ಸೈಟ್ ಮಾರಿದ 19 ವರ್ಷಗಳ ಬಳಿಕ ಪರಿಹಾರ ಬೇಕೆಂದು ಖರೀದಿದಾರರ ಬಳಿ ಪಟ್ಟು ಹಿಡಿದ ಬೆಂಗಳೂರಿನ ಮಹಿಳೆ
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಬಳಕೆದಾರರು ತಮ್ಮ ಸುಖ-ದುಃಖಗಳಿಗೆ ಸಂಬಂಧಪಟ್ಟ ಇಂಟರೆಸ್ಟಿಂಗ್ ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಬಳಕೆದಾರರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದು, ನನ್ನ ತಂದೆ 2006 ರಲ್ಲಿ ಬೆಂಗಳೂರಿನಲ್ಲಿ ಒಂದು ಜಮೀನು ಖರೀದಿಸಿದ್ದರು, ಇದೀಗ ಮಾರಾಟಗಾರನ ಮಗಳು ತನಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಜಮೀನು, ಆಸ್ತಿಗಳಿಗೆ (Property) ಸಂಬಂಧಪಟ್ಟ ವ್ಯಾಜ್ಯಗಳು ನಡೆಯುತ್ತಲೇ ಇರುತ್ತವೆ. ಜಮೀನುಗಳ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ಹಲವಾರು ಪ್ರಕರಣಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 2006 ರಲ್ಲಿ ವ್ಯಕ್ತಿಯೊಬ್ಬರು ಮಗಳ ಮದುವೆಯ ಸಲುವಾಗಿ ಬೆಂಗಳೂರಿನಲ್ಲಿದ್ದ (Bengaluru) ಸೈಟ್ ಒಂದನ್ನು ಮಾರಾಟ ಮಾಡಿದ್ದರು. ಇದೀಗ ಅದೇ ಮಗಳು ನನ್ನ ಒಪ್ಪಿಗೆ ಇಲ್ಲದೆ ಆಸ್ತಿಯನ್ನು ಮಾರಾಟ ಮಾಡಲಾಗಿದೆ, ನನಗೆ ಪರಿಹಾರ ಬೇಕೆಂದು ಖರೀದಿದಾರರ ಬೆನ್ನು ಬಿದ್ದಿದ್ದಾರೆ. ಈ ವಿಚಿತ್ರ ಪ್ರಕರಣದ ಕಥೆಯನ್ನು ಸೈಟ್ ಖರೀದಿದಾರರ ಮಗ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪರಿಹಾರ ಬೇಕೆಂದು ಖರೀದಿದಾರರ ಬೆನ್ನುಬಿದ್ದ ಅದೇ ಮಹಿಳೆ:
ನನ್ನ ತಂದೆ 2006 ರಲ್ಲಿ ಬೆಂಗಳೂರಿನಲ್ಲಿ ಒಂದು ಖರೀದಿಸಿದ್ದರು. ಈಗ ಮಾರಾಟಗಾರನ ಮಗಳು ನಮಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆ ಮಹಿಳೆಯ ಮದುವೆಯ ಸಲುವಾಗಿ 2006 ರಲ್ಲಿ ಆಕೆಯ ತಂದೆ ಸೈಟ್ ಮಾರಿದರು. ಅದನ್ನು ನನ್ನ ತಂದೆ ಖರೀದಿ ಮಾಡಿದ್ರು. ಆದ್ರೆ ಈಗ ಆ ಮಹಿಳೆ, ನನ್ನ ಒಪ್ಪಿಗೆಯಿಲ್ಲದೆ ಜಮೀನು ಮಾರಾಟ ಮಾಡಿದ್ದಾರೆ. ಹಾಗಾಗಿ ನನಗೆ ನ್ಯಾಯಯುತ ಪರಿಹಾರ ಬೇಕೆಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಖರೀದಿದಾರರ ಮಗ ತಮ್ಮ ಅನುಭವವನ್ನು ರೆಡ್ಡಿಟ್‌ನಲ್ಲಿ (HelpfulManagement929) ಹಂಚಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Purchased a plot of land in Bangalore in 2006. Now the seller’s daughter is demanding compensation. byu/HelpfulManagement929 inLegalAdviceIndia
ಈ ಆಸ್ತಿ ಬಿಬಿಎಂಪಿ ಮಿತಿಯಲ್ಲಿದ್ದು, ಮಾರಾಟಗಾರರೇ ಆ ಆಸ್ತಿಯನ್ನು ನೇರವಾಗಿ ನಮಗೆ ಮಾರಾಟ ಮಾಡಿದ್ದಾರೆ. ಮತ್ತು ಇದು ಯಾವುದೇ ಪವರ್ ಆಫ್ ಅಟಾರ್ನಿ ಒಳಗೊಂಡಿರಲಿಲ್ಲ. ಸೈಟ್ ಖರೀದಿ ಮಾಡಿದ ಬಳಿಕ ನಾವು ನಿಯಮಿತವಾಗಿ ತೆರಿಗೆ ಪಾವತಿ ಮಾಡುತ್ತಾ ಬಂದಿದ್ದೇವೆ ಎಂದು ಅವರು ಹೇಳಿದ್ಧಾರೆ.
ʼಕಳೆದ ಕೆಲವು ದಿನಗಳಿಂದ ಮಾರಾಟಗಾರನ ಮಗ ತನ್ನ ಸಹೋದರಿಯೊಂದಿಗೆ ಸ್ವಲ್ಪ ಮೊತ್ತವನ್ನು ಕೇಳುವ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ಕೇಳುತ್ತಿದ್ದಾರೆ. ಆದರೆ ನಾನು ನನ್ನ ವಕೀಲರೊಂದಿಗೆ ಮಾತನಾಡಿದ್ದು, ಅವರು ಈ ಬಗ್ಗೆ ಕಾನೂನುಬದ್ಧವಾಗಿ ಮುಂದುವರಿಯುವುದೇ ಸೂಕ್ತ ಎಂದು ಹೇಳಿದ್ದಾರೆ ಅಂತ ಖರೀದಿದಾರರ ಮಗ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ಇಷ್ಟೊಂದು ದುಬಾರಿನಾ, ಈತ ಕಟ್ಟುವ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!
ಜೂನ್ 19 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಯಾವುದೇ ಕಾರಣಕ್ಕೂ ನೀವು ನೀವೇ ಇತ್ಯರ್ಥ ಮಾಡಬೇಡಿ, ಕಾನೂನು ರೀತಿಯಲ್ಲೇ ನೀವು ಹೋರಾಡಿʼ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೆಂಗಳೂರಿನಲ್ಲಿ ಈಗ ಇದೊಂದು ಹಗರಣವಾಗಿದೆ, ಆನೇಕಲ್‌ನಲ್ಲಿರುವ ನನ್ನ ಸ್ನೇಹಿತ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾನೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ