಅಮ್ಮಂದಿರು ಹೊಸ ಟ್ರೆಂಡ್ Image Credit source: Justin Paget/DigitalVision/Getty Images
Follow us
ಸಾಯಿನಂದಾ
|

Updated on:Jun 10, 2025 | 12:31 PM

ಚೀನಾ, ಜೂನ್ 10: ಎಷ್ಟೇ ಒತ್ತಡವಿರಲಿ, ಏನೇ ಟೆನ್ಶನ್ ಇರಲಿ, ತಮ್ಮ ಪ್ರೀತಿ ಪಾತ್ರರ ಒಂದು ಅಪ್ಪುಗೆ (hug) ಯೂ ಇದೆಲ್ಲವನ್ನು ಮರೆಸಿಬಿಡುತ್ತದೆ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ನೋವಿಗೆ ಸ್ಪಂದಿಸುವ ಹಾಗೂ ಸಾಂತ್ವನ ಹೇಳುವವರರು ಸಿಗುವುದೇ ಕಡಿಮೆಯಾಗಿದೆ. ಆದರೆ ಚೀನಾ (china) ದಲ್ಲಿ ಪುರುಷ ಅಮ್ಮಂದಿರು (man mums) ಎನ್ನುವ ಟ್ರೆಂಡ್ ಎಲ್ಲರ ಗಮನ ಸೆಳೆಯುತ್ತಿದೆ. ಹೌದು ಮಹಿಳೆಯರು ಪರಪುರುಷರನ್ನು ಅಪ್ಪಿಕೊಳ್ಳಲು ಹಣ ನೀಡಬೇಕೆಂತೆ. ಸಾಂತ್ವನ ನೀಡುವ ಈ ಅಪ್ಪುಗೆಯನ್ನು ಪಡೆಯಲು ಐದು ನಿಮಿಷಕ್ಕೆ ಇಂತಿಷ್ಟು ಹಣವನ್ನು ಪಾವತಿಸಬೇಕಂತೆ.

ದಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯಲ್ಲಿ ತಿಳಿಸಿರುವಂತೆ ಒತ್ತಡಭರಿತ ಜೀವನದಲ್ಲಿ ಸಾಂತ್ವನ ನೀಡುವ ಈ ಪುರುಷ ಅಮ್ಮಂದಿರನ್ನು ಅಪ್ಪಿಕೊಳ್ಳಲು ಮಹಿಳೆಯರು ಐದು ನಿಮಿಷಕ್ಕೆ 50 ಯುವಾನ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 600 ರೂ ಪಾವತಿಸಬೇಕಂತೆ. ಇದಕ್ಕಾಗಿಯೇ ಆನ್ಲೈನ್ ಚಾಟ್ ಅಪ್ಲಿಕೇಶನ್ ಗಳಿಸಿದ್ದು, ಸಾರ್ವಜನಿಕ ಸ್ಥಳಗಳು, ಸಬ್ ವೇ ನಿಲ್ದಾಣಗಳು ಹಾಗೂ ಶಾಪಿಂಗ್ ಸೆಂಟರ್ ಗಳಲ್ಲಿ ಈ ರೀತಿ ಅಪ್ಪುಗೆಯನ್ನು ಪಡೆಯಬಹುದು.

ಇದನ್ನೂ ಓದಿ : Optical Illusion : ಈ ಹುಲ್ಲಿನ ಪೊದೆಯಲ್ಲಿ ಅಡಗಿರುವ ಸಿಂಹದ ಮರಿಯನ್ನು ಹುಡುಕಬಲ್ಲಿರಾ?

ಚೀನಿ ವಿದ್ಯಾರ್ಥಿಯೊಬ್ಬಳು ತನ್ನ ಒತ್ತಡವನ್ನು ನಿವಾರಿಸಲು ಈ ರೀತಿ ವಿಧಾನವನ್ನು ಅಳವಡಿಸಿಕೊಂಡಿದ್ದು, ಈ ಬಗ್ಗೆ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾಳೆ. ನನ್ನನ್ನು ಒಮ್ಮೆ ಮಾಧ್ಯಮಿಕ ಶಾಲೆಯಲ್ಲಿ ಸಾಂತ್ವನ ನೀಡುವ ಅಮ್ಮಂದಿರು ಅಪ್ಪಿಕೊಳ್ಳಲಾಯಿತು, ಅವರ ಅಪ್ಪುಗೆಯೂ ನನಗೆ ಸುರಕ್ಷಿತ ಭಾವನೆಯನ್ನು ಉಂಟು ಮಾಡಿತು ಎಂದಿದ್ದಾಳೆ. ಆದರೆ ಹಣ ಪಾವತಿ ಅಪ್ಪುಗೆ ಪಡೆಯುವ ಮುನ್ನ ಪುರುಷರೊಂದಿಗೆ ಆನ್ಲೈನ್ ನಲ್ಲಿ ಮಾತುಕಥೆ ನಡೆಸಲಾಗುತ್ತದೆ. ಈ ವೇಳೆಯಲ್ಲಿ ಸ್ಥಳ ಹಾಗೂ ಸಮಯದ ಬಗ್ಗೆ ತಿಳಿಸಲಾಗುತ್ತದೆ. ಆ ಬಳಿಕ ತಮ್ಮ ಗುಣ, ನಡವಳಿಕೆ, ದೇಹದ ಪ್ರಕಾರ ಹೀಗೆ ಹಲವಾರು ಅಂಶಗಳನ್ನು ಪರಿಗಣಿಸಿ, ಪುರುಷರನ್ನು ಮಹಿಳೆಯರು ಹಣ ಪಾವತಿಸಿ ಅಪ್ಪಿಕೊಳ್ಳಲು ಮುಂದಾಗುತ್ತಾರೆ ಎನ್ನಲಾಗಿದೆ. ಈ ರೀತಿ ಹೊಸ ಟ್ರೆಂಡ್ ವಿಚಿತ್ರ ಎನಿಸಿದರೂ ಮನಸ್ಸಿಗೆ ಹಿತ ನೀಡುವುದಲ್ಲದೆ, ಒತ್ತಡಕ್ಕೆ ಔಷಧಿ ಹುಡುಕುವ ಹೊಸ ವಿಧಾನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ
Image
ಮೊಮೊಸ್ ಬಿರಿಯಾನಿ ಆಯ್ತು, ಈಗ ಲಿಚಿ ಮೊಮೊಸ್ ಸರದಿ
Image
ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?
Image
ವಂದೇ ಭಾರತ್ ಎಕ್ಸ್‌ಪ್ರೆಸ್‌​​​​ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ದಂಪತಿ
Image
ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Tue, 10 June 25

ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!