AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಬೆಂಗಳೂರಿನಲ್ಲಿ ಬಾಡಿಗೆ ಮನೆ ಇಷ್ಟೊಂದು ದುಬಾರಿನಾ, ಈತ ಕಟ್ಟುವ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

ಎಲ್ಲರೂ ಕೂಡ ತಮಗೊಂದು ಸ್ವಂತ ಸೂರು ಇರಬೇಕು ಎಂದು ಬಯಸುತ್ತಾರೆ. ಆದರೆ ದೂರದ ಊರಿನಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬರುವ ಜನರು ಉಳಿದುಕೊಳ್ಳಲು ಆಯ್ಕೆ ಮಾಡಿಕೊಳ್ಳುವುದೇ ಈ ಪಿಜಿ ಅಥವಾ ಬಾಡಿಗೆ ಮನೆಯನ್ನು. ಈ ದುಬಾರಿ ಬೆಂಗಳೂರಿನಲ್ಲಿ ತಿಂಗಳ ಬಾಡಿಗೆ ಕಟ್ಟೋದು ತುಂಬಾನೇ ಕಷ್ಟ. ಹೀಗಾಗಿ ಬಾಡಿಗೆ ಕಡಿಮೆಯಿರುವ ಮನೆಯನ್ನೇ ಹೆಚ್ಚಿನವರು ಹುಡುಕುತ್ತಾರೆ. ಆದರೆ ಬೆಂಗಳೂರಿನಲ್ಲಿರುವ ನೆಲೆಸಿರುವ ಈ ವಿದೇಶಿಗನು ಮಾತ್ರ ನೀಡುವ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ. ಹಾಗಾದ್ರೆ ಈ ಐಷಾರಾಮಿ ಬಾಡಿಗೆ ಮನೆ ಇರೋದು ಎಲ್ಲಿ? ಈತ ನೀಡುವ ಬಾಡಿಗೆಯೆಷ್ಟು ಗೊತ್ತಾ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Jun 20, 2025 | 12:36 PM

Share

ಈ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ. ಹೌದು, ಮುಂಬೈ, ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಎಷ್ಟು ದುಡಿದರೂ ಕೂಡ ಸಾಕಾಗುವುದಿಲ್ಲ. ಮನೆ ಬಾಡಿಗೆಯಿಂದ ಹಿಡಿದು ಮನೆಯ ಖರ್ಚುವೆಚ್ಚಗಳನ್ನು ಸರಿದೂಗಿಸುವುದರಲ್ಲಿ ತಿಂಗಳ ಸಂಬಳವು ಮುಗಿದೇ ಹೋಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಬಂದು ನೆಲೆಸುವ ಜನರು ಮನೆ ಸಣ್ಣದಿದ್ದರೂ ಸಮಸ್ಯೆಯಿಲ್ಲ, ಬಾಡಿಗೆ ಮಾತ್ರ ಕಡಿಮೆಯಿರಬೇಕು ಎಂದ ಬಯಸುವುದು ಸಹಜ. ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಈ ಮೆಕ್ಸಿಕನ್ (Mexican) ಮೂಲದ ವ್ಯಕ್ತಿಯೂ ಎರಡು ಗಂಟೆಗೆ ನೀಡುವ ಬಾಡಿಗೆ ಕೇಳಿದ್ರೆ, ಒಂದು ಕ್ಷಣ ಶಾಕ್ ಆಗ್ತೀರಾ. ಈತನು ನೀಡುವ ಬಾಡಿಗೆಯನ್ನು ನೀವು ವರ್ಷಪೂರ್ತಿ ದುಡಿದರೂ ಕೂಡ ನಿಮ್ಮ ಕೈಯಲ್ಲಿ ಅಷ್ಟು ಮೊತ್ತವನ್ನು ಸಂಪಾದಿಸಲು ಸಾಧ್ಯವಿಲ್ಲ. ತಾನು ಉಳಿದುಕೊಳ್ಳಲು ಈತನು ಬಾಡಿಗೆ ಮನೆಗಾಗಿ ಖರ್ಚು ಮಾಡುವ ಹಣದ ಬಗ್ಗೆ ಕೇಳಿ, ಇಷ್ಟೊಂದಾ ಎಂದು ನೀವು ಹೇಳಿದರೂ ತಪ್ಪೇನಿಲ್ಲ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬಳಕೆದಾರರು ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.

@theshashankp ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಯುವತಿಯೂ ಬೆಂಗಳೂರಿನ ಹೊರಭಾಗದಲ್ಲಿ ನೆಲೆಸಿರುವ ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬರನ್ನು ಮಾತನಾಡಿದ್ದಾಳೆ. ಈ ವ್ಯಕ್ತಿಯೂ ನಂದಿ ಹಿಲ್ಸ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ಉಳಿದುಕೊಂಡಿದ್ದು, ಈ ತಾನು ಈ ಮನೆಯಲ್ಲಿ ಉಳಿದುಕೊಳ್ಳುವ ಸಲುವಾಗಿ ನೀಡುವ ಬಾಡಿಗೆಯ ಬಗ್ಗೆ ರಿವೀಲ್ ಮಾಡಿದ್ದಾನೆ. ಬೆಂಗಳೂರಿನಲ್ಲಿ ನೆಲೆಸಿರುವ ನೀವು ಎಷ್ಟು ಬಾಡಿಗೆ ಕಟ್ಟುತ್ತೀರಾ ಎಂದು ಯುವತಿಯೂ ಕೇಳುತ್ತಿದ್ದಂತೆ, ಈ ವ್ಯಕ್ತಿಯೂ ನಾಲ್ಕು ಲಕ್ಷ ಎಂದಿದ್ದಾನೆ. ನಾನು ಮೆಕ್ಸಿಕೋದವನಾಗಿದ್ದು, ನಂದಿ ಹಿಲ್ಸ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಆ ಬಳಿಕ ಯುವತಿ ನಿಮ್ಮ ಬಾಡಿಗೆ ಮನೆಯನ್ನು ತೋರಿಸಬಹುದೇ ಎನ್ನುತ್ತಿದ್ದಂತೆಯೇ ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯನ್ನೆಲ್ಲಾ ತೋರಿಸಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.

ಇದನ್ನೂ ಓದಿ
Image
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
Image
ರಾಷ್ಟ್ರಗೀತೆಗೆ ಗೌರವ ಕೊಟ್ಟು ದೇಶಭಕ್ತಿ ಮೆರೆದ ಗೋಮಾತೆ
Image
ಮೋದಿಜಿ ನೀವು ಬೆಸ್ಟ್, ನಾನು ನಿಮ್ಮಂತಾಗಲು ಬಯಸುತ್ತೇನೆ ಎಂದ ಇಟಲಿ ಪ್ರಧಾನಿ
Image
ಇಸ್ರೇಲ್ ಇರಾನ್ ಯುದ್ಧ : ಅಮೆರಿಕದಲ್ಲಿ ಪಿಜ್ಜಾ ಆರ್ಡರ್‌ನಲ್ಲಿ ಹೆಚ್ಚಳ

ಇದನ್ನೂ ಓದಿ :Video: ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ, ಇದೇ ನೋಡಿ ನಿಜವಾದ ಸಂಸ್ಕಾರ

ಈ ವಿಡಿಯೋದಲ್ಲಿ ಈ ವ್ಯಕ್ತಿಯೂ ಈ ಮನೆಯಲ್ಲಿನ ಸವಲತ್ತುಗಳನ್ನು ತೋರಿಸಿದ್ದಾನೆ. ಹಚ್ಚಹಸಿರಿನ ವಾತಾವರಣದ ನಡುವೆ ಇರುವ ಈ ಮನೆಯು ಐಷಾರಾಮಿ ಸೌಲಭ್ಯವನ್ನು ಹೊಂದಿದೆ. ಮನೆಯೊಳಗೆ ಖಾಸಗಿ ಈಜುಕೊಳ, ಸುಂದರವಾದ ಗಾರ್ಡನ್, ವಿಶಾಲವಾದ ಲಿವಿಂಗ್ ರೂಮ್, ಆಕರ್ಷಕ ಬೆಡ್‌ರೂಮ್‌ ನೋಡಬಹುದು. ಅಷ್ಟೇ ಅಲ್ಲದೇ, ಲಿವಿಂಗ್ ರೂಮ್‌ನಲ್ಲಿರುವ ಪೀಠೋಪಕರಣಗಳನ್ನು ಮೆಕ್ಸಿಕೋದಿಂದ ತರಲಾಗಿದೆ ಎಂದು ಈ ವಿಡಿಯೋದಲ್ಲಿ ರಿವೀಲ್ ಮಾಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 1.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಐಷಾರಾಮಿ ಮನೆಯನ್ನು ನೋಡಿ ಶಾಕ್ ಆಗಿದ್ದಾರೆ. ಬಳಕೆದಾರರೊಬ್ಬರು, ಏನ್ ಹುಡುಗ್ರೋ ಏನೋ, ಅದೇ ನಾಲ್ಕು ಲಕ್ಷನಾ ಎಫ್‌ಡಿಗೆ ಹಾಕಿದ್ರೆ ಎಷ್ಟು ಬಡ್ಡಿ ಬರೋದು ಎಂದಿದ್ದಾರೆ. ಇನ್ನೊಬ್ಬರು, ಇಷ್ಟೊಂದು ಬಾಡಿಗೆ ಕಟ್ಟಲು ಆತನ ಸಂಪಾದನೆ ಅಷ್ಟೇ ದೊಡ್ಡದು ಆಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾವೆಲ್ಲಾ ಇಂತಹ ಐಷಾರಾಮಿ ಮನೆಯನ್ನು ದೂರದಿಂದಲೇ ನೋಡಿ ಖುಷಿ ಪಡ್ಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ