ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್, ಬಿಸಿ ಮುಟ್ಟಿಸಿದ ಪೊಲೀಸರು
ಇತ್ತೀಚೆಗಿನ ದಿನಗಳಲ್ಲಿ ಯುವಕ ಯುವತಿಯರು ಪಬ್ಲಿಕ್‌ನಲ್ಲಿ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಅದರಲ್ಲಿ ಈ ಬೈಕ್ ಚಲಾಯಿಸುತ್ತಿರುವಾಗಲೇ ರೊಮ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಮುಜುಗರ ತರುವುದು ಮಾತ್ರವಲ್ಲ, ತಮ್ಮ ಪ್ರಾಣವನ್ನು ಪಣಕ್ಕೆ ಇಡುತ್ತಿದ್ದಾರೆ. ಇದೀಗ ವೈರಲ್ ವಿಡಿಯೋದಲ್ಲಿ ಯುವಕನು ಬೈಕ್ ಓಡಿಸುತ್ತಿದ್ದು ಯುವತಿಯೂ ತಬ್ಬಿಕೊಂಡು ಚುಂಬಿಸುತ್ತ ಕುಳಿತುಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಜೋಡಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸುವಂತಹ ಕೆಲಸ ಮಾಡಿದ್ದಾರೆ.

ಉತ್ತರ ಪ್ರದೇಶ, ಜೂನ್ 17: ಪ್ರೀತಿಯಲ್ಲಿ ಬಿದ್ದವರಿಗೆ ಈ ಜಗತ್ತಿನ ಪರಿಜ್ಞಾನವೇ ಇರಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಸೇರಿದಂತೆ ಎಲ್ಲೆಂದರಲ್ಲಿ ಮಿತಿಮೀರಿ ವರ್ತಿಸುವ ಮೂಲಕ ಮುಜುಗರ ತರುವುದು ಇದೆ. ಕೆಲಪ್ರೇಮಿ (couples) ಗಳು ಬಸ್ ನಿಲ್ದಾಣಗಳಲ್ಲಿ, ಮಾಲ್‌ಗಳಲ್ಲಿ ಹಾಗೂ ಬೈಕ್ ಓಡಿಸುವಾಗ ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುವ ಬೈಕ್‌ನಲ್ಲಿ ಜೋಡಿ ಹಕ್ಕಿ ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿದ್ದಾರೆ. ಉತ್ತರಪ್ರದೇಶದ ನೋಯ್ಡಾ (Noida of Uttar Pradesh) ದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
@sachingupta ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋವು ನೋಯ್ದ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಜೋಡಿಹಕ್ಕಿಗಳ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಯುವಕನು ಬೈಕ್ ಓಡಿಸುತ್ತಿದ್ದರೆ, ಯುವತಿಯೊಬ್ಬಳು ಪೆಟ್ರೋಲ್ ಟ್ಯಾಂಕ್ ಮೇಲೆ ಹಿಮ್ಮುಖವಾಗಿ ಕುಳಿತುಕೊಂಡಿದ್ದು ಯುವಕನನ್ನು ತಬ್ಬಿಕೊಂಡಿದ್ದಾಳೆ. ಇಬ್ಬರೂ ಕೂಡ ಹೆಲ್ಮೆಟ್ ಧರಿಸಿಲ್ಲ. ಯುವತಿಯು ಯುವಕನನ್ನು ತಬ್ಬಿಕೊಂಡು ಚುಂಬಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ :Video : ಈ ಕುಟುಂಬಕ್ಕೆ 56 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ, ಪುಟ್ಟ ಲಕ್ಷ್ಮಿಗೆ ಅದ್ದೂರಿ ಸ್ವಾಗತ
ಬಿಸಿ ಮುಟ್ಟಿಸಿದ ಪೊಲೀಸರು
ಈ ದೃಶ್ಯವು ಸಾರ್ವಜನಿಕರಿಗೆ ಮುಜುಗರ ತರುವಂತೆ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಜೋಡಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. ನೋಯ್ಡಾ ಸಂಚಾರಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬೈಕ್ ಸವಾರನಿಗೆ 53,500 ರೂಪಾಯಿ ದಂಡ ವಿಧಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
नोएडा पुलिस ने इस “इशकजादे” का 53500 रुपए का चालान व्हीकल एक्ट में काटकर “प्रेम पत्र” घर भिजवा दिया है !! pic.twitter.com/Dw3gqS46Z8
— Sachin Gupta (@SachinGuptaUP) June 16, 2025
ಜೂನ್ 16 ರಂದು ಶೇರ್ ಮಾಡಲಾದ ವಿಡಿಯೋವು ಈಗಾಗಲೇ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಇವರಿಗೆ ದಂಡ ವಿಧಿಸಿದರೆ ಸಾಕಾಗುವುದಿಲ್ಲ. ತಮ್ಮ ಜೀವದ ಜೊತೆಗೆ ಆಟವಾಡುವುದು ಮಾತ್ರವಲ್ಲ, ಇತರ ಪ್ರಯಾಣಿಕರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು, ಮಾನ ಮರ್ಯಾದೆ ಇಲ್ಲದವರು ಮಾತ್ರ ಈ ರೀತಿ ವರ್ತಿಸಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








