AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕು, ಯಾಕೆ ಗೊತ್ತಾ?

ಆಕಾಶದೆತ್ತರದಲ್ಲಿ ಹಾರಾಡುವ ವಿಮಾನಗಳನ್ನು ನೋಡುವುದಕ್ಕೆ ಎಷ್ಟು ಖುಷಿಯಾಗುತ್ತದೆಯೋ, ವಿಮಾನದಲ್ಲಿ ಪ್ರಯಾಣಿಸುವುದು ರೋಮಾಂಚನಕಾರಿ ಅನುಭವವನ್ನು ತಂದುಕೊಡುತ್ತದೆ. ಆದರೆ ಈ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಲ್ಲಿ ಪಕ್ಷಿಗಳನ್ನು ಓಡಿಸಲು ಝೋನ್ ಗನ್ ಬಳಸುವುದು ಅಥವಾ ಪಟಾಕಿ ಸಿಡಿಸುವುದು ಕೂಡ ಒಂದು. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಮಾನ ಹೊರಡುವ ಮುನ್ನ ಈ ಶಬ್ದ ಆಗಲೇಬೇಕು, ಯಾಕೆ ಗೊತ್ತಾ?
ವಿಮಾನ
ಸಾಯಿನಂದಾ
|

Updated on:Jun 16, 2025 | 4:45 PM

Share

ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಅಹಮದಾಬಾದ್‌ ವಿಮಾನ ನಿಲ್ದಾಣ (Ahmedabad Airport) ದ ಬಳಿ ಏರ್​ ಇಂಡಿಯಾ (air india) ಪತನಗೊಂಡ ಸುದ್ದಿಯೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಾಕಷ್ಟು ಕನಸುಗಳನ್ನು ಹೊತ್ತು ಬಾನೇತ್ತರಕ್ಕೆ ಹಾರಿದ ಅದೆಷ್ಟೋ ಜೀವಗಳು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯನ್ನು ಕಂಡಾಗ ಈ ವಿಮಾನ ಪ್ರಯಾಣ ಎಷ್ಟು ಸೇಫ್ ಎನ್ನುವ ಪ್ರಶ್ನೆಯೊಂದು ನಿಮ್ಮಲ್ಲಿ ಬರಬಹುದು. ಆದರೆ ವಿಮಾನಯಾನ ಸಂಸ್ಥೆಗಳು ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತವೆ. ಅದರಲ್ಲಿಯೂ ಈ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆಯಲ್ಲಿ ಪಟಾಕಿ (fireworks) ಯನ್ನು ಸಿಡಿಸಲಾಗುತ್ತದೆಯಂತೆ. ಹಾಗಾದ್ರೆ ಇದರ ಹಿಂದಿನ ಉದ್ದೇಶವೇನು? ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ಆಗುವ ಎಷ್ಟು ನಿಮಿಷಗಳ ಮುಂಚಿತವಾಗಿ ಪಟಾಕಿ ಸಿಡಿಸಲಾಗುತ್ತದೆ? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿಯನ್ನು ನೀವಿಲ್ಲಿ ತಿಳಿದುಕೊಳ್ಳಿ.

ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಪಟಾಕಿ ಸಿಡಿಯುವುದು ಏಕೆ?

ವಿಮಾನ ನಿಲ್ದಾಣಗಳಲ್ಲಿ ಪಕ್ಷಿಗಳು ಆಗಾಗ್ಗೆ ವಿಮಾನ ಹಾರಾಟದ ಸುರಕ್ಷತೆಗೆ ಅಪಾಯವನ್ನುಂಟು ಮಾಡಬಹುದು. ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ವಿಮಾನಗಳ ಮೇಲೆ ಅಪ್ಪಳಿಸುವುದರಿಂದ ಅಪಘಾತಗಳು ಸಂಭವಿಸಬಹುದು. ಈ ವಿಮಾನ ನಿಲ್ದಾಣಗಳಲ್ಲಿ ಪಕ್ಷಿಗಳ ನಿಯಂತ್ರಣವು ಅತ್ಯಗತ್ಯವಾಗಿದೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಹಕ್ಕಿಗಳ ಹಾರಾಟವನ್ನು ತಪ್ಪಿಸುವುದು ಬಹಳ ಮುಖ್ಯ. ಹೀಗಾಗಿ ಈ ಪಕ್ಷಿಗಳನ್ನು ಓಡಿಸಲು ವಿವಿಧ ರೀತಿಯ ಶಬ್ದಗಳು, ಲೇಸರ್ ಕಿರಣಗಳು ಹೀಗೆ ವಿವಿಧ ತಂತ್ರಗಳನ್ನು ಅನುಸರಿಸಲಾಗುತ್ತದೆ. ಪಟಾಕಿ ಸಿಡಿಸುವುದು ಅಥವಾ ಝೋನ್ ಗನ್ ಬಳಸಿ ಶಬ್ದಗಳನ್ನು ಮಾಡುವ ಪಕ್ಷಿಗಳ ಹಾರಾಟವನ್ನು ತಪ್ಪಿಸಲಾಗುತ್ತದೆ. ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ಆಗುವ ಐದು ನಿಮಿಷಗಳಿಗೆ ಮುಂಚಿತವಾಗಿ ಈ ರೀತಿ ಪಟಾಕಿ ಸಿಡಿಸಿ ಹಕ್ಕಿಗಳನ್ನು ಓಡಿಸಲಾಗುತ್ತದೆ.

ಇದನ್ನೂ ಓದಿ
Image
ನೀವು ಭಾವನಾತ್ಮಕ ಜೀವಿಗಳೇ, ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ
Image
ರೈಲಿನ ಮಹಿಳಾ ಕೋಚ್‌ನಲ್ಲಿ ಪ್ಯಾಂಟ್‌ ಜಿಪ್‌ ತೆರೆದು ನಿಂತ ಯುವಕ
Image
ರೀಲ್ಸ್‌ ಮಾಡಲು ಬಂದಾಕೆಗೆ ಜಾಡಿಸಿ ಒದ್ದ ಕುದುರೆ
Image
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ವಿಮಾನ ನಿಲ್ದಾಣಗಳಲ್ಲಿ ಪಕ್ಷಿಗಳ ನಿಯಂತ್ರಣಕ್ಕೆ ಅನುಸರಿಸುವ ವಿಧಾನಗಳು

ವಿಮಾನ ನಿಲ್ದಾಣದ ಅಕ್ಕ ಪಕ್ಕದಲ್ಲಿ ಪಕ್ಷಿಗಳಿಗೆ ಆಕರ್ಷಕವಲ್ಲದ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿರುತ್ತದೆ. ಹಿನ್ನಲೆಯಲ್ಲಿ ಹುಲ್ಲು ಸೇರಿದಂತೆ ಮರ ಗಿಡಗಳನ್ನು ಬೆಳೆಯಲು ಅವಕಾಶ ಮಾಡಿಕೊಡುವುದಿಲ್ಲ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ, ನೀರು ಅಥವಾ ವಸತಿ ಸೌಕರ್ಯಗಳನ್ನು ಕಡಿಮೆ ಮಾಡಲಾಗುತ್ತದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಮತ್ತು ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಪಕ್ಷಿಗಳನ್ನು ಆಕರ್ಷಿಸುವುದನ್ನು ತಡೆಯಲಾಗುತ್ತದೆ. ಈ ರೀತಿಯ ವಿಧಾನವನ್ನು ಅನುಸರಿಸುವ ಮೂಲಕ ಪಕ್ಷಿಗಳು ವಿಮಾನ ನಿಲ್ದಾಣದ ಪ್ರದೇಶಕ್ಕೆ ಬರದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ :Video: ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ ನೋಡಿ

ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಆಗುವ ಅನಾಹುತವೇನು?

ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಪ್ ಹಾಗೂ ಲ್ಯಾಂಡಿಂಗ್ ವೇಳೆ ಹಕ್ಕಿಗಳ ಹಾರಾಟವನ್ನು ತಪ್ಪಿಸುವುದು ಬಹಳ ಮುಖ್ಯವಾಗಿರುತ್ತದೆ. ಲ್ಯಾಂಡಿಂಗ್ ಸಮಯದಲ್ಲಿ ವಿಮಾನಗಳು 0-3000 ಅಡಿ ಎತ್ತರದಲ್ಲಿರುವ ಕಾರಣ ಹಕ್ಕಿಗಳ ಹಾರಾಟವಿದ್ದರೆ ಈ ವಿಮಾನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯೇ ಹೆಚ್ಚು ಎನ್ನಬಹುದು. ಒಂದು ವೇಳೆ  ಡಿಕ್ಕಿ ಹೊಡೆದರೆ ವಿಮಾನದ ಎಂಜಿನ್, ರೆಕ್ಕೆಗಳು ಹಾಗೂ ವಿಂಡ್ ಶೀಲ್ಡ್ ಗೆ ಹಾನಿಯಾಗಬಹುದು. ಅಪಘಾತಗಳು ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Mon, 16 June 25

Follow Us
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್