AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion : ಬಟ್ಟೆ, ಕುದುರೆ : ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ವೈರಲ್ ಆಗುತ್ತಲೇ ಇರುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದು ಒಗಟನ್ನು ಬಿಡಿಸುವಂತಿದ್ದರೆ, ಇನ್ನು ಕೆಲವು ವ್ಯಕ್ತಿತ್ವವನ್ನು ಬಹಿರಂಗಪಡಿಸುವಂತಹದ್ದಾಗಿರುತ್ತದೆ. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವುದು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಚಿತ್ರದಲ್ಲಿ ಕುದುರೆ ಹಾಗೂ ಬಟ್ಟೆಯಿದ್ದು, ಈ ಎರಡರಲ್ಲಿ ನಿಮಗೆ ಮೊದಲು ಯವುದು ಕಾಣಿಸಿತು ಎಂಬುದರ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ಕಂಡುಕೊಳ್ಳಿ.

Optical Illusion : ಬಟ್ಟೆ, ಕುದುರೆ : ಈ ಚಿತ್ರದಲ್ಲಿ ನಿಮಗೆ ಮೊದಲು  ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಆಪ್ಟಿಕಲ್‌ ಇಲ್ಯೂಷನ್‌
ಸಾಯಿನಂದಾ
|

Updated on: Jun 18, 2025 | 10:46 AM

Share

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್ ಗೆ ಸಂಬಂಧಿತ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದರೆ ಎಲ್ಲರೂ ಕುತೂಹಲದಿಂದ ಕಣ್ಣಾಯಿಸುತ್ತಾರೆ. ಹೌದು, ಈ ಫೋಟೋಗಳು ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವುದು ಮಾತ್ರವಲ್ಲ, ಕಣ್ಣಿನ ಸೂಕ್ಷ್ಮತೆ ಹಾಗೂ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಅದರೊಂದಿಗೆ ಕೆಲವೊಂದು ಚಿತ್ರಗಳು ನಮ್ಮ ವ್ಯಕ್ತಿತ್ವ (Personality) ವನ್ನು ಬಹಿರಂಗ ಪಡಿಸುತ್ತದೆ. ಇದೀಗ ಆಪ್ಟಿಕಲ್‌ ಇಲ್ಯೂಷನ್‌ ಫೋಟೋವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಕುದುರೆ ಹಾಗೂ ಬಟ್ಟೆಯಿದೆ, ಇದರಲ್ಲಿ ನೀವು ಮೊದಲು ಗುರುತಿಸಿದ್ದೇನು ಎನ್ನುವುದರ ಆಧಾರದ ಮೇಲೆ ನಿಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೇಗಿದೆ ಎಂದು ಪರೀಕ್ಷಿಸಿಕೊಳ್ಳಬಹುದು.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ವ್ಯಕ್ತಿತ್ವ ತಿಳಿಯಿರಿ

ಮೊದಲು ಕುದುರೆಯನ್ನು ನೋಡಿದರೆ : ಪ್ರಾಯೋಗಿಕವಾಗಿ ಯೋಚಿಸುವ ಹಾಗೂ ಸ್ವಾವಲಂಬಿ ವ್ಯಕ್ತಿಗಳು ಇವರು. ತಮ್ಮ ಯಾವುದೇ ಕೆಲಸ ಕಾರ್ಯಗಳಿಗೂ ಇತರರನ್ನು ಅವಲಂಬಿಸಿರುವುದಿಲ್ಲ. ಜೀವನದ ಸವಾಲುಗಳು ಸುಲಭವಾಗಿ ಸ್ವೀಕರಿಸುತ್ತಾರೆ. ಇತರರ ಬಗ್ಗೆ ಕಾಳಜಿ ವಹಿಸುವ ಗುಣ ಹಾಗೂ ಕಷ್ಟಕ್ಕೆ ಮಿಡಿಯುವ ಮೂಲಕ ಸಹಾಯಕ್ಕೆ ಸದಾ ಮುಂದೆ ಇರುತ್ತಾರೆ. ಆದರೆ ಸಹಾಯ ಮಾಡುವ ಗುಣವು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇವರನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ಎಲ್ಲರ ಮುಂದೆ ಇವರನ್ನು ದುರ್ಬಲರಂತೆ ಬಿಂಬಿಸುತ್ತದೆ. ಎಲ್ಲರನ್ನು ಕಣ್ಣುಮುಚ್ಚಿ ನಂಬುವ ಸ್ವಭಾವವೇ ಮೋಸಹೋಗುವಂತೆ ಮಾಡುತ್ತದೆ. ನಿರಾಶಾವಾದಿಗಳಾಗಿದ್ದು, ತಮ್ಮ ಇತಿಮಿತಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ
Image
ಈ ಕೊಳದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?
Image
ನೀವು ಭಾವನಾತ್ಮಕ ಜೀವಿಗಳೇ, ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ
Image
ಈ ಚಿತ್ರದಲ್ಲಿ ಬಾಲವಿಲ್ಲದ ಕುದುರೆ ಎಲ್ಲಿದೆ ಎಂದು ಹೇಳಬಲ್ಲಿರಾ?
Image
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ

ಇದನ್ನೂ ಓದಿ : Optical Illusion: ಈ ಕೊಳದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?

ಮೊದಲು ಬಟ್ಟೆಯನ್ನು ನೋಡಿದರೆ : ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ಬಟ್ಟೆಯನ್ನು ಗುರುತಿಸಿದರೆ ಈ ವ್ಯಕ್ತಿಗಳು ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸುತ್ತಾರೆ. ನಿರಾಳವಾದ ಮನೋಭಾವವೇ ಬದುಕಿನ ದೊಡ್ಡ ದೊಡ್ಡ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳುವಂತೆ ಮಾಡುತ್ತದೆ. ಯಾವುದಕ್ಕೂ ಹಿಂಜರಿಯದ ಸಕಾರಾತ್ಮಕ ಹಾಗೂ ಆಶಾವಾದಿ ವ್ಯಕ್ತಿಗಳು ಇವರು. ತಮ್ಮ ಕಾಳಜಿಯುಳ್ಳ ಸ್ವಭಾವ ಹಾಗೂ ಪ್ರಕಾಶಮಾನವಾದ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಈ ವ್ಯಕ್ತಿತ್ವವೇ ಎಲ್ಲರನ್ನು ಇವರತ್ತ ಆಕರ್ಷಿಸುತ್ತದೆ. ಪ್ರಸ್ತುತ ಜೀವನದ ಬಗ್ಗೆ ಹೆಚ್ಚು ಚಿಂತಿಸುವ ವ್ಯಕ್ತಿಗಳಾಗಿದ್ದು, ಇದುವೇ ಹೆಚ್ಚು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ