ಯುವ ಸಂಗೀತ ನಿರ್ದೇಶಕನೊಟ್ಟಿಗೆ 500 ಕೋಟಿ ಆಸ್ತಿ ಒಡತಿ ಕಾವ್ಯಾ ಮದುವೆ
Kavya Maran marriage: ಐಪಿಎಲ್ ನೋಡುವವರಿಗೆ ಕಾವ್ಯಾ ಮಾರನ್ ಪರಿಚಯ ಇದ್ದೇ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ಮಾಲಕಿ ಈ ಕಾವ್ಯಾ ಮಾರನ್. ಸುಮಾರು 500 ಕೋಟಿ ಆಸ್ತಿಯ ಒಡತಿ ಕಾವ್ಯಾ ಮಾರನ್, ದಕ್ಷಿಣದ ಸ್ಟಾರ್ ಯುವ ಸಂಗೀತ ನಿರ್ದೇಶಕನೊಟ್ಟಿಗೆ ಮದುವೆ ಆಗಲಿದ್ದಾರಂತೆ. ಇಬ್ಬರೂ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಇದೆ. ಯಾರು ಆ ಅದೃಷ್ಟವಂತ?

ಕಾವ್ಯಾ ಮಾರನ್ (Kavya Maran), ಐಪಿಎಲ್ ಬಗ್ಗೆ ಆಸಕ್ತಿ ಇರುವವರಿಗೆ ಕಾವ್ಯಾ ಮಾರನ್ ಪರಿಚಯ ಇದ್ದೇ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಈಕೆ. ದೇಶದ ಬಲು ಜನಪ್ರಿಯ ಯುವ ಉದ್ಯಮಿಗಳಲ್ಲಿ ಕಾವ್ಯಾ ಮಾರನ್ ಸಹ ಒಬ್ಬರು. ಸನ್ ಗ್ರೂಪ್ಸ್ನ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿಯೇ ಈ ಕಾವ್ಯಾ ಮಾರನ್. ಇವರ ಕುಟುಂಬದ ಆಸ್ತಿ ಕೆಲವು ಸಾವಿರ ಕೋಟಿಗಳನ್ನು ದಾಟುತ್ತದೆ. ಇದೀಗ ಉದ್ಯಮಿ ಕಾವ್ಯಾ ಮಾರನ್, ದಕ್ಷಿಣ ಭಾರತದ ಜನಪ್ರಿಯ ಯುವ ಸಂಗೀತ ನಿರ್ದೇಶಕನ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.
‘ಜೈಲರ್’, ‘ವಿಕ್ರಂ’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವುದು ಮಾತ್ರವೇ ಅಲ್ಲದೆ, ಕೇವಲ ತಮ್ಮ ಸಂಗೀತದಿಂದಲೇ ಸಿನಿಮಾಗಳನ್ನು ಹಿಟ್ ಮಾಡಿಸಿರುವ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರು ಕಾವ್ಯಾ ಮಾರನ್ ಅವರನ್ನು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಮಾತುಗಳು ತುಸು ಗಟ್ಟಿಯಾಗಿಯೇ ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ, ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದ್ರನ್ ಅವರುಗಳು ಕಳೆದ ಒಂದೆರಡು ವರ್ಷದಿಂದಲೂ ಡೇಟಿಂಗ್ನಲ್ಲಿದ್ದು, ಇದೀಗ ಮದುವೆಗೆ ಮನಸ್ಸು ಮಾಡಿದ್ದಾರಂತೆ. ಅನಿರುದ್ಧ್ ರವಿಚಂದ್ರನ್ ಗೆ ಈಗ ವಯಸ್ಸು 34, ಕಾವ್ಯಾ ವಯಸ್ಸು 32. ಇಬ್ಬರದ್ದೂ ಒಳ್ಳೆಯ ಜೋಡಿ ಆಗುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ:ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ನೋಡಿ
ಇತ್ತೀಚೆಗೆ ಈ ಇಬ್ಬರೂ ಡಿನ್ನರ್ ಮಾಡಲು ಹೊರಗೆ ಹೋಗಿದ್ದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರಂತೆ. ರೆಡಿಟ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕಳೆದ ವರ್ಷ ಇವರಿಬ್ಬರು ಲಾಸ್ ವೆಗಾಸ್ನ ಕಸಿನೋನಲ್ಲಿದ್ದರು, ಬಲು ಆತ್ಮೀಯತೆ ಇಬ್ಬರ ಮಧ್ಯೆ ಇತ್ತು. ಅವರನ್ನು ನಾನು ಅಲ್ಲಿ ನೋಡಿದ್ದೇನೆ ಎಂದು ರೆಡಿಟ್ ಬಳಕೆದಾರನೊಬ್ಬ ಹೇಳಿದ್ದಾನೆ.
View this post on Instagram
ಅನಿರುದ್ದ್ ರವಿಚಂದ್ರನ್ ಬಲು ಯಶಸ್ವಿ ಸಂಗೀತ ನಿರ್ದೇಶಕ, ಕಾವ್ಯಾ ಮಾರನ್ ತಂದೆ ಕಲಾನಿಧಿ ಮಾರನ್ ನಿರ್ಮಿಸಿರುವ ‘ಜೈಲರ್’ ಸಿನಿಮಾಕ್ಕೆ ಅವರೇ ಸಂಗೀತ ನೀಡಿದ್ದರು. ಸಿನಿಮಾ ಯಶಸ್ವಿಯಾದ ಬಳಿಕ ಅನಿರುದ್ಧ್ಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿಯೂ ಕೊಟ್ಟಿದ್ದರು ಕಲಾನಿಧಿ ಮಾರನ್. ಈಗ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ‘ಜೈಲರ್ 2’ ಹಾಗೂ ಅಲ್ಲು ಅರ್ಜುನ್ ನಟಿಸಿ, ಅಟ್ಲಿ ನಿರ್ದೇಶಿಸುತ್ತಿರುವ ಸಿನಿಮಾಕ್ಕೂ ಅನಿರುದ್ಧ್ ಅವರೇ ಸಂಗೀತ ನೀಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




