ತಂದೆ ಅರ್ಧ ಸೇದಿ ಎಸೆದ ಬೀಡಿ ನುಂಗಿ ಕಂದಮ್ಮ ಸಾವು, ಪತಿಯ ವಿರುದ್ಧ ಪತ್ನಿ ದೂರು
ಚಿಕ್ಕ ಮಕ್ಕಳೇ ಹಾಗೆ, ಕೈಗೆ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಚಿಕ್ಕ ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಕಾಳಜಿ ವಹಿಸಿದರೂ ಸಾಲದು. ಆದರೆ ಇಲ್ಲೊಬ್ಬ ತಂದೆಯೂ ಮಾಡಿದ ಎಡವಟ್ಟಿನಿಂದ ಮಗುವಿನ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ತಂದೆಯೂ ಅರ್ಧ ಸೇದಿ ಎಸೆದ ಬೀಡಿ ತುಂಡನ್ನು ಹತ್ತು ತಿಂಗಳ ಮಗುವು ನುಂಗಿದೆ. ಹಾಗಾದ್ರೆ ಈ ಘಟನೆಯೂ ನಡೆದಿದ್ದು ಎಲ್ಲಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಂಗಳೂರು, ಜೂನ್ 7: ಚಿಕ್ಕ ಮಕ್ಕಳ (little kids)ನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಹೌದು ಪುಟಾಣಿ ಮಕ್ಕಳ ಮೇಲೆ ಎಷ್ಟು ಕಣ್ಣಿಟ್ಟರೂ ಸಾಲದು. ಸ್ವಲ್ಪ ಯಾಮಾರಿದ್ರೂ ಕೈಗೆ ಸಿಕ್ಕದೆಲ್ಲವನ್ನು ಬಾಯಿಗೆ ಹಾಕಿಕೊಳ್ಳುತ್ತವೆ. ಈ ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿ ಸಾವನ್ನಪ್ಪಿದ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇದೀಗ ತಂದೆ ಅರ್ಧ ಸೇದಿ ಎಸೆದ ಬೀಡಿಯನ್ನು ನುಂಗಿ ಹತ್ತು ತಿಂಗಳ ಕಂದಮ್ಮ ಮೃತಪಟ್ಟಿರುವ ಘಟನೆಯೂ ಮಂಗಳೂರಿನ ಅಡ್ಯಾರ್ (Adyar of Mangaluru) ನಲ್ಲಿ ನಡೆದಿದೆ.
ಮಗುವೊಂದು ತಂದೆ ಸೇದಿ ಎಸೆದಿದ್ದ ಬೀಡಿಯನ್ನು ನುಂಗಿದ್ದು, ಅಸ್ವಸ್ಥಗೊಂಡಿದ್ದ ಮಗುವನ್ನು ಆ ಕೂಡಲೇ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶನಿವಾರ ಮಧ್ಯಾಹ್ನ 1.25 ರ ವೇಳೆಗೆ ಈ ಘಟನೆ ನಡೆಸಿದ್ದು, ಭಾನುವಾರ ಬೆಳಗ್ಗೆ 10-25 ರ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದೆ ಎಂದು ತಿಳಿದು ಬಂದಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಹತ್ತು ತಿಂಗಳ ಮಗು ಅನೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ತಂದೆಯ ಎಡವಟ್ಟು ಮಗುವಿನ ಪ್ರಾಣಕ್ಕೆ ಕುತ್ತು ತಂದಿದೆ.
ಇದನ್ನೂ ಓದಿ : ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್, ಬಿಸಿ ಮುಟ್ಟಿಸಿದ ಪೊಲೀಸರು
ತನ್ನ ಗಂಡ ಬೀಡಿ ಸೇದಿ, ಮನೆಯಲ್ಲಿ ಅಲ್ಲಲ್ಲಿ ಬಿಸಾಾಡುತ್ತಿದ್ದರು. ಅದನ್ನು ತೆಗೆದು ಕಸದ ಬುಟ್ಟಿಗೆ ಹಾಕಿ ಎಂದು ಹೇಳಿದರೂ ನನ್ನ ಮಾತು ಕೇಳುತ್ತಿರಲಿಲ್ಲ. ಆದರೆ ಇದೀಗ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ನುಂಗಿ ಮಗುವು ಸಾವಿಗೀಡಾಗಿದೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮಗುವಿನ ತಾಯಿ ಲಕ್ಷ್ಮಿದೇವಿ ಮಂಗಳೂರು ಠಾಣೆಯಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








