Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಬಲ್ಲಿರಾ?
ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಈ ಒಗಟಿನ ಚಿತ್ರಗಳು ಟೈಮ್ ಪಾಸ್ ಮಾತ್ರವಲ್ಲ, ಮೆದುಳು ಹಾಗೂ ಕಣ್ಣಿಗೆ ಕೆಲಸ ಕೊಡುತ್ತದೆ. ಜೊತೆಗೆ ನೀವೆಷ್ಟು ಶಾರ್ಪ್ ಇದ್ದೀರಾ ಎಂದು ತಿಳಿದುಕೊಳ್ಳಲು ಸಹಾಯಕವಾಗಿದೆ. ಇದೀಗ ಅಂತಹದ್ದೇ ಕಠಿಣ ಸವಾಲಿನ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಹುಲ್ಲಿನ ನಡುವೆ ಅಡಗಿರುವ ಕಪ್ಪೆಯನ್ನು ನೀವು ಗುರುತಿಸಬೇಕು. ಆದರೆ ಈ ಕಪ್ಪೆಯನ್ನು ಹುಡುಕಲು ನಿಮಗಿರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ, ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ.

ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳಲ್ಲಿನ ಒಗಟುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಇನ್ನು ಕೆಲವರಿಗೆ ಕಷ್ಟ. ಈ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಆದರೆ ಈ ಚಿತ್ರಗಳಿಂದಲೇ ಯೋಚನಾ ಸಾಮರ್ಥ್ಯ, ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಬಹುದು. ಕೆಲವೊಮ್ಮೆ ಈ ರೀತಿಯ ಒಗಟುಗಳು ಟ್ರಿಕ್ಕಿಯಾಗಿದ್ದರೂ ಅದನ್ನು ಬಿಡಿಸುವ ಮಜಾನೇ ಬೇರೆ. ನೀವು ಕೂಡ ಇಂತಹ ಒಗಟಿನ ಆಟವನ್ನು ಇಷ್ಟ ಪಡುತ್ತಿದ್ದರೆ , ಇದೀಗ ಕಠಿಣ ಸವಾಲಿನ ಫೋಟೋವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದ್ದು, ಈ ಹಚ್ಚ ಹಸಿರಿನ ಹುಲ್ಲಿನ ನಡುವೆ ಕಪ್ಪೆಯೊಂದು (\frog) ಅಡಗಿದ್ದು ಅದನ್ನು ನೀವು ಹುಡುಕಬೇಕು. ನೀವು ಈ ಸವಾಲನ್ನು ಸ್ವೀಕರಿಸಿದ್ದರೆ ಈಗಲೇ ಈ ಒಗಟಿನ ಆಟದಲ್ಲಿ ಮುಂದುವರೆಯಿರಿ.
ಈ ಚಿತ್ರದಲ್ಲಿ ಏನಿದೆ? ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋವನ್ನು ಮೊದಲ ಬಾರಿಗೆ ಗಮನಿಸಿದಾಗ ಹಚ್ಚಹಸಿರಿನ ಹುಲ್ಲು ಮಾತ್ರ ಕಾಣಿಸುತ್ತದೆ. ಆದರೆ ಈ ಹುಲ್ಲಿನ ನಡುವೆ ಕಪ್ಪೆಯೊಂದು ಅಡಗಿದೆ. ನೀವು ಬಹಳ ಎಚ್ಚರಿಕೆಯಿಂದ ಈ ಚಿತ್ರವನ್ನು ಗಮನಿಸಿದರೆ ಮಾತ್ರ ನೀವು ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಸಾಧ್ಯ. ಆದರೆ ಈ ಕಪ್ಪೆಯನ್ನು ಕಂಡುಹಿಡಿಯಲು ನಿಮಗೆ ಇರುವುದು ಹತ್ತು ಸೆಕೆಂಡುಗಳು ಮಾತ್ರ. ಪ್ರಾರಂಭದಲ್ಲಿ ನಿಮಗೆ ಈ ಒಗಟು ಬಿಡಿಸುವುದು ಕಷ್ಟಕರ ಎಂದೆನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಉತ್ತರ ಸುಲಭದಾಯಕವಾಗಿದೆ.
ಉತ್ತರ ಇಲ್ಲಿದೆ
ನಿರ್ದಿಷ್ಟ ಸಮಯದೊಳಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಉತ್ತರವನ್ನು ನಾವು ಹೇಳುತ್ತೇವೆ. ಈ ಚಿತ್ರದಲ್ಲಿ ಉತ್ತರಕ್ಕೆ ಕೆಂಪು ವೃತ್ತ ಹಾಕಲಾಗಿದ್ದು, ಅದುವೇ ಕಪ್ಪೆಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ