AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಅಬ್ಬಬ್ಬಾ! ಜೀವಂತ ಕೇರೆ ಹಾವನ್ನೇ ನುಂಗಿದ ದೈತ್ಯಗಾತ್ರದ ನಾಗರಹಾವು

ನಾಗರಹಾವು ಈ ಹೆಸರು ಕೇಳಿದ ಕೂಡಲೇ ನಡುಕ ಶುರುವಾಗುತ್ತದೆ. ವಿಷಜಂತುಗಳಲ್ಲಿ ಒಂದಾದ ಈ ನಾಗರ ಹಾವು ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಕೋಳಿ, ಮೊಟ್ಟೆಯನ್ನು ನುಂಗಿದ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೊಟ್ಟೆ ಹಸಿವು ತಾಳಲಾರದೇ ನಾಗರಹಾವೊಂದು ಎದುರಿಗಿದ್ದ ಕೇರೆ ಹಾವನ್ನು ನುಂಗಿ ನೀರು ಕುಡಿದಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.

ಸಾಯಿನಂದಾ
|

Updated on: Jun 10, 2025 | 3:05 PM

Share

ತೆಲಂಗಾಣ, ಜೂನ್ 10: ಹಾವುಗಳಂದ್ರೆ ಸಾಕು ಹೆಚ್ಚಿನವರು ಭಯ ಪಡುತ್ತಾರೆ. ಈ ಹಾವು ನೋಡಿದ್ರೆ ಸಾಕು, ಎದ್ವೋ ಬಿದ್ವೋ ಎಂದು ಓಡುವವರೇ ಹೆಚ್ಚು. ಈ ಸೋಶಿಯಲ್ ಮೀಡಿಯಾ (social media) ದಲ್ಲಿ ಹಾವುಗಳ ಭೀಕರ ಕಾಳಗದ ದೃಶ್ಯಗಳನ್ನು ಆಗಾಗ ನೀವು ನೋಡುತ್ತೀರಿ. ಹೌದು, ಈ ಹಾವುಗಳು ಆಹಾರಕ್ಕಾಗಿ ಸಣ್ಣ ಪುಟ್ಟ ಜೀವಿಗಳನ್ನು ಬೇಟೆಯಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ನಾಗರಹಾವು ಹಸಿವಿನಿಂದ ಎದುರಿಗಿದ್ದ ಕೇರೆ ಹಾವನ್ನು ನುಂಗಿದ್ದು, ಕೊನೆಗೆ ಜೀರ್ಣಿಸಿ ಕೊಳ್ಳದೇ ವಾಂತಿ ಮಾಡಿದ್ದು, ಈ ದೃಶ್ಯವು ರೈತ ಭಾಸ್ಕರ್ ರಾವ್ (farmer baskar rao) ಅವರ ಹೊಲದಲ್ಲಿ ಕಂಡು ಬಂದಿದೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಈ ಘಟನೆ ತೆಲಂಗಾಣ (rajanna, sircilla district of Telangana) ದ ಸಿರಿಸಿಲ್ಲಾ ಜಿಲ್ಲೆಯ ರಾಜಣ್ಣ ಚಂದೂರ್ತಿ ಮಂಡಲದ ಲಿಂಗಂಪೇಟದ ಮಲ್ಲೆಪುಟ್ಟು ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ.

ವೈರಲ್ ವಿಡಿಯೋದಲ್ಲಿ ದೈತ್ಯಗಾತ್ರದ ನಾಗರಹಾವೊಂದು ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಕೇರೆ ಹಾವಿನ ಮೇಲೆ ಎರಗಿರುವುದನ್ನು ಕಾಣಬಹುದು. ಹಚ್ಚ ಹಸಿರಿನಿಂದ ಕೂಡಿದ ಹುಲ್ಲಿನ ಮೇಲೆ ತೆವಳುತ್ತಾ ಹೋಗುತ್ತಿದ್ದ ನಾಗರಹಾವೊಂದು ಅಲ್ಲೇ ಇದ್ದ ಕೇರೆ ಹಾವಿನ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ :Viral : ಚೀನಾದಲ್ಲಿ ಹೊಸ ಟ್ರೆಂಡ್ : ಐದು ನಿಮಿಷದ ಅಪ್ಪುಗೆಗೂ ಮಹಿಳೆಯರು ನೀಡಬೇಕಂತೆ ಇಂತಿಷ್ಟು ಹಣ

ಇದನ್ನೂ ಓದಿ
Image
ಮೊಮೊಸ್ ಬಿರಿಯಾನಿ ಆಯ್ತು, ಈಗ ಲಿಚಿ ಮೊಮೊಸ್ ಸರದಿ
Image
ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?
Image
ವಂದೇ ಭಾರತ್ ಎಕ್ಸ್‌ಪ್ರೆಸ್‌​​​​ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ದಂಪತಿ
Image
ಪತ್ನಿಯ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ ಪತಿ

ನಾಗರಹಾವಿನ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೇರೆ ಹಾವಿಗೆ ಸಾಧ್ಯವಾಗದೇ, ಉಸಿರು ಗಟ್ಟಿ ತನ್ನ ಪ್ರಾಣವನ್ನು ಬಿಟ್ಟಿದೆ. ಕೊನೆಗೆ ಈ ನಾಗರಹಾವು ತನ್ನ ಬೇಟೆಯನ್ನು ನುಂಗಲು ಪ್ರಯತ್ನಿಸಿದ್ದು, ನುಂಗಿದ ಬಳಿಕ ಬಾಯಿಂದ ಹೊರಗೆ ಹಾಕಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇದನ್ನು ನೋಡಿ ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ