ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!
ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ. ಅವರಿಬ್ಬರನ್ನೂ ಗ್ರಾಮ ಪಂಚಾಯತ್ ನಿಂದ ಗಡೀಪಾರು ಮಾಡಲಾಗಿದೆ.

ರಾಂಪುರ, ಜೂನ್ 20: ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ (Rampur) ನಡೆದಿದೆ. ತನ್ನ ಸೊಸೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ವ್ಯಕ್ತಿ ಆಕೆಯೊಂದಿಗೆ ಊರಿಗೆ ಹಿಂತಿರುಗಿದಾಗ ಅವ್ಯವಸ್ಥೆ ಭುಗಿಲೆದ್ದಿತು. ಇದು ಅವನ ಮಗನೊಂದಿಗೆ ಜಗಳಕ್ಕೆ ಕಾರಣವಾಯಿತು. ತನ್ನ ಸೊಸೆಯಾಗಬೇಕಾದವಳು ಸವತಿಯಾಗಿ ಬಂದಿದ್ದನ್ನು ಕಂಡ ತಾಯಿ ತನ್ನ ಗಂಡ ಮತ್ತು ಆತನ ಹೊಸ ಹೆಂಡತಿಯ ಜೊತೆ ಜಗಳವಾಡಿ, ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದರು. ಶಕೀಲ್ ಎಂಬ ಯುವಕ ಮದುವೆಯಾಗಬೇಕಿದ್ದ ಯುವತಿಯನ್ನು ಆತನ 55 ವರ್ಷದ ತಂದೆ ಮದುವೆಯಾಗಿದ್ದಾನೆ. ಇದರಿಂದ ಜಗಳ ಹೆಚ್ಚಾಗಿ, ಕೊನೆಗೆ ಆ ಗ್ರಾಮಸ್ಥರು ಅವರಿಬ್ಬರನ್ನೂ ಗಡಿಪಾರು ಮಾಡಿದ್ದಾರೆ.
ಈ ಮದುವೆ ನವ ವಧು ಮತ್ತು ಅವಳ ಅತ್ತೆಯ ನಡುವೆ ಕೂಡ ತೀವ್ರ ಘರ್ಷಣೆಗೆ ಕಾರಣವಾಯಿತು. ಶಕೀಲ್ ಈ ಬಗ್ಗೆ ಆರೋಪಿಸಿದ್ದು, ನಾಣು ಮದುವೆಯಾಗಬೇಕಿದ್ದ ಯುವತಿಯನ್ನು ಅಪ್ಪ ಮದುವೆಯಾಗಬೇಕೆಂದುಕೊಂಡಿರುವುದು ನನ್ನ ಅಜ್ಜಿಗೂ ತಿಳಿದಿತ್ತು. ಅವರೇ ಅಪ್ಪನಿಗೆ ಮದುವೆಯಾಗಲು ಸಹಾಯ ಮಾಡಿದರು ಎಂದು ಆತ ಆರೋಪಿಸಿದ್ದಾನೆ.
ಇದನ್ನೂ ಓದಿ: Video :ಈ ಭೂಮಿಯ ಘನತೆ ಈಕೆಗೆ ಗೊತ್ತು ನೋಡಿ, ದೇಶಭಕ್ತಿ ಮೆರೆದ ಗೋಮಾತೆ
ಒಂದು ವರ್ಷದ ಹಿಂದೆ ಅಜೀಮ್ ನಗರ ಪೊಲೀಸ್ ಠಾಣೆ ಪ್ರದೇಶದ ಹುಡುಗಿಯ ಜೊತೆ ತನ್ನ ಮಗನ ಮದುವೆ ನಿಶ್ಚಯ ಮಾಡಿದ್ದ 55 ವರ್ಷದ ವ್ಯಕ್ತಿ, ತನ್ನ ಭಾವಿ ಸೊಸೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಾಗ ಕ್ರಮೇಣ ಅವಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದರು. ಅವರ ಕುಟುಂಬಗಳಿಗೆ ತಿಳಿಯದೆ ಅವರ ಸಂಬಂಧ ಪ್ರಣಯ ಸಂಬಂಧವಾಗಿ ಮಾರ್ಪಟ್ಟಿತು.
ಈ ಹಿಂದೆ ಅಲಿಗಢದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಒಬ್ಬ ವರ ಮತ್ತು ಅವನ ಭಾವಿ ಅತ್ತೆ ಓಡಿಹೋಗಿದ್ದರು. ಏಪ್ರಿಲ್ ಆರಂಭದಲ್ಲಿ ಬಿಹಾರದ ನೇಪಾಳ ಗಡಿಯ ಬಳಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ಇದನ್ನೂ ಓದಿ: ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
8 ದಿನಗಳ ಹಿಂದೆ, ಆಕೆಯ ಆರೋಗ್ಯ ಹದಗೆಟ್ಟ ಕಾರಣ ವೈದ್ಯರ ಬಳಿಗೆ ಆಕೆಯನ್ನು ಕರೆದೊಯ್ಯುವ ನೆಪದಲ್ಲಿ ಆ ವ್ಯಕ್ತಿ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಅವರು ಸಂಜೆಯಾದರೂ ವಾಪಾಸ್ ಬರಲಿಲ್ಲ. ಹುಡುಗಿಯ ಕುಟುಂಬದವರು ಬೀಗರನ್ನು ಸಂಪರ್ಕಿಸಿದಾಗ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದರು. 2 ದಿನಗಳವರೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಆಕೆಯನ್ನು ಮದುವೆಯಾಗಿ ಆ ವ್ಯಕ್ತಿ ಮನೆಗೆ ಬಂದನು. ಇದಾದ ನಂತರ ದೊಡ್ಡ ಸಂಘರ್ಷವೇ ನಡೆಯಿತು. ಬಳಿಕ ಅವರನ್ನು ಗ್ರಾಮದಿಂದ ಹೊರಗೆ ಹಾಕಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Fri, 20 June 25