Video : ತುತ್ತನಿಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಣ್ಣೀರ ವಿದಾಯ ಹೇಳಿದ ಕೋತಿ
ಸ್ವಾರ್ಥ ತುಂಬಿದ ಮನುಷ್ಯನ ಪ್ರೀತಿಗಿಂತ ಮೂಕ ಪ್ರಾಣಿಗಳ ಪ್ರೀತಿಯೇ ಮೇಲು. ಹೀಗಾಗಿ ಎಷ್ಟೋ ಜನರು ಈ ಪ್ರಾಣಿಗಳ ಜೊತೆಗೆ ಒಡನಾಟ ಬೆಳೆಸಿಕೊಂಡಿರುತ್ತಾರೆ. ಆದರೆ ಇದೀಗ ಕೋತಿಯೊಂದು ತನಗೆ ತುತ್ತು ಅನ್ನ ನೀಡಿದ ಹಸಿವು ನೀಗಿಸಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕಣ್ಣೀರ ವಿದಾಯ ಹೇಳಿದ್ದು, ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಪ್ರಾಣಿಗಳ ಪ್ರೀತಿ ಪರಿಶುದ್ಧವಾದದ್ದು ಎಂದಿದ್ದಾರೆ.

ದಿಯೋಘರ್, ಜೂನ್ 10: ನಾವೆಲ್ಲರೂ ಈ ಪ್ರಾಣಿ (animal) ಗಳಿಗೆ ಭಾವನೆಗಳಿಲ್ಲ ಎಂದುಕೊಳ್ಳುತ್ತೇವೆ. ಆದರೆ ಅವುಗಳಿಗೂ ತಾವು ತಮ್ಮವರು ಭಾವನೆ ಇದ್ದೆ ಇರುತ್ತದೆ. ಹೌದು, ಈ ಮೂಕ ಪ್ರಾಣಿಗಳ ಮೇಲೆ ಒಮ್ಮೆ ಕಾಳಜಿಯುತ ಪ್ರೀತಿ ಭಾವನೆ ತೋರಿದರೆ ಸಾಕು, ಅದು ಯಾವತ್ತೂ ನಿಮ್ಮನ್ನು ಮರೆಯುವುದಿಲ್ಲ. ಇದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ. ತನಗೆ ಆಹಾರ ನೀಡುತ್ತಿದ್ದ ವ್ಯಕ್ತಿಯೂ ಮರಣ ಹೊಂದಿದ್ದು, ಆತನ ಮೃತದ ದೇಹದ ಮುಂದೆ ಕುಳಿತು ಕಣ್ಣೀರ ವಿದಾಯ ಹೇಳಿದ ಕೋತಿ (monkey) ಯ ಹೃದಯ ಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ದಿಯೋಘರ್ (Diyoghar) ಎಂಬಲ್ಲಿ ನಡೆದಿದೆ ಎನ್ನಲಾಗಿದೆ.
@news24tvchannel ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೃತ ಪಟ್ಟಿರುವ ಮುನ್ನ ಸಿಂಗ್ ಅವರ ಮೃತದೇಹವನ್ನು ಮನೆಯ ಹೊರಗಡೆ ಇಟ್ಟಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಕೋತಿಯೊಂದು ಮೃತದೇಹದ ಹತ್ತಿರ ಬಂದು ಸ್ವಲ್ಪ ಹೊತ್ತು ಅಲ್ಲೇ ಕುಳಿತುಕೊಂಡಿದ್ದು, ಆ ಬಳಿಕ ವ್ಯಕ್ತಿಗೆ ಚುಂಬಿಸಿ ಕಣ್ಣೀರ ವಿದಾಯ ಹೇಳಿದೆ. ತದನಂತರದಲ್ಲಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಈ ದೃಶ್ಯವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಕೋತಿಗೆ ಕೈ ಮುಗಿದು ನಮಸ್ಕಾರ ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : ಸಿಂಧೂರ ಹಚ್ಚುವಾಗ ನಡುಗಿತು ವರನ ಕೈ, ಈ ಮದುವೆ ಬೇಡ ಎಂದು ಹಠ ಹಿಡಿದು ಕುಳಿತ ವಧು
ಹೌದು, ಮೃತ ಪಟ್ಟಿರುವ ವ್ಯಕ್ತಿಯ ಹೆಸರು ಮುನ್ನ ಸಿಂಗ್. ಈ ವ್ಯಕ್ತಿಯೂ ಈ ಕೋತಿಗೆ ರೊಟ್ಟಿ ಹಾಗೂ ಆಹಾರ ನೀಡಿ ಅದರ ಹಸಿವು ನೀಗಿಸುತ್ತಿದ್ದನು. ಈ ಋಣವನ್ನು ತೀರಿಸಲು ಈ ಕೋತಿಯೊಂದು ಆತನ ಅಂತ್ಯಕ್ರಿಯೆಯನ್ನು ಭಾಗಿಯಾಗಿ ಅಗಲಿದ ಹೃದಯವಂತ ವ್ಯಕ್ತಿಯ ಮುಂದೆ ಕುಳಿತು ಶೋಕ ವ್ಯಕ್ತಪಡಿಸಿದ್ದು, ಈ ವಿಡಿಯೋವೊಂದು ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರ ಕಣ್ಣು ಒದ್ದೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
देवघर: शख्स की अंतिम यात्रा में पहुंचा बंदर, वीडियो वायरल
◆ ये बंदर शख्स के शव को चूमकर काफी देर तक बैठा रहा
◆ इस अद्भुत पल ने भावुक कर दिया…#monkey #monkeyfuneral | Monkey Reaches Funeral pic.twitter.com/2MO9xbGb9z
— News24 (@news24tvchannel) June 9, 2025
ಬಳಕೆದಾರರೊಬ್ಬರು ಈ ದೃಶ್ಯ ಕಂಡು ಕಣ್ಣು ಒದ್ದೆಯಾಯಿತು, ಈ ರೀತಿ ಪ್ರಾಣಿ ಪ್ರೀತಿ ಸಂಪಾದಿಸಲು ಅದೃಷ್ಟ ಬೇಕು ಎಂದಿದ್ದಾರೆ. ಮತ್ತೊಬ್ಬರು ಜೈ ಭಜರಂಗಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನುಷ್ಯನಿಗಿಂತ ಈ ಪ್ರಾಣಿಗಳೇ ಮೇಲು, ಈ ಮುಗ್ಧ ಜೀವಿಗಳು ತುತ್ತಿಟ್ಟವನ ಋಣವನ್ನು ಹೀಗೆಯಾದ್ರೂ ತೀರಿಸುತ್ತವೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ