Video: ದೈತ್ಯ ಮೊಸಳೆಯ ಬಾಲ ಹಿಡಿದು ವ್ಯಕ್ತಿಯ ಹುಚ್ಚಾಟ; ಸಾವಿನೊಂದಿಗೆ ಸರಸ ಅಂದ್ರೆ ಇದೇ ಇರ್ಬೇಕು ನೋಡಿ
ಕಾಡು ಪ್ರಾಣಿಗಳಾದ ಹುಲಿ ಸಿಂಹಗಳಿಗೆ ಹೆದರುವಂತೆ, ಜನ ಮೊಸಳೆಯನ್ನು ಕಂಡರೂ ಸಿಕ್ಕಾಪಟ್ಟೆ ಭಯಗೊಳ್ಳುತ್ತಾರೆ. ಕೆಲವರಂತೂ ಈ ಸರೀಸೃಪ ಕಣ್ಣ ಮುಂದೆ ಬಂದ್ರೆ ಎದ್ನೋ ಬಿದ್ನೋ ಅಂತ ಓಡಿ ಹೋಗ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಭಂಡ ಧೈರ್ಯದಿಂದ ದೈತ್ಯ ಮೊಸಳೆಯ ಬಾಲ ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಈ ದೃಶ್ಯ ಸಖತ್ ವೈರಲ್ ಆಗುತ್ತಿದ್ದು, ಸಾವಿನೊಂದಿಗೆ ಸರಸ ಅಂದ್ರೆ ಇದೇ ಇರ್ಬೇಕು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.

ಹುಲಿ, ಸಿಂಹಗಳಂತೆ ಮೊಸಳೆಗಳು (crocodiles) ಎಷ್ಟು ಅಪಾಯಕಾರಿ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಮನುಷ್ಯರು ಬಿಡಿ ಪ್ರಾಣಿ-ಪಕ್ಷಿಗಳು ಕೂಡಾ ಅದರ ಪಕ್ಕ ಹೋಗಲು ಭಯಪಟ್ಟುಕೊಳ್ಳುತ್ತವೆ. ಅಷ್ಟೂ ಅಪಾಯಕಾರಿಯಾಗಿರುತ್ತವೆ ಈ ಜೀವಿಗಳು. ಇನ್ನು ಈ ಮೊಸಳೆಗಳು ಮನುಷ್ಯನನ್ನೇ ಜೀವಂತವಾಗಿ ತಿಂದು ಹಾಕಿದ ಅದೆಷ್ಟೋ ಉದಾಹರಣೆಗಳಿದೆ. ಅದಕ್ಕಾಗಿಯೇ ಇದ್ರ ಹತ್ತಿರ ಸುಳಿಯಲು ಕೂಡಾ ಜನ ಹೆದರುತ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ದೈತ್ಯ ಮೊಸಳೆಗಳಿದ್ದ ಕೊಳಕ್ಕೆ ಇಳಿದು, ಭಂಡ ಧೈರ್ಯದಿಂದ ಮೊಸಳೆಯ ಬಾಲವನ್ನು (crocodile tail) ಹಿಡಿದು ಎಳೆದು ಕಿತಾಪತಿ ಮಾಡಿದ್ದಾನೆ. ಈತನ ಈ ಹುಚ್ಚಾಟದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದೈತ್ಯ ಮೊಸಳೆಯ ಬಾಲ ಹಿಡಿದು ಎಳೆದ ವ್ಯಕ್ತಿ:
ಹಾವು, ಮೊಸಳೆ, ಚಿರತೆ ಇತ್ಯಾದಿ ಅಪಾಯಕಾರಿ ಜೀವಿಗಳೊಂದಿಗೆ ಸರಸವಾಡುವ ಮೂಲಕವೇ ಸಿಕ್ಕಾಪಟ್ಟೆ ಹೆಸರು ಮಾಡಿರುವ ಮೈಕ್ ಹೋಲ್ಸ್ಟನ್ ಎಂಬಾತ ಇದೀಗ ದೈತ್ಯ ಮೊಸಳೆಯ ಬಾಲ ಹಿಡಿದು ಎಳೆಯುವ ಮೂಲಕ ಸುದ್ದಿಯಲ್ಲಿದ್ದಾನೆ. ಹೌದು ಈತ ದೈತ್ಯ ಮೊಸಳೆಗಳಿದ್ದ ಕೊಳದೊಳಗೆ ಇಳಿದು ಮೊಸಳೆಯ ಬಾಲ ಹಿಡಿದು ಎಳೆದಾಡಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವನ್ನು ಮೈಕ್ ಹೋಲ್ಸ್ಟನ್ (therealtarzann) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊಸಳೆಗಳಿದ್ದ ಕೊಳದೊಳಗೆ ಬಂದ ಹೋಲ್ಸ್ಟನ್, ಅಲ್ಲಿದ್ದ ದೈತ್ಯ ಮೊಸಳೆಯೊಂದರ ಬಾಲವನ್ನು ಹಿಡಿದು ಎಳೆಯುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಮೊಸಳೆ ಮರಿ ಎಷ್ಟು ಚಾಲಾಕಿ! ಹೇಗೆ ಪಲ್ಟಿ ಹೊಡೆದು ಬೇಟೆ ಆಡ್ತು ನೋಡಿ
ಜೂನ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಈ ವಿಡಿಯೋಗೆ ಹಲವಾರು ಕಾಮೆಂಟ್ಸ್‌ಗಳು ಬಂದಿವೆ. ಒಬ್ಬ ಬಳಕೆದಾರರು ʼನೀವು ನಿಮ್ಮ ಜೀವದ ಜೊತೆ ಆಟವಾಡುತ್ತಿದ್ದೀರಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಈ ದೃಶ್ಯ ತುಂಬಾನೇ ಭಯಾನಕವಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಒಂದು ಬಾರಿ ನನ್ನ ಹೃದಯವೇ ನಿಂತು ಹೋದಂತಾಯಿತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ