AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಸಾವನ್ನೇ ಗೆದ್ದ ವಿಶ್ವಾಸ್ ಕುಮಾರ್‌ಗೆ ನಂಬರ್‌ 11 ಎಷ್ಟು ಲಕ್ಕಿ ಗೊತ್ತಾ?

ಅಹಮದಾಬಾದ್ ವಿಮಾನ ದುರಂತದಲ್ಲಿ 274 ಜನರು ಸಾವಿಗೀಡಾಗಿದ್ದಾರೆ. ಆದರೆ ಪವಾಡ ಎಂಬಂತೆ 11 ಎ ಸೀಟಿನಲ್ಲಿದ್ದ ಪ್ರಯಾಣಿಕ ಮಾತ್ರ ಬದುಕಿ ಉಳಿದಿದ್ದಾರೆ. ಹೌದು, ಅಪಘಾತಕ್ಕೊಳಗಾದ ಬೋಯಿಂಗ್ 787-8 ಡ್ರೀಮ್​ಲೈನರ್ ವಿಮಾನದ ಸೀಟ್ ನಂಬರ್ 11A ನಲ್ಲಿ ರಮೇಶ್ ಕುಳಿತಿದ್ದು, ಅಪಘಾತದಲ್ಲಿ ಇಡೀ ವಿಮಾನದಲ್ಲಿದ್ದವರು ಸುಟ್ಟು ಕರಕಲಾದರೂ ಇವರಿಗೆ ಅಲ್ಪಸ್ವಲ್ಪ ಗಾಯಗಳಾಗಿತ್ತು ಬಿಟ್ಟರೆ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಇದೀಗ ಈ ವ್ಯಕ್ತಿಯ ಲಕ್ಕಿ ನಂಬರ್ 11 ಎನ್ನುವುದಕ್ಕೆ ಮತ್ತೊಂದು ವಿಡಿಯೋನೇ ಸಾಕ್ಷಿಯಾಗಿದೆ. ಹಾಗಾದ್ರೆ ಈ ವಿಡಿಯೋದಲ್ಲಿ ಅಂತಹದ್ದೇನಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Video : ಸಾವನ್ನೇ ಗೆದ್ದ ವಿಶ್ವಾಸ್ ಕುಮಾರ್‌ಗೆ ನಂಬರ್‌ 11 ಎಷ್ಟು ಲಕ್ಕಿ ಗೊತ್ತಾ?
ವಿಶ್ವಾಸ್ ಕುಮಾರ್ ಲಕ್ಕಿ ನಂಬರ್ 11Image Credit source: Instagram
ಸಾಯಿನಂದಾ
|

Updated on: Jun 17, 2025 | 10:42 AM

Share

ಸಾವು ಯಾವಾಗ ಹೇಗೆ ಯಾವಾಗ ಬದುಕುತ್ತದೆ ಎಂದು ಊಹಿಸಲು ಸಾಧ್ಯ. ಆಯಸ್ಸು ಗಟ್ಟಿಯಿದ್ದರೆ ಪ್ರಪಾತಕ್ಕೆ ಬಿದ್ದರೂ ಸಾವಿನಿಂದ ಜಯಿಸಿ ಬರಬಹುದು ಎನ್ನುವುದಕ್ಕೆ ವಿಶ್ವಾಸ್ ಕುಮಾರ್ ರಮೇಶ್ ಎನ್ನುವವರೇ ಉದಾಹರಣೆಯಾಗಿದ್ದಾರೆ. ಹೌದು, ಗುಜರಾತ್‌ನ ಅಹಮದಾಬಾದ್‌ (Ahmedabad of Gujarat) ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ, ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆ ವಿಶ್ವಾಸ್‌ ಕುಮಾರ್‌ ರಮೇಶ್‌. ಅಹಮದಾಬಾದ್‌ ವಿಮಾನ ದುರಂತದಲ್ಲಿ ’11ಎ’ ಸೀಟಿನಲ್ಲಿದ್ದ ಪ್ರಯಾಣಿಕ ವಿಶ್ವಾಸ್ ಕುಮಾರ್ (Vishwas Kumar) ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯೇ ಗೊತ್ತೇ ಇದೆ. ಹೌದು ಇದೀಗ ಈ ವ್ಯಕ್ತಿಯ ಲಕ್ಕಿ ನಂಬರ್ 11 ಎನ್ನಲಾಗುತ್ತಿದೆ. ಈ ನಂಬರ್‌ಗೆ ಸಂಬಂಧ ಪಟ್ಟಂತೆ ಸೋಶಿಯಲ್ ಮೀಡಿಯಾ (social media) ದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ 11 ನಂಬರ್ ಲಕ್ಕಿ ಎನ್ನುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಈ ವ್ಯಕ್ತಿಯ ಹಾಸ್ಪಿಟಲ್ ಬೆಡ್ ನಂಬರ್ 11 ದೇ ಆಗಿರುವುದು ಅಚ್ಚರಿಯ ವಿಷಯಗಳಲ್ಲಿ ಒಂದಾಗಿದೆ.

chillpill291 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಈ ವಿಮಾನ ದುರಂತದಲ್ಲಿ ಕೇವಲ ಒಬ್ಬರು ಮಾತ್ರ ಬದುಕುಳಿದಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ವಿಶ್ವಾಸ್ ಕುಮಾರ್ ಅವರ ಬೆಡ್ ನಂಬರ್ ಕೂಡ 11 ನೇ ಆಗಿರುವುದನ್ನು ನೀವಿಲ್ಲಿ ಗಮನಿಸಬಹುದು. ಅವರ ಲಕ್ಕಿ ನಂಬರ್ 11 ಎನ್ನುವುದನ್ನು ಇದುವೇ ಹೇಳುತ್ತದೆ.

ಇದನ್ನೂ ಓದಿ
Image
ಕರ್ನಾಟಕದವರೊಬ್ಬರ ಪರ್ಸ್​ ಕದ್ದು ಕೋತಿ ಮಾಡಿದ್ದೇನು ನೋಡಿ
Image
ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕಂತೆ
Image
ದೈತ್ಯಗಾತ್ರದ ಕಪ್ಪೆಯನ್ನು ನುಂಗಲು ಹೋದ ಹಾವು
Image
ನೀವು ಭಾವನಾತ್ಮಕ ಜೀವಿಗಳೇ, ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ :ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕು, ಯಾಕೆ ಗೊತ್ತಾ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by selfish👍 (@chillpill291)

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ಈಗಾಗಲೇ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಫ್ಲೈಟ್ ನಂಬರ್ 11, ಹಾಸ್ಪಿಟಲ್ ಬೆಡ್ ನಂಬರ್ 11, ಅದೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಸಂಖ್ಯಾಶಾಸ್ತ್ರ ನಿಜಕ್ಕೂ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 11 ನಂಬರ್ ಲಕ್ಕಿ ನಂಬರ್, ಈ ವ್ಯಕ್ತಿ ನಿಜಕ್ಕೂ ಅದೃಷ್ಟವಂತ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ